Advertisements

ಈ ನಟಿಯ ತಂದೆ ನಾನೆ, ಬೇಕಾದ್ರೆ ಡಿಎನ್ಎ ಟೆಸ್ಟ್ ಮಾಡಿಸಿ ಎಂದ ವಾಚ್ ಮ್ಯಾನ್! ಕೊರ್ಟ್ ಗೆ ಬರದೇ ತಪ್ಪಿಸಿಕೊಂಡ ಟಾಪ್ ನಟಿ..

Kannada Mahiti

ನಮಸ್ತೆ ಸ್ನೇಹಿತರೆ, ಭಾರತದಲ್ಲಿ ಮಿಂಚಿದ ಬ್ಯೂಟಿಫುಲ್‌ ನಟಿ ಲಿಸ್ಸಿ ಲಕ್ಷ್ಮಿ.. ಆರು ವರ್ಷ ಇದ್ದಾಗಲೇ ಆಕೆಯ ತಂದೆ ತಾಯಿ ಬೇರೆ ಬೇರೆಯಾದರು. ನಂತರ ತಂದೆ ಬೇರೆ ಮದುವೆ ಮಾಡಿಕೊಂಡು ಇನ್ನೊಂದು ಸಂಸಾರ ಇಟ್ಟರೆ ಲಿಸ್ಸಿ ತಾಯಿ ಮಾತ್ರ ಆ ರೀತಿ ಮಾಡಲಿಲ್ಲ.. ಮಗಳನ್ನು ಕಷ್ಟಪಟ್ಟು ಸಾಕಿದರು. ನಂತರ 17 ವರ್ಷದ ವಯಸ್ಸಿಗೆ ಲಿಸ್ಸಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹಿಟ್ ಚಿತ್ರಗಳ ಮೂಲಕ ಟಾಪ್ ನಟಿಯಾಗಿ ಬೆಳೆದರು.. ಆದರೆ ತಂದೆ ಯಾವತ್ತೂ ಲಿಸ್ಸಿಯನ್ನು ನೋಡಲು ಬರಲಿಲ್ಲ. ಆಕೆಯ ಕಷ್ಟವನ್ನು ಒಂದು ಬಾರಿಯೂ ಕೇಳಲಿಲ್ಲ.. ಡೈರೆಕ್ಟರ್ ಹಾಗು ಪ್ರೊಡ್ಯೂಸರ್ ಪ್ರಿಯದರ್ಶನ್ ಅವರನ್ನು 1990 ರಲ್ಲಿ ಪ್ರೀತಿಸಿ ಮದುವೆಯಾದರು ನಟಿ ಲಿಸ್ಸಿ.

Advertisements

ಆದರೆ 2014 ರಲ್ಲಿ ಗಂಡನಿಗೆ ವಿಚ್ಚೇದನ ಕೊಟ್ಟ ಲಿಸ್ಸಿಗೆ ಆಗಾಗಲೇ ಮಕ್ಕಳಿದ್ದ ಕಾರಣ ಗಂಡನ ಕಡೆಯಿಂದ ತುಂಬಾ ಆಸ್ತಿ ಈ ನಟಿಯ ಪಾಲಾಯಿತು.. ಆಕಡೆ ಲಿಸ್ಸಿ ತಂದೆ ತನ್ನ ಎರಡನೇ ಹೆಂಡತಿ ಅನಾರೋಗ್ಯದಿಂದ ತೀರಿಕೊಂಡ ಕಾರಣ ಬೀದಿಗೆ ಬಂದರು. ಹೊಟ್ಟೆ ಪಾಡಿಗಾಗಿ ವಾಚ್ ಮ್ಯಾನ್ ಆಗಿ, ಆಫಿಸ್ ಕ್ಲೀನರ್ ಆಗಿ ಕೆಲಸ ಮಾಡಿದರು..  ಒಂದು ದಿನ ಕಾಲು ಜಾರಿ ಬಿದ್ದ ಕಾರಣ ಮೂಳೆ ಮುರಿದುಕೊಂಡು ಕೆಲಸ ಮಾಡುವ ಸ್ಥಿತಿ ಕಳೆದುಕೊಂಡರು ನಟಿ ಲಿಸ್ಸಿ ತಂದೆ. ಆಗ ವಿಧಿ ಇಲ್ಲದೇ ತನ್ನ ಮಗಳಾದ ನಟಿ ಲಿಸ್ಸಿಯನ್ನು ಬೇಟಿ ಮಾಡಿ ಸ್ವಲ್ಪ ಸಹಾಯ ಮಾಡುವಂತೆ ಕೇಳಿಕೊಂಡರು ತಂದೆ..

ಆದರೆ ನಟಿ ಲಿಸ್ಸಿ ಮಾತ್ರ ಒಂದು ಚೂರು ಕರುಣೆ ತೋರೋದು ಇರ್ಲಿ ತಂದೆಯನ್ನು ಹತ್ತಿರಕ್ಕು ಬಿಟ್ಟುಕೊಳ್ಳಲಿಲ್ಲ. ಇದರಿಂದ ಕಂಗಾಲಾದ ತಂದೆ ಮಗಳಿಂದ ಸಹಾಯ ಕೊಡಿಸುವಂತೆ ಕೋರ್ಟ್ ಮೆಟ್ಟಿಲೇರಿದರು.. ಕೂಲಂಕುಷವಾಗಿ ಪರಿಶೀಲಿಸಿದ ಕೋರ್ಟ್ ತಂದೆಗೆ ಪ್ರತೀ ತಿಂಗಳು 5500 ರೂಪಾಯಿ ಕೊಡುವಂತೆ ನಟಿ ಲಿಸ್ಸಿಗೆ ಆದೇಶಿಸಿತು. ಆದರೆ ಅದಕ್ಕೆ ಕಿವಿ ಕೊಡಲಿಲ್ಲ ಲಿಸ್ಸಿ.. ಆಗ ಹೈಕೋರ್ಟ್ ಮೆಟ್ಟಿಲೇರಿದರು ತಂದೆ. ಅಲ್ಲಿಯೂ ಕೂಡ ತಂದೆಗೆ 10 ಸಾವಿರ ಕೊಡುವಂತೆ ಹೇಳಿತು ಹೈಕೋರ್ಟ್.

ಅದಕ್ಕೂ ಲೆಕ್ಕಿಸದ ನಟಿ ಲಿಸ್ಸಿ ಕೋರ್ಟ್ ಗೆ ಹಾಜರಾಗದೇ ಕೇ’ಸ್ ವರ್ಷಗಟ್ಟಲೇ ಎಳೆಯುವಂತೆ ಮಾಡಿದರು.. ಕೊನೆಗೆ ಅನಾರೋಗ್ಯದಿಂದ ನಟಿ ಲಿಸ್ಸಿ ತಂದೆ ಇತ್ತೀಚೆಗೆ ಸಾ’ವನ್ನಪ್ಪಿದ್ದರು. ಮಗಳನ್ನು ಬೀದಿಯಲ್ಲಿ ಬಿಟ್ಟು ಹೋದ ತಂದೆ ಮಾಡಿದ್ದು ದೊಡ್ಡ ತಪ್ಪು.. ಆದರೆ ಆಗ ನಟಿ ಲಿಸ್ಸಿ ಜೊತೆ ಆಕೆಯ ತಾಯಿ ಆದ್ರೂ ಇದ್ದಳು. ತಂದೆ ಬೀದಿಗೆ ಬಂದಾಗ ಅವರ ಜೊತೆ ಯಾರು ಕೂಡ ಇರಲಿಲ್ಲ.. ಹಾಗಾಗಿ ಜನ್ಮ ಕೊಟ್ಟ ತಂದೆಯ ಕೊನೆಯ ದಿನಗಳನ್ನಾದ್ರೂ ಸಂತೋಷಮಯ ಮಾಡಬಹುದಿತ್ತು ನಟಿ ಲಿಸ್ಸಿ ಎಂದು ಅನಿಸುತ್ತಾ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು..