Advertisements

ನಟ ಶ್ರೀಧರ್ ಅವರ ಮಗಳು ಯಾರು ಗೊತ್ತಾ? ಇವರು ಕೂಡ ತುಂಬ ಫೇಮಸ್..

Cinema

ಕನ್ನಡ ಕಂಡ ಅದ್ಭುತ ನಟರ ಪೈಕಿ ಶ್ರೀಧರ್ ಕೂಡ ಒಬ್ಬರು. ಕನ್ನಡದ ಅನೇಕಾನೇಕ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಹೃ’ದಯ ಗೆದ್ದವರು ಶ್ರೀಧರ್. ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ರು ಬಣ್ಣ ಹ’ಚ್ಚ ಬೇಕೇಂಬ ಮಹದಾಸೆಯಿಂದ ಕಲಾಬದುಕನ್ನ ಶ್ರೀಧರ್ ಆಯ್ಕೆ ಮಾಡಿಕೊಳ್ತಾರೆ. ಬಣ್ಣದ ಬದುಕಿನ ಆಗು ಹೋಗುಗಳನ್ನ ಸಾಧಕ ಬಾಧಕವನ್ನ ಶ್ರೀಧರ್​ ಅವರಿಗೆ ಕಲಿಸಿಕೊಟ್ಟಿದ್ದು, ಬೇರೆಯಾರು ಅಲ್ಲ ಕನ್ನಡ ಸಿನಿಮಾರಂಗದ ದಿಗ್ಗಜ ಪುಟ್ಟಣ್ಣ ಕಣಾಗಲ್. ಹೌದು ಪುಟ್ಟಣ್ಣ ಕಣಾಗಲ್ ಅವರ ಗರಡಿಯಲ್ಲಿ ಶ್ರೀಧರ್ ಅವರು ಬೆಳೀತಾರೆ, ಮುಂದೆ ಅಮೃತಗಳಿಗೆ ಅನ್ನೋ ಸಿನಿಮಾದ ಮುಖೇನ ಶ್ರೀಧರ್ ಕನ್ನಡ ಸಿನಿ ಪ್ರೇಮಿಗಳಿಗೆ ಪರಿಚಯ ಆಗ್ತಾರೆ. ವಿಶೇಷ ಅಂದ್ರೆ ಈ ಸಿನಿಮಾವನ್ನು ನಿರ್ದೆಶಿಸಿದ್ದು ಬೇರೆ ಯಾರು ಅಲ್ಲ ಪುಟ್ಟಣ್ಣ ಕಣಗಾಲ್ ಅವರೇ.

[widget id=”custom_html-3″]

Advertisements


ಹೀಗೆ ಶುರುವಾದ ಶ್ರೀಧರ್ ಸಿನಿಪಯಣ ಮುಂದೆಂದೂ ಹಿಂದೆ ತಿರುಗಿ ನೋಡುವಂತಾಗಲೇ ಇಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಜನ ಮೆಚ್ಚಿದ ನಾಯಕನಾದರು. ಕನ್ನಡದಲ್ಲಿ ಸರಿಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ, ಚಿತ್ರಗಳಲ್ಲಿಯೂ ಸಹ ಶ್ರೀಧರ್ ಬಣ್ಣ ಹಚ್ಚಿದ್ದಾರೆ. ಬಹುತೇಕ ಸಾಂಸರಿಕ ಸಿನಿಮಾಗಳಲ್ಲಿ ಗುರುತಿಸಿಕೊಳ್ತಿದ್ದ ಶ್ರೀಧರ್ ಅವರು ಮಹಿಳೆಯರ ನೆಚ್ಚಿನ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ..

[widget id=”custom_html-3″]


ಸಂತ ಶಿಶುನಾಳ ಸಿನಿಮಾದ ಮೂಕವಿ’ಸ್ಮಿತ ನಟನೆಗೆ ಮನಸೋತು ಇವರಿಗೆ ಉತ್ತಮ ನಟನೆಂಬ ರಾಜ್ಯಪ್ರಶಸ್ತಿ ಸಹ ಸಿಕ್ಕಿವೆ, ಸಾಕಷ್ಟು ಸನ್ಮಾನಗಳು ಪ್ರಶಸ್ತಿಗಳನ್ನು ಶ್ರೀಧರ್ ತಮ್ಮ ಮುಡುಗೇರಿಸಿಕೊಂಡಿದ್ದಾರೆ. ಕೇವಲ ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕೂಡ ಶ್ರೀಧರ್ ಸಕ್ರಿಯರಾಗಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲದೇ ನೃತ್ಯ ನಿರ್ದೆಶನದಲ್ಲಿ ಶ್ರೀಧರ್ ಮುಂದಿದ್ದು ಬಹುತೇಕ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿಕೊಟ್ಟಿದ್ದಾರೆ.

[widget id=”custom_html-3″]

ಇವರು 1991ರಲ್ಲಿ ನೃತ್ಯ ಪ್ರದರ್ಶಕರಾದ ಅನುರಾಧ ಅವರ ಜೊತೆ ದಾಂಪತ್ಯ ಜೀವನ ಆರಂಭಿಸ್ತಾರೆ. ಇವರಿಗೆ ಮುದ್ದಾದ ಒಬ್ಬಳು ಮಗಳಿದ್ದು ಅನಘ ಗೌರಿ ಆಕೆಯ ಹೆಸರು. ಅನಘ ಸಹ ಭರತನಾಟ್ಯದಲ್ಲಿ ಹೆಚ್ಚಿನ ವೇದಿಕೆ ಮೇಲೆ ಹೆಜ್ಜೆ ಹಾಕಿ ಅಪ್ಪನಂತೆ ಮಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿನಿಮಾದಲ್ಲಿಯೂ, ನೃತ್ಯದಲ್ಲಿಯೂ, ಧಾರವಾಹಿಯಲ್ಲಿಯೂ ಒಬ್ಬ ಗುರುವಾಗಿಯೂ ಸೈ ಎನಿಸಿಕೊಂಡಿರುವ ಶ್ರೀಧರ್ ಅವರ ಬಗ್ಗೆ ನೀವೇನು ಹೇಳಲಿಕ್ಕೆ ಇಷ್ಟಪಡ್ತೀರಾ..