Advertisements

20 ಹಳ್ಳಿಗಳು ಮತ್ತು 40 ಶಾಲೆಗಳಿಗೆ ನಟಿ ಆರತಿಯವರು ಮಾಡಿದ ಕೆಲಸ ಏನು ಗೊತ್ತಾ? ಈ ವಿಷಯ ತುಂಬಾ ಜನಕ್ಕೆ ಗೊತ್ತಿಲ್ಲಾ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನಟಿ ಆರತಿ ಕೂಡ ಒಬ್ಬರು.. ಸರಳ, ಸುಂದರ ಹಾಗೂ ತಮ್ಮ ಕಣ್ಣೋಟದ ಅಭಿನಯ ಮೂಲಕ ಎಲ್ಲರೂ ಮಾರು ಹೋಗುವಂತೆ ಮಾಡುತ್ತಿದ್ದ ನಟಿ 1986 ರ ಟೈಗರ್ ಚಿತ್ರದ ನಂತರ ಯಾವ ಚಿತ್ರದಲ್ಲೂ ನಟಿಸಲಿಲ್ಲ. ಇಂತಹ ಅದ್ಬುತವಾದ ಕಲಾವಿದೆ ಚಿತ್ರರಂಗದಿಂದ ದೂರ ಉಳಿದು ಎಲ್ಲಿದ್ದಾರೆ ಹಾಗೂ ಅವರ ಮನೆಯ ಬಗೆಗಿನ ಮಾಹಿತಿ ತಿಳಿದುಕೊಳ್ಳೋಣ.. 1854 ರಲ್ಲಿ ಜನಸಿದ ನಟಿ ಆರತಿ 79, 80 ರ ದಶಕದ ಪ್ರಖ್ಯಾತ ಬಹುಬೇಡಿಕೆಯ ನಟಿಯಾಗಿ ಚಿತ್ರರಂಗದಲ್ಲಿ ಮಿಂಚಿದ್ದರು. ಕನ್ನಡದ ಖ್ಯಾತ ನಟರ ಜೊತೆ ಸುಮಾರು 125 ಚಿತ್ರದಲ್ಲಿ ನಟಿಸಿದ ಆರತಿ ಅಂದಿನ ಕಾಲದಲ್ಲಿ ಯುವಕರ ಕನಸಿನ ರಾಣಿಯಾಗಿದ್ದರು..

Advertisements

ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾಗ ವಿಧಾನ ಪರಿಷತ್ ಸದಸ್ಯೆ ಕೂಡ ಆದ ಈ ನಟಿ ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಸಕಲ ಅಭಿವೃದ್ಧಿ ಮಾಡಿದ್ದರು. ಬ್ಯಾಂಕ್ ನಲ್ಲಿ ಎರಡು ಕೋಟಿ ಡಿಪಾಸಿಟ್ ಇಟ್ಟು ಅದರ ಬಡ್ಡಿಯಿಂದ ಬಡ ಮಕ್ಕಳಿಗೆ ವಿಧ್ಯಾರ್ಥಿ ವೇತನವನ್ನು ಕೊಡುತ್ತಿದ್ದರು.. 40 ಶಾಲೆಗಳನ್ನು ದತ್ತು ಪಡೆದು.‌. ಅಷ್ಟು ಶಾಲೆಗಳ ಖರ್ಚು ವೆಚ್ಚವನ್ನು ಭರಿಸುತ್ತಿದ್ದಾರೆ ನಟಿ ಆರತಿ ಎನ್ನುವ ವಿಷಯ ತುಂಬಾ ಜನಕ್ಕೆ ಗೊತ್ತಿಲ್ಲ. ಗಂಡ ಮತ್ತು ಮಕ್ಕಳ ಜೊತೆ ಅಮೇರಿಕಾದಲ್ಲಿ ನೆಲೆಸಿದ್ದಾರೆ ನಟಿ ಆರತಿ ಅಂತ ಹೇಳಲಾಗ್ತಿದೆ.. ಆದರೆ ಮೀಡಿಯಾದಿಂದ ದೂರ ಉಳಿದಿರುವ ಈ ನಟಿ ಕೌಟುಂಬಿಕ ವಿಷಯವನ್ನ ಎಲ್ಲೂ ಬಿಟ್ಟುಕೊಡೊಲ್ಲ.

ಬೆಂಗಳೂರಿನ ಜೆ.ಪಿ ನಗರದಲ್ಲಿ ಇರುವ ಈ ಮನೆ ನೋಡಿ.. ಈ ಮನೆಯ ಹೆಸರು ಬೆಳ್ಳಿತೆರೆ. ನಟಿ ಆರತಿಯವರ ಮನೆ. ತಮ್ಮ ಉತ್ತುಂಗ ಸ್ಥಾನದಲ್ಲಿರುವಾಗ ಇದೇ ಮನೆಯಲ್ಲಿ ವಾಸವಿದ್ದರು.. 9 ಸಾವಿರದ 600 ಸ್ಕ್ವೇರ್‌ ಪೀಟ್ ಇರುವ ಈ ಮನೆಯಲ್ಲಿ ನಟಿ ಆರತಿಯವರು ಸುಮಾರು ವರ್ಷಗಳ ಕಾಲ ವಾಸವಿದ್ದರು. ಗಂಡನ ಜೊತೆ ಅಮೇರಿಕಾಗೆ ಹೋದಮೇಲೆ ಈ ಮನೆಯನ್ನ ಮಾರಾಟ ಮಾಡಿದ್ರೂ ಈ ನಟಿ.. ಆದರೆ ಈಗಲೂ ಜೇಪಿ ನಗರದಲ್ಲಿ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ ನಟಿ ಆರತಿಯವರ ಈ ಬೆಳ್ಳಿತೆರೆ ಮನೆ. ಎಂತಹ ಪಾತ್ರವಾದರೂ ಸುಲಲಿತವಾಗಿ ಮನೋಜ್ಞ ಅಭಿನಯ ಮಾಡುತ್ತಿದ್ದ ನಟಿ ಆರತಿಯವರ ಬಗ್ಗೆ ನೀವೇನು ಹೇಳಲು ಇಷ್ಟಪಡುತ್ತೀರಾ ತಿಳಿಸಿ.