Advertisements

ಬಿಗ್ ಬಾಸ್ ಮನೆಯಿಂದ 4ನೇ ವಾರ ಹೊರಬಂದ ಚಂದ್ರಕಲಾ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಇದೀಗ ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಾಲ್ಕನೇ ವಾರದಲ್ಲಿ ಹಿರಿಯ ನಟಿ ಹಾಗೂ ಖ್ಯಾತ ಕಿರುತೆರೆ ನಟಿಯಾಗಿರುವ ಚಂದ್ರಕಲಾ ಮೋಹನ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.. ಇನ್ನೂ ನಾಲ್ಕನೇ ವಾರಕ್ಕೆ ಚಂದ್ರಕಲಾ ಮೋಹನ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂದು ನೋಡೊಣ.. ಕಳೆದ ಕೆಲವು ದಿನಗಳ ಹಿಂದೆ ಚಂದ್ರಕಲಾ ಅವರು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡ ಕೆಲವು ವೈಯಕ್ತಿಕ ಮಾತುಗಳು ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಪ್ರಕ್ರಿಯೆಯಿಂದಾಗಿ ತಿಳಿದು ಬಂದಿದೆ.

Advertisements

ಕೆಲವರು ಅವರ ವೈಯಕ್ತಿಕ ಜೀವನದ ನೋವನ್ನು ಹೇಳಿಕೊಂಡಿದ್ದಾರೆ ಎಂದು ಬೆಂಬಲಕ್ಕೆ ನಿಂತರೆ ಮತ್ತಷ್ಟು ಜನ ತಂದೆಯ ಕುರಿತು ಈ ರೀತಿಯ ವೇದಿಕೆಗಳಲ್ಲಿ ನೋವನ್ನು ಹಂಚಿಕೊಳ್ಳೋದು ನಿಜಕ್ಕೂ ಬೇಡವಾಗಿತ್ತು ಎಂಬ ಅಭಿಪ್ರಾಯ ತಿಳಿಸಿದ್ದಾರೆ.. ಅದು ಏನೇ ಆಗಲಿ ಈ ಎರಡು ಪರ ಹಾಗೂ ವಿರೋಧದ ಚರ್ಚೆಗಳ ನಡುವೆ ಜನರು ನಾಲ್ಕನೇ ವಾರ ಚಂದ್ರಕಲಾ ಮೋಹನ್ ಅವರನ್ನ ಮನೆಯಿಂದ ಹೊರ ಕಳುಹಿಸುವ ನಿರ್ಧಾರ ಮಾಡಿದ್ದಾರೆ.

ಇನ್ನೂ ಈಗೆ ನಾಲ್ಕನೇ ವಾರ ಮನೆಯಿಂದ ಹೊರ ಬಂದಿರುವ ಚಂದ್ರಕಲಾ ಅವರ ಸಂಭಾವನೆ ಎಷ್ಟು ಅನ್ನೋದನ್ನ ನಾವೂ ನೋಡುವುದಾದರೆ.. ಸ್ನೇಹಿತರೆ ಪ್ರತಿವಾರ ಚಂದ್ರಕಲಾ ಮೋಹನ್ ಅವರು 35 ಸಾವಿರ ರೂಪಾಯಿಗಳನ್ನ ಸಂಬಾವನೆಯಾಗಿ ಪಡೆದುಕೊಳ್ಳುತ್ತಿದ್ದರು. ಅಂದರೆ ಒಟ್ಟಾಗಿ ನಾಲ್ಕು ವಾರಗಳಿಗೆ ಒಂದು ಲಕ್ಷದ 40 ಸಾವಿರ ರುಪಾಯಿಗಳನ್ನ ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಅನ್ನೋದು ತಿಳಿದು ಬಂದಿದೆ..