Advertisements

ಮೂರು ಮದುವೆ ಮಾಡಿಕೊಂಡ ನಟಿ ಲಕ್ಷ್ಮಿ ಬಾಳಲ್ಲಿ ನಡೆಯಬಾರದ ಘಟನೆ ನಡೆದು ಹೋಯಿತು !

Cinema

ನಮಸ್ತೇ ಸ್ನೇಹಿತರೇ, ಈ ಆಧುನಿಕ ಕಾಲದಲ್ಲಿ ಒಂದು ಮದುವೆಯಾಗಿ ಜೀವನ ಸಾಗಿಸುವುದೇ ಕಷ್ಟವಾಗಿದೆ. ಆದರೆ ಎರಡು, ಮೂರು ಮದುವೆಯಾದವರ ಪಾಡೇನು ಅಲ್ಲವೇ. ಈ ತರ ಯೋಚನೆ ಮಾಡುವುದಕ್ಕೂ ಕಷ್ಟವಾಗುತ್ತದೆ. ಆದರೆ ಒಬ್ಬ ಮಹಿಳೆ ಮೂರು ಸಲ ತಾಳಿ ಕಟ್ಟಿಸಿಕೊಳ್ಳುತ್ತಾಳೆ ಎಂದರೆ ನೀವೇ ಹೇಳಿ ಅವರಿಗೆ ಎಷ್ಟು ಧೈರ್ಯ ಬೇಕಾಗುತ್ತೆ, ಸಮಾಜದಲ್ಲಿ ಏನೆಲ್ಲಾ ಸವಾಲುಗಳನ್ನ ಎದುರಿಸಬೇಕಾಗುತ್ತೆ ಅಲ್ಲವೇ. ಅಚ್ಚರಿ ಎಂದರೆ ೮೦ರ ದಶಕದಲ್ಲಿ ದಕ್ಷಿಣ ಭಾರತದ ಟಾಪ್ ನಟಿಯಾಗಿ ಮೆರೆದ ನಟಿ ಲಕ್ಷ್ಮಿ ಕೂಡ ಸೇರುತ್ತಾರೆ ಎಂದರೆ ನೀವು ನಂಬಲೇಬೇಕು.

ನಟಿ ಲಕ್ಷ್ಮಿಯವರು ಹುಟ್ಟಿದ್ದು, ಡಿಸೆಂಬರ್ 13, 1952ರಂದು ಯರಗುಡಿಪಾಡಿ ವೆಂಕಟ ಮತ್ತು ಮಹಾಲಕ್ಷ್ಮಿ ದಂಪತಿಯ ಪುತ್ರಿಯಾಗಿ ತಮಿಳುನಾಡಿನ ಚೆನ್ನೈನಲ್ಲಿ. ೧೯೬೧ರಲ್ಲಿ ಶ್ರೀವಲ್ಲಿ ಎಂಬ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ ಲಕ್ಷ್ಮಿ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಸೈ ಎನಿಸಿಕೊಂಡವರು. ವರನಟ ಡಾ.ರಾಜ್ ಕುಮಾರ್. ಅನಂತ್ ನಾಗ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ತೆಲುಗು, ತಮಿಳಿನ ಮೇರು ನಂತರ ಜೊತೆ ಅಭಿನಯಿಸಿದ್ದಾರೆ. ಲೆಕ್ಕವಿಲ್ಲದಷ್ಟು ಅವಾರ್ಡ್ಸ್ ಗಳಿಗೆ ಭಾಜನರಾಗಿದ್ದಾರೆ ಬಹುಭಾಷಾ ಖ್ಯಾತ ನಟಿ ಲಕ್ಷ್ಮಿಯವರು. ಹೆಂಗಳೆಯರ ಅಚ್ಚುಮೆಚ್ಚಿನ ನಟಿಯಾಗಿರುವ ಲಕ್ಷ್ಮಿಯವರು ಜ್ಯುಲಿ ಅಂತಲೇ ಖ್ಯಾತರಾಗಿದ್ದಾರೆ.

Advertisements

ಇನ್ನು ಲಕ್ಷ್ಮಿಯವರ ವೈಯುಕ್ತಿಕ ವಿಷ್ಯಕ್ಕೆ ಬಂದರೆ ಅಷ್ಟೇನೂ ಸರಿ ಇಲ್ಲ ಎಂದರೆ ತಪ್ಪಾಗೊದಿಲ್ಲ. ಹೌದು, ಲಕ್ಷ್ಮಿಯವರು ಮದುವೆಯಾಗಿರೋದು ಒಬ್ಬರನ್ನಲ್ಲ, ಮೂರು ಜನರನ್ನ. ಹೌದು, ಲಕ್ಷ್ಮಿಯವರು ಮೊದಲಿಗೆ ವಿಮಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಎಂಬುವವರ ಜೊತೆ ಮದುವೆಯಾಗುವುದರ ಮೂಲಕ 1969ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಈ ದಂಪತಿಗೆ 1971ರಲ್ಲಿ ಐಶ್ವರ್ಯ ಎಂಬ ಮಗಳು ಹುಟ್ಟುತ್ತಾಳೆ. ಮಗಳು ಐಶ್ವರ್ಯ ಕೂಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಲ್ಲಿ ಹೀರೋಯಿನ್ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಲಕ್ಷ್ಮಿ ಮತ್ತು ಭಾಸ್ಕ ರ್ ಅವರ ನಡುವೆ ಹೊಂದಾಣಿಕೆ ಇಲ್ಲದೆ ೫ ವರ್ಷಗಳ ಸಂಸಾರದ ಬಳಿಕ 1974ರಲ್ಲಿ ಇವರಿಬ್ಬರ ನಡುವೆ ವಿ’ಚ್ಛೇದನವಾಗುತ್ತದೆ.

ಬಳಿಕ ನಟಿ ಲಕ್ಷ್ಮಿಯವರು ತಮ್ಮ ಕೋ ಸ್ಟಾರ್ ಆಗಿದ್ದ ಮೋಹನ್ ಶರ್ಮಾ ಅವರ ಜೊತೆ 1975ರಲ್ಲಿ ಎರಡನೇ ಬಾರಿಗೆ ಹಸೆಮಣೆ ಏರುತ್ತಾರೆ. ಇವರ ಜೊತೆ ಕೇವಲ ೫ ವರ್ಷ ದಾಂಪತ್ಯ ಜೀವನ ನಡೆಸಿದ ನಟಿ ಲಕ್ಷ್ಮಿಯವರು, ಈ ಸಂಬಂಧ ಕೂಡ ಮುರಿದುಬಿದ್ದಿದ್ದು ಮೋಹನ್ ಶರ್ಮಾ ಅವರಿಂದ 1980ರಲ್ಲಿ ಬೇರೆಯಾಗುತ್ತಾರೆ. ಇಷ್ಟಕ್ಕೂ ನಿಲ್ಲದ ನಟಿ ಲಕ್ಷ್ಮಿಯವರು 1988ರ ಸಮಯದ್ಲಲಿ ಚಿತ್ರವೊಂದರ ಚಿತ್ರೀಕರಣದ ವೇಳೆ ನಟ ನಿರ್ದೇಶಕರು ಆಗಿದ್ದ ಎಂ.ಶಿವಚಂದ್ರನ್ ಜೊತೆ ಪ್ರೀತಿ ಏರ್ಪಟ್ಟಿದ್ದು 1987ರಲ್ಲಿ ಇವರ ಜೊತೆ ಲಕ್ಷ್ಮಿಯವರ ಮದುವೆ ಆಗುತ್ತೆ. ಇನ್ನು ಲಕ್ಷ್ಮಿ ಮತ್ತು ಶಿವಚಂದ್ರನ್ ದಂಪತಿ ಸಂಯುಕ್ತ ಎಂಬ ಹುಡುಗಿಯನ್ನ 2000ನೇ ಇಸವಿಯಲ್ಲಿ ದತ್ತು ಮಗಳಾಗಿ ಪಡೆಯುತ್ತಾರೆ.