Advertisements

ನಟ ಶಶಿಕುಮಾರ್ ಮಗಳ ನಿಜ ಜೀವನ ಹೇಗಿದೆ ಗೊತ್ತಾ? ಮಗಳ ಮದುವೆಯ ಸುಂದರ ಕ್ಷಣಗಳು.

Cinema

ನಮಸ್ತೆ ಸ್ನೇಹಿತರೆ, ಸುಪ್ರೀಂ ಹೀರೋ ಎಂದೇ ಖ್ಯಾತಿ ಗಳಿಸಿರುವ ಶಶಿಕುಮಾರ್  90 ರ ದಶಕದಲ್ಲಿ ಹಾಸ್ಯ ಭರಿತ ಹಾಗೂ ಕೌಟುಂಬಿಕ ಸಿನಿಮಾಗಳಿಗೆ ಅನಂತ್ ನಾಗ್ ಹಾಗು ಶಶಿಕುಮಾರ್ ಮಾತ್ರ ಸೂಕ್ತ ನಟರು ಎಂಬ ಆಯ್ಕೆಯಿತ್ತು.. ಶಶಿಕುಮಾರ್ ಕೇವಲ ನಟನೆಯಲ್ಲಿ ಮಾತ್ರವಲ್ಲದೇ ಡ್ಯಾನ್ಸ್ ನಲ್ಲೂ ಕೂಡ ಸೈ ಎನಿಸಿಕೊಂಡಿದ್ದಾರೆ. ರಾಣಿ ಮಹಾರಾಣಿ, ಮುದ್ದಿನ ಮಾವ, ಕೆಂಪಯ್ಯ ಐಪಿಎಸ್ ಇಬ್ಬರ ಹೆಂಡತಿಯರ ಮುದ್ದಿನ ಪೋಲಿಸ್, ಗಣೇಶನ ಗಲಾಟೆ ಇನ್ನೂ ಮುಂತಾದ ಹಾಸ್ಯ ಭರಿತ ಸಾಂಸಾರಿಕ ಸಿನಿಮಾಗಳಲ್ಲಿ ನಟಿಸಿದ ಶಶಿಕುಮಾರ್ ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ.. ಆದರೆ ಶಶಿಕುಮಾರ್ ಅವರ ಜೀವನದಲ್ಲಿ ಒಮ್ಮೆ ಬಿ’ರು’ಗಾಳಿಯೊಂದು ಬಂದು ಬೀಸಿ ಹೋಗುತ್ತದೆ..

[widget id=”custom_html-3″]

Advertisements

ಅದೇನೆಂದರೆ ಶಶಿಕುಮಾರ್ ಅವರಿಗೆ ಆದ ರಸ್ತೆಯ ಅ’ಪಘಾ’ತ. ಹೌದು 1998 ರಲ್ಲಿ ಶಶಿಕುಮಾರ್ ಅವರು ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ಸಮಯದಲ್ಲಿ ರಸ್ತೆಯ ಅ’ಪಘಾ’ತವಾಗುತ್ತದೆ.. ಇದರಿಂದ ಇವರ ಮುಖಕ್ಕೆ ಬಾರಿ ಹೊ’ಡೆತ ಬಿದ್ದು ಜೀವನದ ದಾರಿಯನ್ನೇ ಬದಲಾಯಿಸುತ್ತದೆ. ಇನ್ನೂ ಈ ಅಪಘಾ’ತವಾದ ನಂತರ ದಿನಗಳಲ್ಲಿ ಶಶಿಕುಮಾರ್ ಅವರು ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ.. ಕೊನೆಗೆ ಚೇತರಿಸಿಕೊಂಡ ಶಶಿಕುಮಾರ್ ಅವರು ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಹಲವು ಸಿನಿಮಾಗಳಲ್ಲಿ ನಟಿಸುತ್ತಾರೆ.. ಅಲ್ಲದೇ ರಾಜಕೀಯಕ್ಕು ಕೂಡ ಶಶಿಕುಮಾರ್ ಅವರು ಎಂಟ್ರಿಕೊಡುತ್ತಾರೆ..

[widget id=”custom_html-3″]

ಇನ್ನೂ ಶಶಿಕುಮಾರ್ ಅವರು ಸರಸ್ವತಿ ಎಂಬುವವರನ್ನು ಮದುವೆಯಾಗಿದ್ದು ಇವರಿಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ.. ಮಗ ಅಕ್ಷಿತ್ ಶಶಿಕುಮಾರ್ ಹಾಗು ಮಗಳು ಐಶ್ವರ್ಯ ಶಶಿಕುಮಾರ್. ತಂದೆಯಂತೆ ತಾನು ಕೂಡ ಹೆಸರು ಮಾಡಲು ಅಕ್ಷಿತ್ ಶಶಿಕುಮಾರ್ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.. ಇನ್ನೂ ಐಶ್ವರ್ಯ ಶಶಿಕುಮಾರ್  2019 ರಲ್ಲಿ ಸತೀಶ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಜರ್ನಲಿಸಂ ಓದಿರುವ ಐಶ್ವರ್ಯ ಅವರು ದಿನಪತ್ರಿಕೆಗಳಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿದ್ದಾರೆ.. ಇನ್ನೂ ಇವರ ಪತಿ ಸತೀಶ್ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.