Advertisements

ಈ ನಟನಿಗಾಗಿ ಕಟ್ಟಿದ್ದಾರೆ ದೇವಸ್ತಾನ! ಎಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸಿನಿಮಾಗಳಲ್ಲಿ ಖಳನಾಯಕನಾಗಿದ್ದರೂ. ನಿಜ ಜೀವನದಲ್ಲಿ ಹೇಗೆ ಹೀರೋ ಆಗಬೇಕು ಎಂಬುದನ್ನ ತೋರಿಸಿದವರು ನಟ ಸೋನು ಸೂದ್‌.. ಹೌದು ನಟ ಸೋನು ಸೂದ್ ಅವರಿಗೆ ಅಭಿಮಾನಿಗಳು ಆಗದವರು ಇಲ್ಲಾ ಅಂತಾನೆ ಹೇಳಬಹುದು. ಸೋನು ಸೂದ್ ಅವರ ಸಮಾಜಮುಖಿ ಕೆಲಸಕ್ಕಾಗಿ ಈಗ ದೇವಾಲಯವನ್ನು ಕಟ್ಟಿಸಲಾಗಿದೆ.. ಹೌದು ಸ್ನೇಹಿತರೆ ದೇವಾಲಯವನ್ನು ಕಟ್ಟಿ ಸೋನು ಸೂದ್ ಅವರನ್ನ ದೇವರು ಎಂದು ಪೂಜಿಸಲಾಗುತ್ತಿದೆ. ಅಷ್ಟಕ್ಕೂ ಈ ದೇವಾಲಯ ನಿರ್ಮಾಣವಾಗಿರುವುದು ಎಲ್ಲಿ ಎಂಬುದನ್ನ ನೋಡೋಣ ಬನ್ನಿ.. ಸೋನು ಸೂದ್ ಅವರು ಹಲವರ ಪಾಲಿಗೆ ದೇವರಾಗಿದ್ದಾರೆ ಅಂತಾನೆ ಹೇಳಬಹುದು.

Advertisements

ಈಗಿರುವಾಗ ಅವರ ಅಭಿಮಾನಿಗಳು ಸೂನು ಸೂದ್ ಅವರ ಪ್ರತಿಮೆಯನ್ನು ಇಟ್ಟು ದೇವಾಲಯವನ್ನು ಕಟ್ಟಿದ್ದಾರೆ.. ನಟ ಮತ್ತು ಲೋಕೋಪಕಾರಿಯಾದ ಸೋನು ಸೂದ್ ಅವರ ಮಾನವೀಯತೆಯನ್ನು ಅರಿತುಕೊಂಡು ತೆಲಂಗಾಣದ ಸಿದ್ದೀಪೇಟೆ ಎಂಬ ಗ್ರಾಮದಲ್ಲಿ ಪ್ರತಿಮೆಯನ್ನು ಇಟ್ಟು ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.. ಇನ್ನೂ ಸೋನು ಸೂದ್ ಅವರ ಸಹಾಯವನ್ನ ನೆನೆದು ಪ್ರತಿಮೆಗೆ ಪೂಜೆಯನ್ನು ಮಾಡುತ್ತಿದ್ದಾರೆ.. ಇನ್ನೂ ಸ್ಥಳೀಯ ಜನರ ಸಮ್ಮುಖದಲ್ಲಿ ದೇವಾಲಯದ ಉದ್ಘಾಟನೆಯನ್ನು ಕೂಡ ಮಾಡಲಾಗಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನ ಹಾಡುತ್ತ ಸೋನು ಸೂದ್ ಅವರ ಪ್ರತಿಮೆಗೆ ಆರತಿಯನ್ನ ಮಾಡಿದ್ದಾರೆ..

ಇನ್ನೂ ಕ’ರೋನ ಲಾಕ್ ಡೌನ್ ಸಮಯದಲ್ಲಿ ಅನೇಕರಿಗೆ ಸೋನು ಸೂದ್ ಅವರು ಸಾಕಷ್ಟು ಸಹಾಯವನ್ನು ಮಾಡಿದ್ದಾರೆ.. ಮತ್ತು ಈಗಲೂ ಕೂಡ ಮಾಡ್ತಾಯಿದ್ದಾರೆ ಅಂತ ಜಿಲ್ಲಾ ಪರಿಷತ್ತಿನ ಸಮ್ಮುಖದ ಗಿರಿಕ್ ಕೊನರ್ಲ್ ರೆಡ್ಡಿ ಉದ್ಘಾಟನಾ ವೇಳೆ ಈಗೆ ಹೇಳಿದ್ದಾರೆ. ಇನ್ನೂ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗುವುದಕ್ಕೆ ಆಗದೆ ಇದ್ದ ಸಮಯದಲ್ಲಿ ಸೋನು ಸೂದ್ ಅವರು ಬಡವರು, ನಿರ್ಗತಿಕರು ಮತ್ತು ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ನೆರವಾಗಿದ್ದರೂ.. ಮತ್ತು ಮಾನವೀಯತೆಯನ್ನ ಮೆರೆದಿದ್ದರು..

ಲಾಕ್ ಡೌನ್ ಸಮಯದಲ್ಲಿ ಮಾಡಿದಂತಹ ಈ ಒಂದು ಸಹಾಯ ಈಗ ರಿಯಲ್ ಹೀರೋ ಅನ್ನಾಗಿ ಮಾಡಿದೆ. ಮಾನವೀಯತೆಗೆ ಮತ್ತೊಂದು ಹೆಸರೇ ಸೋನು ಸೂದ್ ಎಂದು ಜನರು ಹೇಳುತ್ತಿದ್ದಾರೆ.. ಯಾವುದೇ ರೀತಿಯ ಸಮಸ್ಯೆಗಳು ಬಂದ್ರೂ ಕೂಡ ಅದನ್ನ ಬಗೆಹರಿಸುತ್ತಿದ್ದರು.. ಭಾರತದಲ್ಲಿ ಇರುವಂತಹ ಒಬ್ಬರೇ ಒಬ್ಬ ದೇವರು ಎಂದು ಜನರು ಅವರನ್ನು ಪೂಜಿಸುತ್ತಿದ್ದಾರೆ. ಈಗಾಗಿ ನಾವು ಸೋನು ಸೂದ್ ಅವರಿಗೆ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ..