Advertisements

ಸ್ಟಾರ್ ನಟರು ಮಾತ್ರ ಸಾಧಕರಾ.. ವೈಜನಾಥ್ ಬಿರಾದರ್ ಮಾಡಿರೋ ಸಾಧನೆ ಬಗ್ಗೆ ನಿಮಗೆ ಗೊತ್ತಾ?

Cinema

ಒಬ್ಬ ಸಾಧಕನ ಕಥೆ ಓದಿ ಇನ್ಸ್ಪೈರ್ ಆಗಿ ತಾನೊಬ್ಬ ಸಾಧಕನಾಗಬೇಕು ಅಂತ ಬದುಕಿನ ರೇಸ್ ‌ನಲ್ಲಿ ಹೋಗಿ ಇವತ್ತು ಅದೆಷ್ಟೋ ಕಲಾವಿದರಿಗೆ ಸಾಧಕನಾಗಿರುವ ಅತ್ಯುತ್ತಮ ಹಾಸ್ಯ ಕಲಾವಿದನ ಬದುಕಿನ ಕಥೆಯಿದು. ಎಸ್ ಇವತ್ತು ಐನೂರು ಸಿನಿಮಾಗಳ ಹೊಸ್ತಿಲಲ್ಲಿ ಅಭಿನಯಿಸಿದ ಖ್ಯಾತಿ ಪಡೆದಿರುವ ಪ್ರಖ್ಯಾತ ಕಲಾವಿದ ವೈಜನಾಥ್ ಬಿರಾದರ್ ಅವರು ಕಿತ್ತು ತಿನ್ನುವ ಬಡತನವನ್ನು ಮೆಟ್ಟಿ ಒಳ್ಳೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಪ್ರಯಾಣ ಅಷ್ಟು ಸುಲಭದ್ದಂತೂ ಆಗಿರಲಿಲ್ಲ, ಹೆಜ್ಜೆ ಹೆಜ್ಜೆಗೂ ಕಷ್ಟಗಳು ಮುಳ್ಳಿನ ಹಾಸಿಗೆಯಂತೆ ಇದ್ದವು. ವೈಜನಾಥ್ ಬಿರಾದರ್ ಅವರು ಮೂಲತಃ ಬೀದರ್ ಜಿಲ್ಲೆಯವರು. ಅಪ್ಪ ತೀರಿಕೊಂಡಕಾರಣ ಮೂರನೇ ಕ್ಲಾಸಿಗೆ ಓದಿಗೆ ಇತಿಶ್ರೀ ಹಾಡಿ ಅಮ್ಮನೊಂದಿಗೆ ಜಮೀನು ಕೆಲಸದಲ್ಲಿ ತೊಡಗಿಕೊಂಡಿದ್ದರು.

[widget id=”custom_html-3″]

Advertisements

ಊರ ಜಾತ್ರೆಯಲ್ಲಿ ಹೆಜ್ಜೆ ಹಾಕಿ, ಅಭಿನಯಿಸಿ ಒಳ್ಳೆಯ ಕಲಾವಿದ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ರು, ಇವರಲ್ಲಿರುವ ಕಲಾದೇವಿಯನ್ನು ಕಂಡು ಸ್ಥಳೀಯರೊಬ್ಬರು ಇವರಿಗೆ ಬೆಂಗಳೂರಿನ ನಾಟಕತಂಡ ಸೇರಿಕೊಂಡು ಸಿನಿಮಾದಲ್ಲಿ ಅಭಿನಯಿಸಿ ಎಂಬ ಸಲಹೆ ಕೊಡುತ್ತಾರೆ, ಇದನ್ನು ಅಗಾಧವಾಗಿ ಮನಸ್ಸಿಗೆ ಹಚ್ಚಿಕೊಂಡು ಬೆಂಗಳೂರಿಗೆ ಹೋಗಬೇಕು ಅಂತ ನಿರ್ಣಯಿಸ್ತಾರೆ, ಪುಸ್ತಕಗಳ ಓದುವ ಹವ್ಯಾಸ ಇರುವ ವೈಜನಾಥ್ ಅವರು ಅಣ್ಣವರ ಬದುಕಿನ ಕತೆಯನ್ನು ಓದುತ್ತಾರೆ, ಹೇಗೆ ಅವರು ವಿದ್ಯಾಭ್ಯಾಸ ಮಾಡದೇ ಸಿನಿರಂಗದಲ್ಲಿ ಉತ್ತುಂಗದಲ್ಲಿ ಏರಿದ್ದಾರೆ ಎಂಬಿತ್ಯಾದಿ ವಿಚಾರಗಳ ಬಗೆಗೆ ಓದಿ ಅವರನ್ನೇ ಆದರ್ಶವಾಗಿ ತೆಗೆದುಕೊಂಡು ಡಾಕ್ಟರ್ ರಾಜಕುಮಾರ್ ಅವರ ನಿವಾಸ ಇರುವ ಚೆನೈನ ಮದ್ರಾಸ್ ಬಳಿ ಪಯಣ ಬೆಳೆಸುತ್ತಾರೆ.

[widget id=”custom_html-3″]

ಅಣ್ಣವರನ್ನು ಭೇಟಿಕೂಡ ಆಗಿ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಅಣ್ಣವರು ಬಸ್‌ಚಾರ್ಜ ಸಹ ಕೊಟ್ಟು ಬೆಂಗಳೂರಿನಲ್ಲಿ ತನ್ನನ್ನು ಕಾಣುವಂತೆ ಕಂಠೀರವ ಸ್ಟುಡಿಯೋ ವಿಳಾಸ ಬರೆದುಕೊಡುತ್ತಾರೆ. ಗಡಿಬಿಡಿಯಲ್ಲಿ ಅಣ್ಣವರು ಕೊಟ್ಟ ವಿಳಾಸವನ್ನು ಕಳೆದುಕೊಂಡು ಬೆಂಗಳೂರಿನಲ್ಲಿ ಬೀದಿ ಬೀದಿ ಅಲೆಯುತ್ತಾರೆ. ಊಟಕ್ಕೂ ಗತಿಯಿಲ್ಲದೇ ಸೌತೆಕಾಯಿ, ನೀರು ಕುಡಿದು ದಿನ ಕಳೆಯುತ್ತಾರೆ, ಹಸಿವಿನ ಕರಾಳಮುಖವನ್ನು ಅನುಭವಿಸ್ತಾ ಸಿನಿಮಾದ ಮೇಲೆ ತಾನೊಬ್ಬ ಕಲಾವಿದನಾಗಬೇಕು ಎಂಬ ಆಸೆ ಮೇಲೆ ಹತಾಶೆ ಬರತೊಡಗುತ್ತಂತೆ. ಈ ಮಧ್ಯೆಯಲ್ಲೇ ಇವರಿಗೆ ಒಂದು ನಾಟಕದಲ್ಲಿ ಅಭಿನಯಿಸುವ ಅವಕಾಶ ಸಿಗುತ್ತೆ. ಸುದೈವವಶಾತ್ ಇವರ ಅಭಿನಯ ಮೆಚ್ಚುಗೆಯಾಗಿ ಸಿನಿಮಾಗಳಲ್ಲಿ ಕೂಡ ಅವಕಾಶ ಸಿಗುತ್ತೆ.

[widget id=”custom_html-3″]

ಕಾಶಿನಾಥ್ ಅವರು ತಮ್ಮ ಸಿನಿಮಾಗಳಲ್ಲಿ ಅಭಿನಯಿಸಲಿಕ್ಕೆ ಚಾನ್ಸ್ ಕೊಡುತ್ತಾರೆ. ಮುಂದೆ ಉಪೇಂದ್ರ ಅವರ ನಿರ್ದೆಶನದಲ್ಲಿ ಬಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಲ್ಲಿಂದ ವೈಜನಾಥ್ ಅವರ ಸ್ಟಾರ್ ಬದಲಾಗುತ್ತೆ. ಮುಂದೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಬಹುತೇಕ ಬಿಕ್ಷುಕನ ಗೆಟ್‌ಅಪ್‌ನಲ್ಲಿಯೇ ಫೇಮಸ್ ಆಗುತ್ತಾರೆ. ನಂತರ ಗಿರೀಶ್ ಕಾಸರವಳ್ಳಿ ಅವರು ನಿರ್ದೆಶಿಸಿದ ಕನಸಿನ ಬೆನ್ನೇರಿ ಎಂಬ ಸಿನಿಮಾದಲ್ಲಿ ಅಭಿನಯಿಸ್ತಾರೆ. ಈ ಸಿನಿಮಾದಲ್ಲಿ ವೈಜನಾಥ್ ಅವರು ತನ್ನನ್ನು ತಾನು ಅರ್ಪಿಸಿಕೊಂಡ ರೀತಿಗೆ, ಹ್ಯಾಟ್ಸ್ ಆಫ್ ಪರ್ಫಾಮೆನ್ಸ್ಗೆ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಸಹ ಲಭ್ಯವಾಯಿತು. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಕಿ’ತ್ತು ತಿನ್ನುವ ಬಡತನಕ್ಕೆ ಸೆಡ್ಡು ಹೊಡೆದು, ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡು ಕನ್ನಡದ ಹೆಸರಾಂತ ಕಲಾವಿದರ ಪೈಕಿ ವೈಜನಾಥ್ ಅವರು ಮುಂಚೂಣಿಯಲ್ಲಿ ಕಾಣಸಿಗ್ತಾರೆ.