Advertisements

ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ನಟಿಸಿದ ಈ ನಟಿ ಈಗ ಏನು ಮಾಡ್ತಿದಾರೆ ಗೊತ್ತಾ? ಈಕೆ ಈಗಲೂ ತುಂಬಾನೆ ಪೇಮಸ್..

Cinema

ನಮಸ್ತೆ ಸ್ನೇಹಿತರೆ, ರಾಜ್ ಕುಮಾರ್ ಅವರ ಸಾ’ಹಸಮಯ ನಟನೆಯ ಒಂದು ಮು’ತ್ತಿನ ಕಥಾನಾಯಕಿ ಅರ್ಚನಾ.. ತಮ್ಮ ನಿರ್ದೇಶನ ಒಂದು ಮುತ್ತಿನ ಕಥೆ ಚಿತ್ರಕ್ಕೆ ಶಂಕರ್ ನಾಗ್ ಅವರು ಅರ್ಚನಾ ಅವರೇ ಈ ಪಾತ್ರಕ್ಕೆ ಕರೆಕ್ಟ್ ಎಂದು ಒಂದು ಮುತ್ತಿನ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಮಾಡಿದ್ದರು. ನಟಿ ಅರ್ಚನಾ ಅವರು ಹುಟ್ಟಿದ್ದು ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ.. ಕು’ಚಿಪುಡಿ ಹಾಗೂ ಕಥಕಳಿ ನೃತ್ಯವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದ ಅರ್ಚನಾ 80, 90ರ ಸಿನಿ ರಸಿಕರಿಗೆ ತುಂಬಾನೆ ಪರಿಚಯ. ಒಂದು ಮುತ್ತಿನ ಕಥೆಯ ನಂತರ ಬ್ಯೂಟಿ ಅರ್ಚನಾ ಗುರಿ ಚಿತ್ರದಲ್ಲಿ ಮತ್ತೆ ರಾಜ್ ಕುಮಾರ್ ಅವರಿಗೆ ನಾಯಕಿಯಾದರು..

Advertisements

ಕನ್ನಡದಲ್ಲಿ ಆಪ್ತಮಿತ್ರ, ಆಪ್ತರಕ್ಷಕ ಚಿತ್ರ ಇನ್ನೂ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ ಪಿ ವಾಸು ಅವರು ಗುರಿ ಚಿತ್ರವನ್ನು ನಿರ್ದೇಶಿಸಿದ್ದರು. ನಂತರ ನಟಿ ಅರ್ಚನಾ ಟೈಗರ್ ಪ್ರಭಾಕರ್ ಅವರ ಜೊತೆಯಲ್ಲಿ ಬೆಳ್ಳಿ ನಾಗ ಹಾಗೂ ಪ್ರೇಮಿಗಳ ಸವಾಲ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು.. ನಟಿ ಅರ್ಚನಾ ನಟಿಸಿದ ಕನ್ನಡದ ಕಟ್ಟಕಡೆಯ ಚಿತ್ರ ಹುಲಿಯಾ. ನಟ ದೇವರಾಜ್ ನಾಯಕ ನಟರಾಗಿ ಅಭಿನಯಿಸಿದ ಈ ಚಿತ್ರ 1996 ರಲ್ಲಿ ತೆರೆ ಕಂಡಿತ್ತು.. ಹುಲಿಯಾ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಕಥಾ ಸಿನಿಮವಾಗಿ ಮೂಡಿ ಬಂದಿತ್ತು. ಅರ್ಚನ ಕನ್ನಡದಲ್ಲಿ ಕೇವಲ ಐದು ಚಿತ್ರಗಳಲ್ಲಿ ನಟಿಸಿದರು ಅಂದಿನ ಕನ್ನಡ ಪ್ರೆಕ್ಷಕರ ಮನ ಗೆದ್ದಿದ್ದರು..

ಇಂದಿಗೂ ಒಂದು ಮುತ್ತಿನ ಕಥೆ ಅಂದರೆ ತಟ್ಟನೆ ನೆನಪಾಗುವುದು ನಟಿ ಅರ್ಚನಾ ಅವರು. ಅರ್ಚನ ಅವರ ನಾಜೂಕಿನ ನಟನೆಯನ್ನು ಡಾ.ರಾಜ್ ಕುಮಾರ್ ಸೇರಿದಂತೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ.. ತಮಿಳು, ತೆಲುಗು, ಮಲಯಾಳಂ ನಲ್ಲಿ ಅರ್ಚನಾ ಅವರು ನಾಯಕಿಯಾಗಿ ಹಲಾವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಾಳಿ ಹಾಗೂ ಹಿಂದಿಯಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ.. ಎಲ್ಲಾ ಬಾಷೆಗಳಲ್ಲಿಯೂ ನಟಿ ಅರ್ಚನ ಕಲಾತ್ಮಕ ಹಾಗೂ ಪ್ರ’ಯೋಗಾ’ತ್ಮಕ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿರುವುದು ವಿಶೇಷ. ಹಲಾವರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಈ ನಟಿ ಇಂದಿಗೂ ತಮಿಳು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.