Advertisements

ಉಪ್ಪಿ ಜೊತೆ ನಟಿಸಿದ್ದ ಒಂದು ಕಾಲದ ಈ ಟಾಪ್ ನಟಿಯ ಸ್ಥಿತಿ ಯಾರಿಗೂ ಬೇಡ ! ಏನಾಗಿದೆ ಗೊತ್ತಾ ?

Cinema

ಸ್ನೇಹಿತರೇ ಸಿನಿಮಾ ಜಗತ್ತು ಒಂದು ರೀತಿ ಮಾಯಾ ಲೋಕ ಇದ್ದ ಹಾಗೆ. ಇನ್ನು ಈ ಮಾಯಾಲೋಕದಲ್ಲಿರುವ ನಟ ನಟಿಯರು ಹೇಗೆಲ್ಲಾ ಆಡಂಭರ ಜೀವನ ನಡೆಸುತ್ತಾರೆ ಎಂಬುದನ್ನ ನಾವೆಲ್ಲಾ ನೋಡಿದ್ದೇವೆ. ಆದರೆ ಎಲ್ಲಾ ನಟ ನಟಿಯರು ನಾವಂದುಕೊಂಡಷ್ಟು ಅವರ ಜೀವನ ಸುಲಭವಾಗಿರೋದಿಲ್ಲ. ಅವರ ಜೀವನದಲ್ಲೂ ತುಂಬಾ ಏಳು ಬೀಳುಗಳು ಇದ್ದೆ ಇರುತ್ತವೆ. ಇನ್ನು ನಾವು ನೋಡಿದ ನಾಯಕಿ ನಟಿಯರಲ್ಲಿ ತುಂಬಾ ಇಷ್ಟಪಡುವ ಮುಗ್ದ ನಟಿ ಲೈಲಾ ಕೂಡ ಒಬ್ಬರು. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ತಂದೆಗೆ ತಕ್ಕ ಮಗ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಇದಲ್ಲದೆ ರವಿಚಂದ್ರನ್ ಮತ್ತು ಜಗ್ಗೇಶ್ ನಟನೆಯ ಚಿತ್ರವೊಂದರಲ್ಲೂ ಸಹ ಈ ನಟಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ಕೂಡ ಮಿಂಚಿರುವ ಈ ನಟಿ ತನ್ನ ಅಭಿನಯದಿಂದಲೇ ಖ್ಯಾತ ನಟಿಯಾಗಿದ್ದಾರೆ.

Advertisements

ನಟಿ ಲೈಲಾರವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 6 ಜನವರಿ 2006ರಂದು ಇರಾನ್ ನ ಬ್ಯುಸಿನೆಸ್ ಮೆನ್ ಆಗಿರುವ ಮೆಹದಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಮೆಹದಿಯನ್ನ ಮದುವೆಯಾಗುವುದಕ್ಕೆ ಮುಂಚೆ ಎಂಟು ವರ್ಷಗಳ ಕಾಲ ಅವರ ಜೊತೆ ಡೇಟಿಂಗ್ ಮಾಡುತ್ತಾಳೆ ನಟಿ ಲೈಲಾ. ಇನ್ನು ನಟಿ ಲೈಲಾ ಅವರೇ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಮದುವೆಗೆ ಮುಂಚೆ ನಾಲ್ಕು ವರ್ಷ ಇಬ್ಬರು ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿ ಸಹಜೀವನ ನಡೆಸಿರುತ್ತಾರೆ. ಇನ್ನು ಲೈಲಾ ದಂಪತಿಗೆ 9 ಮತ್ತು 12ವರ್ಷದ ಇಬ್ಬರು ಮಕ್ಕಳಿದ್ದಾರೆ.

ಇನ್ನು ದುಬೈನಲ್ಲಿ ವಾಸ ಮಾಡುತ್ತಿದ್ದ ಇವರ ಜೀವನ ಸಂತೋಷವಾಗಿಯೇ ನಡೆಯುತಿತ್ತು. ಆದರೆ ಲೈಲಾ ಪತಿ ಮೆಹದಿ ಅವರು ನಡೆಸುತ್ತಿದ್ದ ಬ್ಯುಸಿನೆಸ್ ನಲ್ಲಿ ನಷ್ಟ ಉಂಟಾಗಿ ಇವರ ಕುಟುಂಬ ಬೀದಿಗೆ ಬರುವಂತಾಗಿತ್ತು ಎಂದು ಹೇಳಲಾಗಿದೆ. ತನ್ನ ಹೆತ್ತವರನ್ನ, ಹುಟ್ಟಿದ ದೇಶವನ್ನ ಬಿಟ್ಟು ಹೋಗಿದ್ದ ನಟಿ ಲೈಲಾ ತುಂಬಾ ಕಷ್ಟಗಳಿಗೆ ಒಳಗಾಗುತ್ತಾರೆ. ಇನ್ನು ದುಬೈನಲ್ಲಿ ವಾಸ ಮಾಡುತ್ತಿರುವ ಕೆಲ ಭಾರತೀಯರು ನಟಿ ಲೈಲಾ ಅವರ ಕಷ್ಟಗಳನ್ನ ನೋಡಲಾಗದೆ ತಮ್ಮ ಕೈಲಾದಷ್ಟು ಆರ್ಥಿಕವಾಗಿ ಸಹಾಯದ ಹಸ್ತ ಚಾಚಿದ್ದಾರೆ.

ಇನ್ನು ಈ ವಿಷಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂಕಷ್ಟಕ್ಕೆ ಒಳಗಾಗಿರುವ ನಟಿ ಲೈಲಾ ಅವರ ಬಗ್ಗೆ ತಿಳಿಸಿದ್ದಾರೆ. ‘ದೂರದ ಬೆಟ್ಟ ನುಣ್ಣಗೆ’ ಅಂತ ನಮ್ಮ ಹಿರಿಯರು ಹೇಳಿರುವ ಮಾತುಗಳು ಸತ್ಯವೇ ಸರಿ. ಸುಖ ಜೀವನ ಅರಸಿ ಹೋಗುವುದು ತಪ್ಪಲ್ಲ. ಅದಕ್ಕಾಗಿ ದೇಶವನ್ನೇ ಬಿಟ್ಟು ಹೋಗುವ ಮುಂಚೆ ಸ್ವಲ್ಪ ಯೋಚನೆ ಮಾಡಬೇಕು. ನಾವಿಲ್ಲಿದ್ದಲ್ಲಿಯೇ ಸಂತೋಷವನ್ನ ಹುಡುಕಿ ಇದ್ದುದರಲ್ಲಿ ಸುಖ ಪಡುವುದು ಉತ್ತಮ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನೆಂಬುದನ್ನ ತಿಳಿಸಿ..