ನಮಸ್ತೆ ಸ್ನೇಹಿತರೆ, ಕಳೆದ ಮೂರು ದಶಕಗಳಿಂದ ತಮಿಳು ಚಿತ್ರದ ರಸಿಕರನ್ನ ರಂಜಿಸುತ್ತಾ ಬಂದಿದ್ದ ಹಾಸ್ಯ ನಟ ವೀವೇಕ್ ಇಂದು ಮುಂಜಾನೆ ಹೃದಯ ಸಮ’ಸ್ಯೆ’ಯಿಂದ ಇಹಲೋಕವನ್ನು ತ್ಯ’ಜಿಸಿದ್ದಾರೆ.. ನಟ ವಿವೇಕ್ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಕನ್ನಡ ನಾಡಿನಲ್ಲಿ ಅನಂತವಾದ ಸಾಧನೆಯನ್ನು ಮಾಡಿರುವ ವೃಕ್ಷ ಮಾತೆ ಎಂದೇ ಗೌರವಿಸಲ್ಪಟ್ಟಿರುವ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಬಗ್ಗೆ ಬಹಳಷ್ಟು ವಿಚಾರಗಳನ್ನ ತಿಳಿದುಕೊಂಡಂತಹ ವ್ಯಕ್ತಿ ಇವರಾಗಿದ್ದರು. ತಮಿಳುನಾಡಿನ ಜೆಎಸ್ ಡಬ್ಲ್ಯೂ ಪ್ರಧಾನ ಸಮಾರಂಭದಲ್ಲಿ ಸಾಲು ಮರದ ತಿಮ್ಮಕ್ಕನವರನ್ನು ಸನ್ಮಾಲಿಸಲಾಗಿತ್ತು.. ಅವರಿಗೆ ಗೌರವ ಪ್ರಶಸ್ತಿಯನ್ನು ನೀಡುವ ಅವಕಾಶವನ್ನ ವಿವೇಕ್ ಅವರಿಗೆ ನೀಡಲಾಗಿತ್ತು.

ಆಗ ವೇದಿಕೆಗೆ ಬಂದು ಪ್ರಶಸ್ತಿಯನ್ನು ಸ್ವೀಕರಿಸಿದ ಸಾಲು ಮರದ ತಿಮ್ಮಕ್ಕ ತಮಿಳು ಬಾರದ ಕಾರಣ ಕನ್ನಡದಲ್ಲಿ ಮಾತನ್ನು ಆರಂಭಿಸಿದರು.. ಆಗ ಕಾರ್ಯಕ್ರಮದ ನಿರೂಪಕಿ ಸಾಲು ಮರದ ತಿಮ್ಮಕ್ಕನವರಿಗೆ ಒಂದು ನಿಮಿಷ ಇರಿ ಎಂದು ಹೇಳುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಶ್ಮಿಕಾ ಮುಂದಣ್ಣ ಅವರನ್ನ ವೇದಿಕೆಗೆ ಆಹ್ವಾನಿಸಿ ಸಾಲು ಮರದ ತಿಮ್ಮಕ್ಕನವರು ಕನ್ನಡದಲ್ಲಿ ಹೇಳುವ ಮಾತುಗಳನ್ನ ಇಂಗ್ಲೀಷ್ ಬಾಷೆಗೆ ಅನುವಾದಿಸಿ ಹೇಳುವಂತೆ ಮನವಿಯನ್ನ ಮಾಡಿಕೊಂಡರು. ಆಗ ವೇದಿಕೆಗೆ ಬಂದ ರಶ್ಮಿಕಾ ಮಂದಣ್ಣ ಸಾಲು ಮರದ ತಿಮ್ಮಕ್ಕ ಹೇಳುವ ವಿಚಾರಗಳನ್ನ ಇಂಗ್ಲೀಷ್ ನಲ್ಲಿ ಹೇಳಲು ಕೂಡ ತಡವಡಿಸಿದರು..

ಕೂಡಲೆ ನಟ ವಿವೇಕ್ ಅವರು ಸಾಲು ಮರದ ತಿಮ್ಮಕ್ಕನವರ ಜೀವನದ ಇತಿಹಾಸವನ್ನ ಯಾವುದೇ ಪುಸ್ತಕ ಅಥವಾ ಇನ್ಯಾವುದೇ ಮೂಲದ ಸಹಾಯವಿಲ್ಲದೆ ಬಹಳ ಅಚ್ಚುಕಟ್ಟಾಗಿ ಹಾಗೂ ಅಲ್ಲಿ ಸೇರಿದ್ದ ಎಲ್ಲಾ ಗಣ್ಯರು ಕೂಡ ಮೆಚ್ಚುವಂತಹ ಬಾಷೆಯಲ್ಲಿ ವಿವರಣೆ ನೀಡಿದ್ದರು. ಈಗೆ ಸಾಲು ಮರದ ತಿಮ್ಮಕ್ಕ ನಮ್ಮ ಅಮ್ಮ ಎಂದು ಕರೆದು ಗೌರವಿಸಿದ ಅವರು ಸತಾಯಿಷಿ ಆಗಿರುವ ಸಾಲು ಮರದ ತಿಮ್ಮಕ್ಕನ ಅವರ ಈ ಜೀವನಕ್ಕೆ ಅವರು ನೆಟ್ಟ ಮರಗಳೇ ಕಾರಣ. ಅವರು ಇಡೀ ದೇಶದ ಜನತೆಗೆ ಸ್ಪೂರ್ತಿ ಅಂತ ಹೇಳಿದ್ದರು.. ಇಂತಹ ನಟ ಈ ದಿನ ಎಲ್ಲರನ್ನ ಅ’ಗಲಿದ್ದು ಅವರ ಆ’ತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.