Advertisements

ನಟಿ ಭವ್ಯ ಅವರ ಪತಿ ಮತ್ತು ಮಗಳು ಯಾರು ಗೊತ್ತಾ? ಅಮ್ಮನಿಗಿಂತ ಸುಂದರವಾಗಿರುವ ಮಗಳು..

Cinema

ನಮಸ್ತೆ ಸ್ನೇಹಿತರೆ, 1980 ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದ ಹೆಗ್ಗಳಿಕೆ ಭವ್ಯ ಅವರಿಗೆ ಸಲ್ಲುತ್ತದೆ.. ಆ ಸಮಯದಲ್ಲಿ ಇವರು ನಟಿಸಿದ ಎಲ್ಲಾ ಸಿನಿಮಾಗಳು ಸಹ ಗೆಲುವು ಕಾಣುತ್ತದೆ. ಅತೀ ಕಡಿಮೆ ಸಮಯದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ನಟಿ ಭವ್ಯ ಅವರು ಹಾಗಿದ್ದಾರೆ.. ಯಾವುದೇ ಪಾತ್ರ ಕೊಟ್ಟರು ನಟಿ ಭವ್ಯ ಅವರು ಲೀಲಾ ಜಾಲವಾಗಿ ನಟಿಸುತ್ತಿದ್ದರು..  ಇವರು ಸಿನಿಮಾಗಳಲ್ಲಿ ಸೈಲೆಂಟ್, ಜಂಬ, ಗ್ಲಾಮರ್ ಹುಡುಗಿಯ ರೀತಿ ನಟಿಸಿ ಎಲ್ಲರ ಮನಸಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.. ಈಗಲೂ ಸಹ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಭವ್ಯ ಅವರ ಕುಟುಂಬ ಹೇಗಿದೆ ನೋಡೋಣ..

Advertisements

ನಟಿ ಭವ್ಯ ಅವರ ಬಗ್ಗೆ ಹೇಳಬೇಕೆಂದರೆ.. ಆ ಒಂದು ಕಾಲದಲ್ಲಿ ಇವರ ಸಿನಿಮಾ ಕಾಲ್ ಶೀಟ್ ಗಾಗಿ ತಿಂಗಳುಗಳೇ ಕಾಯಬೇಕಿತ್ತು. ಇನ್ನೂ ಇವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಸಾಹಸಸಿಂಹ ವಿಷ್ಣುವರ್ಧನ್ ಸಿನಿಮಾಗಳಲ್ಲಿ. ಹೌದು ವಿಷ್ಣುವರ್ಧನ್ ಅವರ ಜೋಡಿಯಾಗಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಅತಿ ಹೆಚ್ಚು ಗೆಲುವು ತಂದುಕೊಟ್ಟ ಸಿನಿಮಾಗಳು ಸಹ ವಿಷ್ಣುವರ್ಧನ್ ಮತ್ತು ಭವ್ಯ ಅವರು ಅಭಿನಯಿಸಿದ ಚಿತ್ರಗಳು. ನೀ ಬರೆದ ಕಾದಂಬರಿ, ಜನನಾಯಕ, ಮತ್ತೆ ಹಾಡಿತು ಕೋಗಿಲೆ ಇನ್ನೂ ಅನೇಕ ಹಿಟ್ ಚಿತ್ರಗಳನ್ನು ಈ ಜೋಡಿ ಕೊಟ್ಟಿದ್ದಾರೆ..

ಶಂಕರ್ ನಾಗ್ ಅವರ ಸಿನಿಮಾ ಎಸ್ಪಿ ಸಾಂಗ್ಲಿಯಾನ ಸಿನಿಮಾದಲ್ಲಿ ಭವ್ಯ ಅವರ ನಟನೆಯನ್ನ ಇಂದಿಗೂ ಕೂಡ ಯಾರು ಮರೆಯಲು ಸಾಧ್ಯವಿಲ್ಲ. ಇನ್ನೂ ಇವರ ಪತಿ ಹೆಸರು ಮುಖೇಶ್ ಪಾಟೀಲ್.. ಇವರು ಮುಂಬೈನಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದಾರೆ. ಇವರಿಗೆ ಒಬ್ಬ ಮಗಳಿದ್ದು ಅವರನ್ನು ಸಿನಿಮಾ ಕ್ಷೇತ್ರದಿಂದ ದೂರವಿಟ್ಟಿದ್ದು ಉತ್ತಮ ವಿದ್ಯಾಭ್ಯಾಸಕ್ಕಾಗಿ ಮಗಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ಸಧ್ಯಕ್ಕೆ ಭವ್ಯ ಅವರು ಪ್ಲೆಮಿಂಗೋ ಸೆಲೆಬ್ರಿಟಿಸ್ ವರ್ಡ್ ಎನ್ನುವ ಆ್ಯಕ್ಟಿಂಗ್ ಕ್ಲಾಸ್ ನಡೆಸುತ್ತಿದ್ದು ಇದರಲ್ಲಿ ಪ್ರಿನ್ಸಿಪಲ್ ಕೂಡ ಹಾಗಿದ್ದಾರೆ. ಇನ್ನೂ ಈಗ ಯಾವುದೇ ಸಿನಿಮಾಗಳಲ್ಲಿ ಅವಕಾಶ ಸಿಗದೇ ಧಾರವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಆಗಾಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ‌.. ನಟಿ ಭವ್ಯ ಅವರ ಯಾವ ಚಿತ್ರ ನಿಮಗೆ ತುಂಬಾ ಇಷ್ಟ ಎಂದು ತಿಳಿಸಿ.