Advertisements

ದುಡಿದಾ ಎಲ್ಲಾ ಹಣ, ಆಸ್ತಿ ದಾನ ಮಾಡಿದ ನಟಿ ಆರತಿ ಈಗ ಏನು ಮಾಡ್ತಿದ್ದಾರೆ ಗೊತ್ತಾ?

Cinema

ಕನ್ನಡ ಸಿನಿ ರಸಿಕರ ಪಾಲಿನ ರಂಗ ನಾಯಕಿ.. ತಮ್ಮ ಮನೋಜ್ಞ ಅಭಿನಯದ ಮೂಲಕ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಮಾಣಿಕ್ಯರಂತೆ ಇರುವ ಆರತಿ ಅವರು ನಟನೆಯಲ್ಲಿ ಉತ್ತುಂಗದಲ್ಲಿದ್ದಾಗಲೇ ಚಂದನವನದಿಂದ ದೂರ ಸರಿದು ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ಅಂದಿನ ಕಾಲದಲ್ಲಿ ಟಾಪ್ ನಟಿಯಾಗಿದ್ದ ಆರತಿ ಅವರು ಸಿನಿಮಾ ರಂಗದಿಂದ ದೂರ ಉಳಿದು ಇಂದಿಗೂ ಕೂಡ ಸರಳ ಜೀವನವನ್ನ ನಡೆಸುತ್ತಿರುವ ಈ ನಟಿ ಇದೀಗ ಎಲ್ಲಾ ಹಣವನ್ನು ಧಾನ ಮಾಡಿ ಏನ್ ಮಾಡ್ತಿದ್ದಾರೆ ಗೊತ್ತಾ? ಸ್ನೇಹಿತರೆ ಕೆಲವರು ನನಗೆ ಎಷ್ಟಿದ್ದರು ಸಾಲಲ್ಲ.. ಈಗಿನ ಕಾಲದಲ್ಲಿ ದುಡ್ಡಿಗಾಗಿ ಬಾಯಿ ಬಿಡುವ ಕೆಲವು ಜನಗಳ ನಡುವೆ ಆರತಿ ಅವರು ವಿಭಿನ್ನವಾಗಿ ನಿಲ್ತಾರೆ.

[widget id=”custom_html-3″]

Advertisements

ಮಗಳಿಗಾಗಿ ಚಿತ್ರರಂಗದಿಂದ ದೂರ ಸರಿದ ಈ ನಟಿ ತೆರೆ ಮರೆಯಲ್ಲಿ ಮಾಡುತ್ತಿರುವ ಸೇವೆ ಮಾತ್ರ ಅಪಾರ.. ಅಮೇರಿಕಾದಲ್ಲಿರುವ ಈ ನಟಿ ಪತಿ ಚಂದ್ರಶೇಖರ್ ಗೌಡ್ರ ಜೊತೆ ಸೇರಿ ಬಡವರ, ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಇವರಿಗೆ ಜಿಎಸ್ ಶಿವರುದ್ರಪ್ಪ ಅವರ ಪುತ್ರ ಜಿಎಸ್ ಜೈದೇವ್ ಅವರೇ ಸ್ಪೂರ್ತಿ ಅಂತೇ.. ಇವರು ನಡೆಸುತ್ತಿರುವ ದೀನ ದಯಾಳು ಆಶ್ರಯ ಮನೆಗೆ ವಿಶಾಲವಾದ ಹಾಸ್ಟೆಲ್ ನಿರ್ಮಾಣ ಮಾಡಿ ಎರಡು ಕೋಟಿ ಹಣವನ್ನು ಠೇವಣಿ ಇರಿಸಿ ಅದರಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿ ವೇತನದಂತೆ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆ ಮಾಡಿದ್ದಾರೆ..

[widget id=”custom_html-3″]

ತಮ್ಮ ಪ್ರೀತಿಯ ಬೆಳ್ಳಿ ಮರೆಯನ್ನ 15 ಕೋಟಿ ಮಾರಾಟ ಮಾಡಿ ಸಮಾಜ ಸೇವೆಗೆ ಈ ಹಣವನ್ನು ಬಳಸಿದ್ದಾರೆ.. ಅಲ್ಲದೇ 40 ಶಾಲೆಗಳನ್ನು ದತ್ತು ಪಡೆದು ವಿದ್ಯಾರ್ಥಿ ವೆಚ್ಚವನ್ನ ಇವರೇ ಬರಿಸುತ್ತಿದ್ದಾರೆ. ಇದಲ್ಲದೇ ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಶೌಚಾಲಯ, ಶಾಲೆ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗ ಕಲಿಕಾ ಕೇಂದ್ರ.. ಈಗೆ ನೊಂದವರ ಪಾಲಿಗೆ ಆಶಾಕಿರಣವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.. ಯಾವುದೇ ಪ್ರಚಾರವಿಲ್ಲದೇ ಚಿತ್ರರಂಗದಲ್ಲಿ ದುಡಿದ ಹಣವನ್ನೆಲ್ಲಾ ಸಾಮಾಜಿಕ ಸೇವೆಗಾಗಿ ನಿಯೋಗಿಸಿ ಸಾವಿರಾರು ಜನರಿಗೆ ಮಾದರಿಯಾಗಿರುವ ಆರತಿ ಅವರ ಸಮಾಜಮುಖಿ ಸೇವೆಯ ಬಗ್ಗೆ ನಿವೇನ್ ಹೇಳ್ತಿರಾ..