Advertisements

ನಟಿ ಅಂಬಿಕಾ ಎಷ್ಟು ಮದುವೆ ಆಗಿದ್ದಾರೆ ಗೊತ್ತಾ? ಎಷ್ಟು ಮಕ್ಕಳಿದ್ದಾರೆ.. ಇವರ ಜೀವನದಲ್ಲಿ ನಡೆದಂತಹ ಘಟನೆಗಳು ಏನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಜೀವನ ಅನ್ನುವುದೇ ಹಾಗೆ ನಾವು ಅಂದುಕೊಂಡತೆ ಏನು ಕೂಡ ಆಗೋದಿಲ್ಲ.. ಅದು ಆಡಿಸಿದಂತೆ ನಾವು ಆಡಬೇಕು ಸುಂದರ ಕನಸಿನೊಂದಿಗೆ ಮದುವೆಯಾಗಿ ಅಮೇರಿಕಾಗೆ ಹೋದ ನಟಿಯ ಜೀವನದಲ್ಲಿ ನಂತರ ಆಗಿದ್ದೇನು ಗೊತ್ತಾ? ಈಗ ಈ ಖ್ಯಾತ ನಟಿ ಏನು ಮಾಡುತ್ತಿದ್ದಾರೆ ಎಂದು ನೋಡೊಣ.. ನಟಿ ಅಂಬಿಕಾ ಒಂದು ಕಾಲದಲ್ಲಿ ಕನ್ನಡಿಗರ ಕನಸಿನ ರಾಣಿ. ಕನ್ನಡದ ಎಲ್ಲಾ ಖ್ಯಾತ ನಟರ ಜೊತೆ ನಟಿಸಿದ್ದ ಈ ನಟಿ.. ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದರು. ಆದರೆ ಇವರ ಗಂಡನ ಮತ್ತು ಮಕ್ಕಳ ಬಗ್ಗೆ ಎಲ್ಲೂ ಮಾಹಿತಿ ಸಿಗುವುದಿಲ್ಲ. ಹಾಗಾದರೆ ಅಂಬಿಕಾ ಅವರು ಮದುವೆಯಾಗಿಲ್ವಾ.. 1962 ರಲ್ಲಿ ಹುಟ್ಟಿದ ಅಂಬಿಕಾ ಅವರು ಟೀನೇಜಿನಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.

Advertisements

ಅಷ್ಟೇ ಬೇಗ ಬಾರಿ ಬೇಡಿಕೆ ನಟಿಯಾಗಿ ಬೆಳೆದರು.. 1988 ಅಂದರೆ ತಮ್ಮ 25 ನೇ ವಯಸ್ಸಿನಲ್ಲಿ ಸೀನು ಜಾನು ಎನ್ನುವ ಎನ್ ಐ ಆರ್ ವ್ಯಕ್ತಿಯನ್ನು ಮದುವೆಯಾದ ಅಂಬಿಕಾ ಅವರು ಸುಂದರ ಸಾಂಸಾರಿಕ ಕನಸು ಕಂಡು ಅಮೇರಿಕಾದಲ್ಲಿ ಗಂಡನ ಜೊತೆ ನೆಲೆಸಿದರು. ಕಾಲ ಕಳೆಂದತೆ ಅಂಬಿಕಾ ಅವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಹುಟ್ಟಿದರು.. ಆದರೆ ಗಂಡನ ಜೊತೆ ಒಂದಾಣಿಕೆ ಆಗದ ಕಾರಣ ಗಂಡನಿಗೆ ಡೈವರ್ಸ್ ಕೊಟ್ಟ ಅಂಬಿಕಾ ಅವರು ಮತ್ತೆ ಇಂಡಿಯಾಗೆ ವಾಪಸ್ ಬಂದರು.. ಆಗ ಮಕ್ಕಳು ಕೆಲವು ವರ್ಷ ತಂದೆಯ ಜೊತೆ ನೆಲೆಸಿ ನಂತರ ಅಂಬಿಕಾ ಅವರ ಜೊತೆ ನೆಲೆಸಿದರು.

ಕಾಲ ಉರುಳಿದಂತೆ 2000 ಇಸವಿಯಲ್ಲಿ ನಟ ರವಿ ಕಾಂತ್ ರನ್ನು ಪ್ರೀತಿಸಿ ಎರಡನೇ ಮದುವೆಯಾದರು ಅಂಬಿಕಾ ಅವರು ಆದರೆ ಇವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.. ಕೇವಲ ಎರಡು ವರ್ಷದಲ್ಲಿ ಅಂದರೆ 2002 ರಲ್ಲಿ ರವಿಕಾಂತ್ ರಿಂದ ವಿಚ್ಚೇದನ ಪಡೆದ ಅಂಬಿಕಾ ಅವರು ಒಂಟಿ ಜೀವನ ಆರಂಭಿಸಿದರು. ಮತ್ತೆ ಸಿನಿಮಾಗಳಲ್ಲಿ ನಟಿಸಿದ ಇವರು ಕೆಲವು ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. ಈಗ ದೊಡ್ಡ ಮಗ ರಾಮ್ ಕೇಶವ್ ರನ್ನು ಹೀರೋ ಮಾಡಲು ಹೊರಟಿರುವ ಅಂಬಿಕಾ ಅವರು ಮಗನಿಗೆ ನಟನೆಯ ಬಗ್ಗೆ ಪಾಠ ಹೇಳುಕೊಡುತ್ತಿದ್ದಾರೆ.. ಏನೇ ಆದರು ಸಾಂಸಾರಿಕ ಜೀವನದಲ್ಲಿ ಅಷ್ಟೇನು ಸಂತೋಷ ಕಾಣದ ಅಂಬಿಕಾ ಅವರಿಗೆ ಮಕ್ಕಳ ಯಶಸ್ಸು ಸಂತೋಷವನ್ನು ತಂದು ಕೊಡಲಿ ಎಂದು ಆಶಿಸೋಣ.