Advertisements

ನಟ ಶರಣ್ ಮಗಳನ್ನು ನೋಡಿದ್ದೀರಾ? ಈಕೆಯು ಕೂಡ ಬಾಲನಟಿ.. ನಟನೆಯಲ್ಲಿ ತಂದೆಯನ್ನೇ ಮೀರಿಸುತ್ತಾಳೆ.

Cinema

ನಮಸ್ತೆ ಸ್ನೇಹಿತರೆ, ನಟ ಶರಣ್ ಡೆಡಿಕೇಷನ್ ಗೆ ಮತ್ತೊಂದು ಹೆಸರು. ಒಂದು ಕಾಲದಲ್ಲಿ ನಟನೆ ಹಾಗೂ ಚಿತ್ರರಂಗದ ಸಹವಾಸ ಬೇಡ ಎಂದು ದೂರ ಇದ್ದ ನಟ ಶರಣ್ ನಂತರ ಆರ್ಕೆಸ್ಟ್ರಾ ಜೀವನ, ಸಣ್ಣ ಪುಟ್ಟ ಪಾತ್ರ, ಹಾಸ್ಯ ನಟ, ನಂತರ ಈಗ ಸ್ಟಾರ್ ಹೀರೋ.. ಈ ಹಂತಕ್ಕೆ ಬೆಳೆಯ ಬೇಕು ಅಂದರೆ ಯಾವ ರೀತಿಯ ಕಠಿಣ ಪರಿಶ್ರಮ ಬೇಕು ಎಂದು ಒತ್ತಿ ಹೇಳಬೇಕಾಗಿಲ್ಲ. ನಟ ಶರಣ್ ಹೀರೋ ಆಗಿ ಮಾಡುವ ಯಾವ ಚಿತ್ರ ಕೂಡ ನಷ್ಟ ಅನುಭವಿಸುವ ಮಾತೆ ಇಲ್ಲ. ಕಾರಣ ನಟ ಶರಣ್ ಮಾಡುವ ಕಮಾಲ್ ನೋಡುವುದಕ್ಕಾದರು ಜನರು ಸಿನಿಮಾ ನೊಡುತ್ತಾರೆ.

Advertisements

48 ವರ್ಷದ ಶರಣ್ ಡ್ಯಾನ್ಸ್ ಹಿನ್ನೆಲೆ ಇಲ್ಲದ ಶರಣ್ ದೇಹವನ್ನು ಹಿಂಡಿ ಡ್ಯಾನ್ಸ್ ಕಲಿತು ಸಖತ್ ಪವರ್ ಫುಲ್ ಡ್ಯಾನ್ಸ್ ಮಾಡಿ ಆ ಆಡು ದೇಶದ ಟಾಪ್ ಲೀಸ್ಟ್ ನಲ್ಲಿ ನಿಲ್ಲುವಂತೆ ಮಾಡಿದ್ದಾರೆ ಅಂದರೆ ಅದಕ್ಕಿಂತ ದೊಡ್ಡ ಡೆಡಿಕೇಶನ್ ಮತ್ತೊಂದು ಇರೋದಿಲ್ಲ.. ನಟ ಶರಣ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳು. ಮಗ ಹೃದಯ್ ಹಾಗು ಮಗಳು ಪುಣ್ಯ. ಮುಗ್ದತೆಯಲ್ಲಿ ಕಚಗುಳಿ ಕೊಡುವ ನಟನೆಯಲ್ಲಿ ನಡ ಶರಣ್ ಎತ್ತಿದ ಕೈ.. ಆದರೆ ಮಗಳು ಪುಣ್ಯ ಮುಗ್ದತೆಯಲ್ಲಿ ತಂದೆಯನ್ನೇ ಮೀರಿಸುವಂತಿದ್ದಾಳೆ. ಚರಣ್ ಅವರ ನಟನೆಯ ಅವತಾರ ಪುರುಷ ಚಿತ್ರದ ಮೂಲಕ ಪುಣ್ಯ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ..

ಈ ಪುಟ್ಟ ಹುಡುಗಿಯ ಮುಗ್ದತೆ ಎಲ್ಲರಿಗೂ ಇಷ್ಟವಾಗುತ್ತದೆ. ಒಂದು ಕಾಲದಲ್ಲಿ ಮುಗ್ದತೆಯನ್ನು ಹೊರ ಹೊಮ್ಮಿಸುವ ಮೂಲಕ ನಟನೆ ಮಾಡುತ್ತಿದ್ದ ಬಾಲ ನಟಿ ಬೇಬಿ ಶಾಮಿಲಿ.. ಚಿಕ್ಕ ಮಕ್ಕಳ ಚಿತ್ರಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂದು ರೀತಿ ಸಂತೋಷ. ಆ ಮುಗ್ಧ ಮಾತು ಮುಗ್ಧ ನಟನೆ ನಮ್ಮಲ್ಲಿ ಸಂತಸ ಮೂಡಿಸುತ್ತದೆ.. ಅದೇ ರೀತಿ ಸಖತ್ ಕ್ಯೂಟಾಗಿ ಇರುವ ಪುಣ್ಯ ಕೂಡ ಅಂತಹ ಪಾತ್ರಗಳನ್ನು ಮಾಡುವತ್ತ ಹೆಜ್ಜೆ ಇಟ್ಟಿದ್ದಾಳೆ. ಬಹುಶಃ ಜೀವನದಲ್ಲಿ ದೈರ್ಯ ಮತ್ತು ಶಕ್ತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಅನ್ನೋದಕ್ಕೆ ಮಾದರಿಯಾಗಿ ನಿಂತಿದ್ದಾರೆ ನಟ ಶರಣ್..