Advertisements

ನಟ ಶರಣ್ ಕಷ್ಟಪಟ್ಟು ಕಟ್ಟಿಸಿದ ಕನಸಿನ ಮನೆಯ ಗೃಹ ಪ್ರವೇಶ ಹೇಗಿತ್ತು ಗೊತ್ತಾ? ನೋಡಿ..

Cinema

ನಮಸ್ತೇ ಸ್ನೇಹಿತರೆ, ನಟ ಶರಣ್ ಅವರ ತಂದೆ ತಾಯಿ ನಾಟಕ ಕಂಪನಿಯನ್ನು ನಡೆಸುತ್ತಿದ್ದರು ಹಾಗಾಗಿ ನಟನೆ ಎಂಬುದು ಶರಣ್ ಅವರಿಗೆ ಹೊಸದೇನಲ್ಲ.. ಶರಣ್ ಅವರ ತಂಗಿ ಚಲನಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾದ ಶೃತಿ. 90 ರ ದಶಕದ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯಲ್ಲಿದ್ದ ನಟಿ ಶೃತಿ ಅಂದರೆ ತಪ್ಪಾಗುವುದಿಲ್ಲ.. ಅಣ್ಣನನ್ನ ಸಿನಿಮಾ ರಂಗಕ್ಕೆ ಕರೆತರಬೇಕೆನ್ನುವ ಆಸೆ ಶೃತಿಯವರಿಗಿತ್ತು. ಆದರೆ ಶರಣ್  ಅವರಿಗೆ ನಟನೆ ಮೇಲೆ ಅಷ್ಟೇನು ಆಸಕ್ತಿ ಇರಲಿಲ್ಲ.. ಬೇರೆ ಬೇರೆ ಕೆಲಸಗಳನ್ನು ಕೂಡ ಶರಣ್ ಅವರು ಮಾಡುತ್ತಿದ್ದರು.

Advertisements

ದೂರದರ್ಶನಲ್ಲಿ ಕೂಡ ಕೆಲಸ ಮಾಡಿದ್ದಾರೆ ನಟ ಶರಣ್ ಅವರು.. ಪ್ರೇಮ ಪ್ರೇಮ ಸಿನಿಮಾದ ಮೂಲಕ ಶರಣ್ ಅವರು ನಟನೆಗೆ ಪಾದಾರ್ಪಣೆ ಮಾಡುತ್ತಾರೆ. ನಂತರ ಶೃತಿಯವರು ನಟಿಸಿ ಎಸ್.ಮಹೇಂದರ್ ನಿರ್ದೇಶನ ಮಾಡಿದ ಯಶಸ್ಸಿನ ಸಿನಿಮಾ.. ಕರ್ಪೂರದ ಗೊಂಬೆಯಲ್ಲಿ ನಟಿಸಿದ ನಂತರ ಒಂದೆರೆಡು ವರ್ಷ ಬ್ರೇಕ್ ತೆಗೆದುಕೊಂಡು, ನಂತರ ಕನ್ನಡ ಸಿನಿಮಾಗಳಲ್ಲಿ.. ಹಾಸ್ಯ ಪಾತ್ರಗಳಲ್ಲಿ ನಟಿಸಲು ಶುರುಮಾಡುತ್ತಾರೆ.

ಕನ್ನಡ ಚಿತ್ರರಂಗದ ನಂಬರ್ ಒನ್ ಹಾಸ್ಯ ನಟ ಎಂದೇ ಖ್ಯಾತಿ ಪಡೆದರು‌.. ಕನ್ನಡದ ಬಹುತೇಕ ಎಲ್ಲಾ ಸಿನಿಮಾಗಳಲ್ಲು ಶರಣ್ ಅವರ ಕಾಮಿಡಿ ದೃಶ್ಯಗಳು ಇರುತ್ತಿತ್ತು. ಇದರ ಹಿಂದಿನ ಪರಿಶ್ರಮ ಅಷ್ಟಿಷ್ಟಲ್ಲ.. ಶರಣ್ ಅವರು ಬೆಂಗಳೂರಿನಲ್ಲಿ. ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಿದ್ದಾರೆ.. ಈ ಮನೆಯ ಗೃಹಪ್ರವೇಶಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಬಂದಿದ್ದರು. ಕಲಾವಿದರಾದ ಚಿಕ್ಕಣ್ಣ, ಶೃತಿ ಮತ್ತು ಅವರ ಮಗಳು ಇನ್ನೂ ಹಲವಾರು ಗಣ್ಯರು ಬಂದಿದ್ದರು..