Advertisements

ಹೆಂಡತಿ ಎದುರಿಗೆ ಬರಲಿಲ್ಲ ಅಂದ್ರೆ ಮನೆಯಿಂದ ಕಾಲೂ ಕೂಡ ಆಚೆ ಇಡದ ಟಾಪ್ ನಟ ಯಾರು ಗೊತ್ತಾ?

Cinema Inspire

ನಮಸ್ತೆ ಸ್ನೇಹಿತರೆ, ಹಳೆ ಕಾಲದಲ್ಲಿ ಒಂದು ಆಚಾರ ಇತ್ತು.. ಪ್ರತಿದಿನ ಗಂಡ ಮನೆಯಿಂದ ಆಚೆ ಹೋಗುವಾಗ ಅವರ ಎದುರಿಗೆ ಹೆಂಡತಿ ಬರುತ್ತಿದ್ದಳು. ಹೆಂಡತಿಯ ಮುಖ ನೋಡಿ ಆಚೆ ಹೋದರೆ.. ಆ ದಿನದ ಎಲ್ಲಾ ಕೆಲಸಗಳು ಚೆನ್ನಾಗಿ ಆಗುತ್ತದೆ ಅನ್ನುವ ಭಾವನೆ. ಆದರೆ ಈಗ ಯಾರು ಪಾಲಿಸುತ್ತಾರೆ ಹೇಳಿ.. ಆದರೆ ಒಬ್ಬ ಟಾಪ್ ನಟ ಮಾತ್ರ ಇದನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಪ್ರತಿದಿನ ಹೆಂಡತಿ ಎದುರಿಗೆ ಬರಲಿಲ್ಲ ಅಂದರೆ ಮನೆಯಿಂದ ಕಾಲು ಕೂಡ ಆಚೆ ಇಡಲ್ಲ ಈ ನಟ.. ಈ ಆಚಾರವನ್ನು ಪಾಲಿಸುತ್ತಿರುವ ನಟ ಮಾತ್ಯಾರು ಅಲ್ಲ. ಸೌತ್ ಇಂಡಿಯಾದ ಟಾಪ್ ನಟರಲ್ಲಿ ಒಬ್ಬರಾದ ವೆಂಕಟೇಶ್.. ಅವರ ಹೆಂಡತಿ ಹೆಸರು ನೀರಜಾ.

Advertisements

ವೆಂಕಟೇಶ್ ಅವರಿಗೆ ಹೆಂಡತಿ ಅಂದರೆ ಪಂಚಪ್ರಾಣ.. ಹಾಗಾಗಿಯೇ ತನ್ನ ಸಿನಿಮಾ ಜೀವನದಲ್ಲೂ ಯಾವತ್ತೂ ನಟಿಯರ ಜೊತೆ ಗಾಸಿಫ್ ಉಟ್ಟಿಕೊಳ್ಳುವ ಹಾಗೆ ವೆಂಕಟೇಶ್ ಅವರು ನಡೆದುಕೊಂಡಿಲ್ಲ. ಹೆಂಡತಿ ನೀರಜಾ ಅವರಿಗೂ ಅಷ್ಟೇ ಗಂಡ ಅಂದರೆ ದೇವರು ಇದ್ದಂತೆ.. ಬೆಳಗ್ಗೆ 5 ಗಂಟೆಗೆ ಎದ್ದೇಳುವ ನೀರಜಾ ಎಲ್ಲಾ ಪೂಜೆ ಪುನಸ್ಕಾರ ಮಾಡಿ ವೆಂಕಟೇಶ್ ಪ್ರಯಾಣಿಸುವ ಕಾರಿಗೆ ಪೂಜೆ ಮಾಡಿ.. ವೆಂಕಟೇಶ್ ಶೂಟಿಂಗ್ ಗೆ ಹೊರಡುವಾಗ ಒಂದು ದಿನ ತಪ್ಪದೇ ಅವರ ಎದುರಿಗೆ ಬರುತ್ತಾರೆ. ಹೆಂಡತಿ ಅಪ್ಪಿ ತಪ್ಪಿ ಬ್ಯುಸಿಯಾಗಿದ್ದರೆ ಅವರಿಗಾಗಿ ಕಾಯುತ್ತಾರೆ ವೆಂಕಟೇಶ್..

ಹಾಗಾಗಿ ಇವರನ್ನು ಅಪರೂಪದ ಜೋಡಿ ಅಂತಲೇ ಹೇಳಬಹುದು. ವೆಂಕಟೇಶ್ ಕೂಡ ಹಾಗೆ ಶೂಟಿಂಗ್ ಮುಗಿದ ತಕ್ಷಣ ಒಂದು ಕ್ಷಣ ಟೈಮ್ ವೇಸ್ಟ್ ಮಾಡದೆ ಮನೆ ಸೇರಿಕೊಳ್ಳುತ್ತಾರೆ. ಹೆಂಡತಿ ಮತ್ತು ಮಕ್ಕಳ ಜೊತೆ ಕಾಲ ಕಳೆಯುತ್ತಾರೆ.. ಇದು ಕೇಳುವುದಕ್ಕೆ ಸಿನಿಮಾದಲ್ಲಿ ಬರುವ ಸೀನ್ ರೀತಿ ಇದೆ ಅಲ್ವಾ. ಆದ್ರೂ ಇದು ನಿಜ.. ಈಗೆ ಗಂಡ ಹೆಂಡತಿ ಮಧ್ಯೆ ಇಷ್ಟು ಪ್ರೀತಿ ಬೆಳೆಯಬೇಕೆಂದರೆ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಹಾಗೆ ಒಬ್ಬರ ಮೇಲೆ ಒಬ್ಬರಿಗೆ ಅಪಾರವಾದ ಗೌರವ ಇರಬೇಕು. ಈ ಆಧುನಿಕ ಕಾಲದಲ್ಲಿ ಇದೆಲ್ಲಾ ಓವರ್ ಆ್ಯಕ್ಷನ್ ಅನ್ನುವ ಜನರೇ ಹೆಚ್ಚು.. ಆದರೆ ಇದರಲ್ಲಿರುವ ಪ್ರೀತಿನೆ ಬೇರೆ. ಆ ಪ್ರೀತಿಗಿರುವ ಗಟ್ಟಿತನವರೆ ಬೇರೆ.