Advertisements

ನನ್ನ ತಂದೆ ಯಾರು ಅಂತ ನನಗೆ ಗೊತ್ತಿರಲಿಲ್ಲ ಎಂದ ನಟಿ ಲಕ್ಷ್ಮಿ ಮಗಳು.. ಈ ರೀತಿ ಏಳಲು ಕಾರಣವೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಗಂಡ ಹೆಂಡತಿ ದೂರ ಆದ್ಮೇಲೆ ಮಕ್ಕಳು ಯಾವ ರೀತಿಯ ಸಂಕಷ್ಟಕ್ಕೆ ಸಿಲುಕುತ್ತಾರೆ ಅನ್ನೋದಕ್ಕೆ ನಟಿ ಲಕ್ಷ್ಮಿ ಅವರ ಕಥೆಯೇ ಒಂದು ಉದಾಹರಣೆ.. 1969 ರಲ್ಲಿ ಮೊದಲ ಮದುವೆಯಾದ ನಟಿ ಲಕ್ಷ್ಮಿ ಅವರು ಕೇವಲ ನಾಲ್ಕು ವರ್ಷಕ್ಕೆ ಮೊದಲನೇ ಗಂಡ ಬಾಸ್ಕರ್ ಅವರಿಗೆ ವಿ’ಚ್ಚೇದನ ಕೊಟ್ಟು ತನ್ನ ಮಗಳು ಐಶ್ವರ್ಯಳನ್ನು ಕರೆದುಕೊಂಡು ಮದ್ರಾಸ್ ಗೆ ಬಂದುಬಿಟ್ಟರು. ಮಗಳನ್ನು ತನ್ನ ಬಳಿಯೇ ಇರಿಸಿಕೊಂಡು ಪ್ರೀತಿಯಿಂದ ಸಾಕಿದರು.. ಆದರೆ ಯಾವತ್ತೂ ಮಗಳಿಗೆ ತಂದೆಯನ್ನು ತೋರಿಸಲಿಲ್ಲ. ಕೊನೆಗೆ ಪೊಟೊದಲ್ಲಿ ಕೂಡ ಇವರೇ ನಿನಗೆ ಜನ್ಮ ಕೊಟ್ಟ ತಂದೆ ಎಂದು ಹೇಳಲಿಲ್ಲ. ನಟಿ ಲಕ್ಷ್ಮಿ ಅವರ ಮಗಳು ಐಶ್ವರ್ಯ ಅವರಿಗೆ 19 ವರ್ಷ ಆದಾಗ ಕನ್ನಡದ ಸಿನಿಮಾ ಹೊಸ ಕಾವ್ಯ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.‌

Advertisements

ಆಗ ಪತ್ರಕರ್ತನೊಬ್ಬ ನಿಮ್ಮ ತಂದೆ ಯಾರು ಎಂದು ನಿನಗೆ ಗೊತ್ತೇ ಎಂದು ಪ್ರಶ್ನಿಸಿದರು.. ತನ್ನ ತಂದೆ ಯಾರು ಎಂದು ಗೊತ್ತಿಲ್ಲದ ಐಶ್ವರ್ಯ, ಕನಿಷ್ಠ ಅವರ ಮುಖವಾದರು ಒಮ್ಮೆ ನೋಡಬೇಕು ಎಂದುಕೊಂಡರು. ಕೆಲವು ದಿನಗಳ ನಂತರ ಐಶ್ವರ್ಯ ಅವರಿಗೆ ಒಂದು ಲೆಟರ್ ಬರುತ್ತದೆ.. ಅದರಲ್ಲಿದ್ದ ಪದಗಳು ಐಶ್ವರ್ಯ ಅವರಿಗೆ ಹೊಸ ಚೇತನ ಕೊಟ್ಟಿತು. ನಿಮ್ಮ ತಂದೆ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರ ಹೆಸರು ಬಾಸ್ಕರ್, ನಾನು ಅವರ ಅಸಿಸ್ಟೆಂಟ್.. ನಿಮ್ಮ ತಂದೆ ತುಂಬಾ ಒಳ್ಳೆಯವರು. ಈ ಪತ್ರದಲ್ಲಿ ನಿಮ್ಮ ತಂದೆಯ ಪೋನ್ ನಂಬರ್ ಇದೆ ನೀವು ಮತ್ತು ನಿಮ್ಮ ತಂದೆ ಒಂದಾದರೆ ನಾನು ತುಂಬಾ ಸಂತೋಷ ಪಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿತ್ತು..

ಪತ್ರದಲ್ಲಿದ್ದ ಪೋನ್ ನಂಬರ್ ಗೆ ಕಾಲ್ ಮಾಡಿದರು ಐಶ್ವರ್ಯ. ಆಕಡೆ ಪೋನ್ ರಿಸೀವ್ ಮಾಡಿದ ತಂದೆ ಬಾಸ್ಕರ್ ಅವರು ಹಲೋ ಎಂದರು.. 19 ವರ್ಷಗಳ ನಂತರ ತಂದೆಯ ಮೊದಲ ಮಾತು ಕೇಳಿದ ಐಶ್ವರ್ಯ ಕಣ್ಣಲ್ಲಿ ನೀರು ಬರುತ್ತಿತ್ತು. ನೀವೇನಾ ನನ್ನ ತಂದೆ ಎಂದು ಕೇಳಿದರು ಐಶ್ವರ್ಯ.. ಹೌದಮ್ಮ ನಾನೇ ನಿನ್ನ ತಂದೆ ಎಂದು ಆಕಡೆಯಿಂದ ಉತ್ತರ ಬಂತು. ಮತ್ಯಾಕೆ ಇಷ್ಟು ವರ್ಷ ನನ್ನನ್ನು ನೋಡಲು ಒಂದು ಬಾರಿಯೂ ನೀವು ಬರಲಿಲ್ಲ ಎಂದು ಪ್ರಶ್ನಿಸಿದರು ಐಶ್ವರ್ಯ. ಅದಕ್ಕೆ ಉತ್ತರಿಸಿದ ತಂದೆ.. ನನ್ನ ಹಾಗು ನಿಮ್ಮ ತಾಯಿಯ ಮಧ್ಯೆ ಹಲವಾರು ವಿಭೇದಗಳು ಇದ್ದದ್ದು ನಿಜ.. ಆದರೆ ನಿಮ್ಮ ತಾಯಿ ತುಂಬಾ ಕಷ್ಟಪಟ್ಟು ನಿನಗೆ ಜನ್ಮ ಕೊಟ್ಟಳು ಹಾಗಾಗಿ ನಿಮ್ಮಿಬ್ಬರ ಮಧ್ಯೆ ನಾನು ಬಂದು ನಿನ್ನನ್ನು ನಿಮ್ಮ ತಾಯಿಯಿಂದ ದೂರ ಮಾಡುವುದು ನನಗೆ ಇಷ್ಟವಿರಲಿಲ್ಲ‌..

ನೀನು ಯಾವಾತ್ತಾದ್ರೂ ನನ್ನನ್ನು ಹುಡುಕಿಕೊಂಡು ಬರಬಹುದು ಎಂದು ಕಾಯುತ್ತಿದ್ದೇನೆ.. ಹಾಗಾಗಿ ನಿನ್ನ ನೆನಪಲ್ಲೇ ಬದುಕುತ್ತಿದ್ದೇನೆ. ನಿನ್ನನ್ನು ನನ್ನಷ್ಟು ಪ್ರೀತಿಸುವವರು ಈ ಪ್ರಪಂಚದಲ್ಲೇ ಯಾರು ಇರೋದಿಲ್ಲ ಎಂದರು ತಂದೆ ಬಾಸ್ಕರ್ ಅವರು.. ತಂದೆಯ ಮಮಕಾರದ ಮಾತುಗಳನ್ನು ಕೇಳಿದ ಐಶ್ವರ್ಯ ಗಳ ಗಳನೆ ಅಳಲು ಶುರುಮಾಡಿದರು. ನಂತರ ಒಂದು ದಿನ ತಂದೆಯನ್ನ ಬೇಟಿಯಾದ ಐಶ್ವರ್ಯಾಗೆ ಆಶ್ಚರ್ಯ..

ಯಾಕೆಂದರೆ ವಿಚ್ಚೇದನದ ನಂತರ ತಂದೆ ಯಾರನ್ನೂ ಮದುವೆ ಹಾಗಿರಲಿಲ್ಲ. ಒಂಟಿಯಾಗಿ ಬದುಕುತ್ತಿದ್ದರು. ಹಾಗೂ ಐಶ್ವರ್ಯ ನೊಡುವುದಕ್ಕೆ ಥೇಟ್ ತಂದೆಯ ಹಾಗೆ ಇದ್ದರು.. ಈಗೆ ತಂದೆ ತಾಯಿಯ ಜಗಳಗಳಿಂದ ಸರಿಯಾಗಿ ಪೋಷಕರ ಪ್ರೀತಿಯನ್ನು ಪಡೆಯಲು ಆಗದೇ ಅದೆಷ್ಟೋ ಮಕ್ಕಳು ಪ್ರತಿದಿನ ಕಣ್ಣೀರಿನಲ್ಲಿ ಜೀವನ ನಡೆಸಿರುತ್ತಾರೆ. ನಿಮ್ಮಿಬ್ಬರ ಇಗೋ ಮತ್ತು ಜಗಳಗಳಿಂದ ಮಕ್ಕಳನ್ನು ನಿಮ್ಮ ಪ್ರೀತಿಯಿಂದ ವಂಚಿ’ತರನ್ನಾಗಿ ಮಾಡಬೇಡಿ ಅನ್ನೋದೇ ಈ ಮಾಹಿತಿಯ ಆಶಯ..