ಸ್ನೇಹಿತರೇ, ಸಿನಿಮಾ ರಂಗದಲ್ಲಿ ಒಬ್ಬ ಸ್ಟಾರ್ ನಟನಾಗಿ ಗುರುತಿಸಿಕೊಳ್ಳಬೇಕೆಂದರೆ ತುಂಬಾ ಡೆಡಿಕೇಶನ್, ಕಮಿಟ್ಮೆಂಟ್ ಇರಲೇಬೇಕು. ಇಲ್ಲದಿದ್ದರೆ ಅಷ್ಟು ಸುಲಭವಾಗಿ ಸ್ಟಾರ್ ನಟನ ಪಟ್ಟ ಒಲಿಯುವುದಿಲ್ಲ. ಹೌದು, ಒಂದು ಕಾಲದಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಕಲಾವಿದ ತನ್ನ ಅವಿರತ ಶ್ರಮದ ಫಲವಾಗಿ ಚಿಕ್ಕಪುಟ್ಟ ಪಾತ್ರಗಳು,ಸಹನಟ, ಕಾಮಿಡಿ, ಹೀರೊ, ಈಗ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಆ ಅದ್ಭುತ ನಟನೇ ಶರಣ್. ಈಗ ಸ್ಟಾರ್ ಹೀರೋ ಆಗಿ ಈ ಹಂತಕ್ಕೆ ಬೆಳೆದಿರುವ ನಟ ಶರಣ್ ಅವರ ಕಠಿಣ ಪರಿಶ್ರಮ ಹೇಗಿತ್ತು ಅಂತ ನೀವೇ ಒಮ್ಮೆ ಊಹಿಸಿಕೊಳ್ಳಿ.

ನಟ ಶರಣ್ ಅವರು ಅಭಿನಯಿಸುವ ಯಾವ ಸಿನಿಮಾಗಳು ನಷ್ಟ ಅನುಭವಿಸುವುದಿಲ್ಲ. ನಟ ಶರಣ್ ಅವರು ಚಿತ್ರಗಳಲ್ಲಿ ಯಾವ ತರ ಕಮಾಲ್ ಮಾಡಿದ್ದಾರೆ ಎನ್ನುವುದನ್ನ ನೋಡೋದಕ್ಕೆ ಜನ ಸಿನಿಮಾಗೆ ಬರುತ್ತಾರೆ. ಡಾನ್ಸಿಂಗ್ ಬಗ್ಗೆ ಗೊತ್ತೇ ಇಲ್ಲದಂತಿದ್ದ ೪೮ ವರ್ಷದ ಶರಣ್ ಈಗ ಚೆನ್ನಾಗಿ ಡಾನ್ಸ್ ಕಲಿತು ಸಖತ್ ಪವರ್ ಫುಲ್ ಆಗಿ ಹಾಡಿಗೆ ತಂಕ್ಕಂತೆ ಡಾನ್ಸ್ ಮಾಡಿ ಕಮಾಲ್ ಮಾಡುತ್ತಾರೆ. ಇದ್ಕಕಿಂತ ಡೆಡಿಕೇಷನ್ ಬೇರೆ ಏನ್ ಬೇಕು ಹೇಳಿ. ಇನ್ನು ಶರಣ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.ಮಗನ ಹೆಸರು ಹೃದಯ್ ಎಂದು ಮಗಳ ಹೆಸರು ಪುಣ್ಯ ಎಂದು. ಶರಣ್ ಪುತ್ರಿ ಪುಣ್ಯ ಮುಗ್ದತೆಯ ವಿಚಾರದಲ್ಲಿ ತನ್ನ ತಂದೆಯನ್ನೇ ಮೀರಿಸುವಂತಿದ್ದಾಳೆ.

ಇನ್ನು ಮುಂದಿನ ವರ್ಷ ಬಿಡುಗಡೆಯಾಗಲಿರುವ ಶರಣ್ ಅಭಿನಯದ ‘ಅವತಾರ ಪುರುಷ ‘ ಚಿತ್ರದಲ್ಲಿ ಪುಣ್ಯ ಕೂಡ ನಟಿಸುವ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾಳೆ. ಇನ್ನು ಈ ಪುಟ್ಟ ಬಾಲಕಿಯ ಮುಗ್ದತೆ ಅಂತೂ ಎಂತಹವರಿಗೂ ಇಷ್ಟವಾಗದೇ ಇರಲ್ಲ. ಇನ್ನು ಒಂದು ಕಾಲದಲ್ಲಿ ತನ್ನ ಮುಗ್ದ ನಟನೆಯಿಂದಲೇ ಎಲ್ಲರನ್ನು ಮಂತ್ರಮುಗ್ದರನ್ನಾಗಿ ಮಾಡಿದ್ದ ಬಾಲನಟಿ ಬೇಬಿ ಶ್ಯಾಮಲಿಯಂತೆ ಮುಗ್ದ ಪಾತ್ರಗಳನ್ನ ನಟಿಸುವುದರ ಕಡೆ ಹೆಜ್ಜೆ ಇಟ್ಟಿದ್ದಾರೆ ಶರಣ್ ಪುತ್ರಿ ಪುಣ್ಯ.

ಒಟ್ಟಿನಲ್ಲಿ ಸಣ್ಣ ಚಿಕ್ಕಪಾತ್ರದಿಂದ ಇಂದು ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಶರಣ್ ಅವರು ಎಷ್ಟೋ ಜನರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗೋದಿಲ್ಲ. ಈಗ ಮತ್ತೆ ಶರಣ್ ಅವತಾರ ಪುರುಷ ಚಿತ್ರದ ಮೂಲಕ ತೆರೆಗೆ ಬರಲಿದ್ದು ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂಬುದನ್ನ ಕಾದುನೋಡಬೇಕಾಗಿದೆ. ನೀವು ಶರಣ್ ಅವರ ಯಾವ ಚಿತ್ರ ತುಂಬಾ ಇಷ್ಟ ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..