Advertisements

ನಟಿ ಮಾಧವಿ ಮನೆ, ಮಕ್ಕಳು.. ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ತಾನು ಎಷ್ಟೇ ಬೆಳೆದು ಬಂದ ದಾರಿಯನ್ನ.. ಸಹಾಯ ಮಾಡಿದವರನ್ನ ಮರೆಯದ ಕೆಲವೇ ಕೆಲವು ನಟಿಯರಲ್ಲಿ ನಟಿ ಮಾಧವಿ ಕೂಡ ಒಬ್ಬರು. ತಮ್ಮ ಪರ್ಸನಲ್ ವೆಬ್ಸೈಟ್ ನಲ್ಲಿ ಎಲ್ಲಾ ಸ್ಟಾರ್ ಗಳಿಗಿಂತ ಮೊದಲು ಡಾ.ರಾಜ್ ಕುಮಾರ್ ಜೊತೆಗಿನ ಪೊಟೊ ಅಪ್ಲೋಡ್ ಮಾಡಿದ ಈ ನಟಿ.. ತಮಗೆ ರಾಜ್ ಕುಮಾರ್ ಬಗ್ಗೆ ಇರುವ ಗೌರವ, ಕನ್ನಡಿಗರ ಬಗ್ಗೆ ಇರುವ ಪ್ರೀತಿ ಎಷ್ಟು ಎಂದು ತೋರಿಸಿದ್ದಾರೆ.. ನಟಿ ಮಾಧವಿ ಅಂತಿಂತ ಸಾಮಾನ್ಯ ನಟಿ ಯಾಗಿರಲಿಲ್ಲ. ಯಾವುದೇ ಪಾತ್ರ, ಎಷ್ಟೇ ಕಷ್ಟ, ಎಷ್ಟೇ ವಿಭಿನ್ನ ಪಾತ್ರ ಆದ್ರೂ ಅದಕ್ಕೆ ಹೊಂದಿಕೊಂಡು.. ಭಾವನೆಗಳನ್ನ ಒಪ್ಪಿಸುತ್ತಿದ್ದ ಅಪ್ರತಿಮ ಕಲಾವಿದೆ ಈ ಮಾಧವಿ.

Advertisements

ಹಾಗಾದರೆ ಅವರು ಈಗ ಎಲ್ಲಿದ್ದಾರೆ. ಅವರ ಮನೆ ಹೇಗಿದೆ.. ಅವರು ಏನು ಮಾಡ್ತಾಯಿದಾರೆ. ತಿಳಿದರೆ ಆಶ್ಚರ್ಯ ಪಡುತ್ತೀರಾ.. ಕನ್ನಡ ಸೇರಿ ದಕ್ಷಿಣ ಭಾರತ ಹಾಗೂ ಹಿಂದಿಯಲ್ಲಿ ಸಖತ್ ಪಾಪ್ಯುಲರ್ ಪಡೆದ ನಟಿ ಮಾಧವಿ.. ತಮಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನೇ ಮಾಡುತ್ತಿದ್ದರು. ಇವರ ಹಾಗೂ ಡಾ.ರಾಜ್ ಕುಮಾರ್ ಕಾಂಬಿನೇಷನ್ ಸಖತ್ ಆಗಿತ್ತು.‌‌‌. ಕೊನೆಗೆ ನಟನೆಯ ಜೀವನ ಸಾಕು ಮದುವೆ ಆಗೋಣ ಎಂದುಕೊಂಡಾಗ ತಮ್ಮ ಗುರುಗಳ ಮಾರ್ಗದರ್ಶನದಂತೆ ಅಮೇರಿಕಾದಲ್ಲಿ ವಾಸವಿರುವ ರಾಮ್ ಶರ್ಮಾ ಅವರನ್ನ 1996 ರಲ್ಲಿ ಮದುವೆಯಾಗಿ ಅಮೇರಿಕಾಗೆ ಹೊರಟರು ನಟಿ ಮಾಧವಿ. ಅಷ್ಟೇ ಅಲ್ಲದೇ ತಮ್ಮ ಪೋಷಕರನ್ನು ಸಹ ಕರೆದುಕೊಂಡು ಹೋಗಿ ಪ್ರೀತಿಯಿಂದ ಸಾಕಿದರು..

ನಟಿ ಮಾಧವಿ ಅವರಿಗೆ ಮೂವರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ‌. ಅವರಿಗೆ ಭರತನಾಟ್ಯ, ಭಾರತೀಯ ಸಂಸ್ಕೃತಿಯನ್ನು ಚಾಚು ತಪ್ಪದೇ ಹೇಳಿಕೊಡುತ್ತಿರುವ ಈ ನಟಿಯ ಜೀವನವೇ ಒಂದು ಮಾದರಿ. ನಟಿ ಮಾಧವಿಯ ಗಂಡ ರಾಮ್ ಶರ್ಮಾ ಅಮೇರಿಕಾದಲ್ಲಿ ದೊಡ್ಡ ಫಾರ್ಮಸಿಟಿ ಕಂಪನಿಯನ್ನು ಹೊಂದಿದ್ದಾರೆ.. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಗಂಡನ ಸಹಾಯಕ್ಕೆ ನಿಂತ ನಟಿ ಮಾಧವಿ ಗಂಡನ ಫಾರ್ಮಸಿಟಿ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದು.. ನಟನೆಯಲ್ಲಿ ಯಶಸ್ಸು ಗಳಿಸಿದಂತೆ ಬ್ಯುಸಿನೆಸ್ ನಲ್ಲೂ ಯಶಸ್ಸು ಸಾಧಿಸಿದ್ದಾರೆ..

ಆಗೆ ಸುಮಾರು 10 ಸಾವಿರ ಕೋಟಿಯ ವಡತಿಯಾಗಿದ್ದಾರೆ ಈ ನಟಿ. ಅಮೇರಿಕಾದಲ್ಲಿ ಸುಂದರ ಸಂಸಾರದ ಜೊತೆ ಸುಂದರ ಮನೆಯನ್ನು ಕಟ್ಟಿಕೊಂಡಿದ್ದಾರೆ ನಟಿ ಮಾಧವಿ ಅನ್ನೋದು ಸಂತೋಷದ ವಿಷಯ.. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಮಾನವನ್ನು ಓಡಿಸೋದನ್ನು ಕಲಿತಿರುವ ನಟಿ ಮಾಧವಿ ಅವರು ಒಬ್ಬ ಮಹಿಳೆ ಎಷ್ಟು ಚೆನ್ನಾಗಿ ಜೀವನವನ್ನ ಸುಂದರವಾಗಿಸಿಕೊಳ್ಳಬಹುದು ಅನ್ನೋದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ.. ಮತ್ತೆ ನಟನೆ ಮಾಡುವುದಿಲ್ಲ ಎಂದು ಹೇಳಿದ ಈ ಸುಂದರ ನಟಿ ಈಗ ನನಗೆ ಮಕ್ಕಳು ಮತ್ತು ಗಂಡನನ್ನ ಸಂತೋಷವಾಗಿ ಇರಿಸೋದೆ ಮುಖ್ಯ ಎಂದು ಹೇಳಿದ್ದಾರೆ..