Advertisements

ಶಂಕರ್ ಅಶ್ವಥ್ ಅವರ ಸುಂದರ ಕುಟುಂಬ ಹೇಗಿದೆ! ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಶಂಕರ್ ಅಶ್ವಥ್ ಅವರು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಕೆ.ಎಸ್ ಅಶ್ವಥ್ ಅವರ ಮಗ ಅವರ ಪುತ್ರ. ಕೆ.ಎಸ್ ಅಶ್ವಥ್ ಅವರು ಕನ್ನಡ ಚಿತ್ರರಂಗದಲ್ಲಿ ಯಾರು ಅಳಿಸಲಾಗದ ಶಾಶ್ವತವಾದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.. ತಮ್ಮ ಸಿನಿ ಬದುಕಿನಲ್ಲಿ ಸುಮಾರು 370 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂತಹ ಖ್ಯಾತ ನಟನ ಮಗನಾಗಿರುವ ಶಂಕರ್ ಅಶ್ವಥ್ ಅವರಿಗೆ ಮಾತ್ರ ಕನ್ನಡ ಸಿನಿಮಾ ರಂಗದಲ್ಲಿ ಹೇಳಿಕೊಳ್ಳುವ ಅವಕಾಶಗಳು ಸಿಗಲಿಲ್ಲ..

Advertisements

ಎಲ್ಲೋ ಅಲ್ಲೊಂದು ಇಲ್ಲೊಂದು ಸಿನಿಮಾ ಸೀರಿಯಲ್ ಗಳಲ್ಲಿ ಅಭಿನಯಿಸಿ ಬದುಕನ್ನು ದೂಡಿದರು. ಸಿನಿಮಾಗಲ್ಲಿ ಅವಕಾಶಗಳು ಸಿಗದೇ ಹೋದಾಗ ಊಬರ್ ಕಾರನ್ನು ಚಾಲನೆ ಕೂಡ ಮಾಡಿದ್ದಾರೆ.. ನಾನೊಬ್ಬ ದೊಡ್ಡ ನಟನ ಮಗ ಎನ್ನುವ ಅಹಂ ಇಲ್ಲದೆ ಸ್ವಾಭಿಮಾನದ ಬುದಕನ್ನು ನಡೆಸುತ್ತಿದ್ದಾರೆ. ಇನ್ನೂ ಈಗಾಗಲೇ ಬಿಗ್ ಬಾಸ್ ಸೀಸನ್ 8.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಎಲ್ಲರಿಗೂ ತಿಳಿದಂತೆ ಶಂಕರ್ ಅಶ್ವಥ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.. ಶಂಕರ್ ಅಶ್ವಥ್ ಅವರು ನಂಬರ್ ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು. ಇನ್ನೂ ಇವರ ಪತ್ನಿ ಸುದಾ ಅವರು ಮೈಸೂರಿನ ಅನ್ನಪೂರ್ಣ ಎನ್ನುವ ಕ್ಯಾಂಟಿನ್ ಅನ್ನು ನಡೆಸುತ್ತಿದ್ದಾರೆ. ಇನ್ನೂ ಇವರ ಮಗನ ಹೆಸರು ಸ್ಕಂದ.. ಇವರು ರಾಷ್ಟ್ರ ಮಟ್ಟದ ಈಜು ಸ್ಪರ್ಧಿಯಾಗಿದ್ದು ಸ್ವಿಮಿಂಗ್ ಕೋಚ್ ಆಗಿ ಮೈಸೂರು ಯುನಿವರ್ಸಿಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ.