Advertisements

ಈಗಲೂ ನಟನೆ ಜೊತೆಗೆ ವ್ಯವಸಾಯ ಮಾಡುತ್ತಿರುವ ಖ್ಯಾತ ನಟಿಯರು ಯಾರ್ಯಾರು ಗೊತ್ತಾ? ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಯಾವುದೇ ಕೆಲಸಗಳು ಕೈ ಬಿಟ್ಟರು ಕೊನೆಗೆ ಕೈ ಹಿಡಿಯುವುದು ವ್ಯವಸಾಯ.. ಅಷ್ಟೇ ಅಲ್ಲದೇ ಪ್ರಪಂಚ ನಡೆಯುತ್ತಿರುವುದೇ ಈ ವ್ಯವಸಾಯದಿಂದ. ನೀವು ಯಾವುದೇ ಕೆಲಸ ಮಾಡಿ ಆದರೆ ಈ  ವ್ಯವಸಾಯ ಮಾಡುವುದರಲ್ಲಿ ಸಿಗುವಷ್ಟು ಸಂತೃಪ್ತಿ ಇನ್ನೆಲ್ಲೂ ಇಲ್ಲ. ಸಿನಿಮಾ ರಂಗದಲ್ಲಿ ಕೆಲವರಿಗೆ ಅವಕಾಶ ಸಿಗಲಿಲ್ಲ, ಇನ್ನೂ ಕೆಲವರು ನನ್ನ ಸಿನಿಮಾಗಳೆಲ್ಲಾ ಪ್ಲಾಪ್ ಆಗುತ್ತಿದೆ ಎಂದು ಡಿಪ್ರೆಶನ್ ಗೆ ಹೋಗುತ್ತಾರೆ ಅಥವಾ ಇನ್ನೇನೋ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾರೆ.. ಕೊನೆಗೆ ಜೀವನವೇ ಮುಗಿದು ಹೋಯಿತು ಅನ್ನುವಷ್ಟರ ಮಟ್ಟಿಗೆ ಯೋಚನೆ ಮಾಡುತ್ತಾರೆ..

Advertisements

ಅಂತವರು ವ್ಯವಸಾಯ ಮಾಡುತ್ತಿರುವ ಈ ನಟಿಯರನ್ನು ನೋಡಿ ಕಲಿಯಬೇಕು. ಹೌದು ಸ್ನೇಹಿತರೆ ನಾವು ತಿಳಿಸಿಕೊಡುವ ಈ ನಟಿಯರು ತಮ್ಮ ಶ್ರೀಮಂತಿಕೆಯನ್ನು ತೊರೆದು ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಯಾಮಿ ಗೌತಮಿ ಲಾಕ್ ಡೌನ್ ಸಮಯದಲ್ಲಿ ಊರಿಗೆ ಹೋದ ಇವರು ತಮಗಿರುವ ಜಮೀನಿನಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡಲು ಮುಂದಾಗಿದ್ದು.. ಇದರ ಜೊತೆಗೆ ರಿಸರ್ಚ್ ಮಾಡಿ ವ್ಯವಸ್ಥಿತವಾಗಿ ವ್ಯವಸಾಯ ಮಾಡಲು ಮುಂದಾಗಿದ್ದು ಈಗಲೂ ಸಹ ವ್ಯವಸಾಯವನ್ನು ನಟನೆ ಜೊತೆಗೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಒಂದಾನೊಂದು ಕಾಲದಲ್ಲಿ ಕನ್ನಡಿಗರ ಹೃದಯವನ್ನು ಗೆದ್ದ ಜೂಹಿ ಚಾವ್ಲಾ ಬಾಲಿವುಡ್ ನಲ್ಲೂ ಹತ್ತಾರು ವರ್ಷ ಮಿಂಚಿದ ಈ ನಟಿ ಈಗ ವ್ಯವಸಾಯದ ಕಡೆಗೆ ವಾಲಿದ್ದಾರೆ. ಈಗಾಗಲೇ ಜಮೀನನ್ನು ಖರೀದಿ ಮಾಡಿ.. ಅದರಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ನಟನೆಯ ಮೂಲಕ ಹಲವು ಬಾಷೆಗಳಲ್ಲಿ ಛಾಪು ಮೂಡಿಸಿದ ಸಂಪದ ಕುಲಕರ್ಣಿ ನಟನೆಗೆ ಗುಡ್ ಬಾಯ್ ಹೇಳಿ ಈಗ ಸಂಪೂರ್ಣವಾಗಿ ವ್ಯವಸಾಯದಲ್ಲಿ ತೊಡಗಿರುವ ಈ ನಟಿ ತಮ್ಮ ಹಳ್ಳಿಯಲ್ಲಿರುವ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾ ಇತರರಿಗೂ ಕೂಡ ಕೆಲಸವನ್ನು ಒದಗಿಸುತ್ತಿದ್ದಾರೆ.

ಕನ್ನಡದಲ್ಲಿ ಹತ್ತಾರು ಚಿತ್ರಗಳಲ್ಲಿ ಮಿಂಚಿದ ಖ್ಯಾತ ನಟ ಅರುಣ್ ಪಾಂಡ್ಯನ್.. ಇವರು ಮಗಳು ಕೀರ್ತಿ ಪಾಂಡ್ಯನ್ ನಟಿಯಾಗಿ ಗುರುತಿಸಿಕೊಂಡಿದ್ದು.. ಈಗ ತನ್ನ ತಂದೆಯ ಜೊತೆಗೆ ವ್ಯವಸಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನಾನು ಯಾರಿಗಿಂತ ಕಮ್ಮಿಯಿಲ್ಲ ಎಂದು ಟ್ರ್ಯಾಕ್ಟರ್ ಅತ್ತಿ ಹುಳುಮೆ ಮಾಡವುದರಲ್ಲಿಯೂ ಸಹ ಕೀರ್ತಿ ಅವರು ಮುಂದಾಗಿದ್ದಾರೆ.. ತಮ್ಮ ಮೊದಲನೆಯ ಚಿತ್ರದಲ್ಲಿ ಸಕ್ಸಸ್ ಕಂಡ ಮಾಳ್ವಿಕಾ ಅವರು ನಂತರ ಹೆಚ್ಚು ವ್ಯವಸಾಯದ ಕಡೆಗೆ ಗಮನ ಹರಿಸಿರುವ ಈ ನಟಿ ತಮ್ಮ ಹುಟ್ಟೂರಿನಲ್ಲಿ ದೊಡ್ಡ ಮಟ್ಟದಲ್ಲಿ ವ್ಯವಸಾಯ ಮಾಡುತ್ತಾ ನೆಮ್ಮದಿ ಜೀವನ ನಡೆಸುತ್ತಿದ್ದಾರೆ..

ಕನ್ನಡ ಅಚ್ಚುಮೆಚ್ಚಿನ ಧಾರವಾಹಿ ಕಿನ್ನರಿ ಮೂಲಕ ಎಂಟ್ರಿಕೊಟ್ಟು.. ನಂತರ ಬಿಗ್ ಬಾಸ್ ನಲ್ಲಿ ಹೆಸರು ಮಾಡಿದ ನಟಿ ಭೂಮಿ ಶೆಟ್ಟಿ ಅವರು ಬಿಡುವಿನ ಸಂದರ್ಭಗಳಲ್ಲಿ ತಮ್ಮ ಕುಟುಂಬದ ಜೊತೆ ಸೇರಿ ಗದ್ದೆಯ ಕೆಲಸಕ್ಕೆ ಇಳಿಯುತ್ತಾರೆ. ನ್ಯಾಷನಲ್ ಅವಾರ್ಡ್ ಪಡೆದ ಮಲಯಾಳಂ ನಟಿ ಸುರಬಿ ಲಕ್ಷ್ಮೀ ಅವರು ತಮ್ಮ ತೋಟದಲ್ಲಿ ಕೆಲಸವನ್ನು ತೊಡಗಿಸಿ ಕೊಂಡಿದ್ದೂ ಸ್ವತಃ ತೋಟವನ್ನು ಕ್ಲೀನ್ ಮಾಡಿ ಉತ್ತಮ ಅಡಿಕೆ ಬೆಳೆಯುವಲ್ಲಿ ನಿರತರಾಗಿದ್ದಾರೆ.. ತಾವು ಸೆಲೆಬ್ರಿಟಿಗಳು ಎಂದು ಮೆರೆದಾಡುವ ಕೆಲವು ನಟಿಯರು..  ಎಷ್ಟೇ ಶ್ರೀಮಂತಿಕೆ ಇದ್ದರೂ ಸರಳ ಜೀವನ ನಡೆಸುತ್ತಿರುವ ಈ ನಟಿಯರನ್ನು ನೋಡಿ ಕಲಿಯುವುದು ತುಂಬಾ ಇದೆ.