Advertisements

ನಟಿ ಭವ್ಯಾ ಅವರ ಗಂಡ ಮತ್ತು ಮಗಳು ಯಾರು ಗೊತ್ತಾ? ಇವರೇ..

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 70 ಮತ್ತು 80 ರ ದಶಕದ ಗೋಲ್ಡನ್ ಹಿರೋಯಿನ್ ಅಂತಲೇ ಹೇಳಬಹುದು.. 80 ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಟನೆ ಮೂಲಕ ಹೊಸ ಚಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನ ಸಂಪಾದಿಸಿದ್ದಾರೆ ಹಲವಾರು ಕಲಾವಿದರು.. ಅವರಲ್ಲಿ ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ನಟಿ ಭವ್ಯಾ. ಭವ್ಯಾ ಅವರು ಜನವರಿ 12, 1966 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.. 17 ವರ್ಷದವರಿದ್ದಾಗ 1983 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದರು. ಮೊದಲ ಚಿತ್ರದಲ್ಲೇ ಕನ್ನಡ ಚಿತ್ರರಂಗದ ದಿಗ್ಗಜರಾದ ಶ್ರೀ ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡಿದ ಪ್ರೇಮ ಪರ್ವ ಸಿನಿಮಾದಲ್ಲಿ ಅವರ ಮಗ ಮುರುಳಿ ಜೊತೆ ನಟಿಸಿದರು..

Advertisements

ನಂತರ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಭವ್ಯಾ ಅವರಿಗೆ ಸಿಕ್ತು. ಪ್ರೇಮ ಪರ್ವ, ಪ್ರಾಣ ಸ್ನೇಹಿತ, ನೀ ಬರೆದ ಕಾದಂಬರಿ, ಬಡ್ಡಿ ಬಂಗಾರಮ್ಮ, ಮತ್ತೆ ಹಾಡಿತು ಕೋಗಿಲೆ, ಹೃದಯ ಹಾಡಿತು, ಸಾಂಗ್ಲಿಯಾನ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳ ನಾಯಕಿಯಾಗಿ ನಟಿಸಿದ್ದಾರೆ.. 1985 ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರೊಡನೆ ನಟಿಸಿದ ನೀ ಬರೆದ ಕಾದಂಬರಿ ಸಿನಿಮಾ ಭವ್ಯಾ ಅವರ ಜೀವನದಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ನಂತರ ವಿಷ್ಣುವರ್ಧನ್ ಅವರೊಡನೆ ಹೃದಯ ಹಾಡಿತು, ಲಯನ್ ಜಗಪತಿ ರಾವ್, ಜನನಾಯಕ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ವಿಷ್ಣುವರ್ಧನ್ ಹಾಗು ಭವ್ಯಾ ಅವರ ಜೋಡಿ ಪೇಮಸ್ ಜೋಡಿ ಎನಿಸಿಕೊಂಡಿತ್ತು.

ಒಂದು ಕಾಲದಲ್ಲಿ ನಟಿ ಭವ್ಯಾ ಅವರು ಕನ್ನಡದ ಟಾಪ್ ಹಿರೋಯಿನ್ ಆಗಿ ಅತಿ ಹೆಚ್ಚು ಸಂಭಾವನೆಯನ್ನ ತೆಗೆದುಕೊಳ್ಳುತ್ತಿದ್ದರು.. ಕಡಿಮೆ ಸಮಯದಲ್ಲಿ 100 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಹೆಗ್ಗಳಿಕೆ ಭವ್ಯಾ ಅವರದ್ದು. ಕನ್ನಡದ ಜೊತೆಗೆ ಕೆಲವು ತಮಿಳು ಸಿನಿಮಾಗಳು ಮತ್ತು ತೆಲುಗು ಸಿನಿಮಾಗಳಲ್ಲು ಕೂಡ ನಟಿಸಿದ್ದಾರೆ.. ಇವರ ವೈಯಕ್ತಿಕ ಜೀವನಕ್ಕೆ ಬಂದರೆ ಮುಖೇಶ್ ಪಾಟಿಲ್ ಎಂಬುವವರ ಜೊತೆ ವಿವಾಹವಾದ್ರು ಭವ್ಯಾ. ಇವರ ಪತಿ ಮುಂಬೈನಲ್ಲಿ ಹೋಟೆಲ್ ಉದ್ಯಮಿ.. ಭವ್ಯಾ ಮುಖೇಶ್ ದಂಪತಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಅವರಿಗೆ ನಟನೆಯಲ್ಲಿ ಆಸಕ್ತಿಯಿಲ್ಲ.. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.. ಮದುವೆ ನಂತರ ಮುಂಬೈನಲ್ಲಿಯೇ ಸೆಟಲ್ ಆಗಿದ್ದಾರೆ ಭವ್ಯಾ. ನಟಿ ಭವ್ಯಾ ಅವರ ಪತಿ ಹಾಗು ಮಗಳ ಪೊಟೋಗಳನ್ನ ನೀವಿಲ್ಲಿ ನೋಡಬಹುದು..