Advertisements

ಸುನಿಲ್ ಅವರನ್ನ ಕಳೆದುಕೊಂಡು ನಟಿ ಮಾಲಶ್ರೀ ಅನುಭವಿಸಿದ್ದ ಕಷ್ಟ ಎಂತದ್ದು ಗೊತ್ತಾ ? ಕನಸಿನ ರಾಣಿಗೆ ಮೊದಲು ಅವಕಾಶ ಕೊಟ್ಟಿದ್ದು ಇವರೇ ನೋಡಿ..

Cinema

ನಮಸ್ತೆ ಸ್ನೇಹಿತರೇ, ಕನ್ನಡ ಚಿತ್ರರಂಗದ ಕನಸಿನ ರಾಣಿ ಎಂದೇ ಗುರುತಿಸಿಕೊಂಡವರು ನಟಿ ಮಾಲಾಶ್ರೀ. ಆಕ್ಷನ್ ಚಿತ್ರಗಳನ್ನ ಕೇವಲ ನಟರಷ್ಟೇ ಮಾಡಬಲ್ಲರು ಎನ್ನುತ್ತಿದ್ದ ಆ ಕಾಲದಲ್ಲೇ ರೆಬೆಲ್ ಲೇಡಿ ನಟಿಯಾಗಿ ಮಿಂಚಿದವರು ಇದೆ ಮಾಲಶ್ರೀ. ನಾಯಕ ನಟ ಇಲ್ಲದೆಯೇ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳನ್ನ ಕೊಟ್ಟ ಕೀರ್ತಿ ಮಾಲಾಶ್ರಿಯವರಿಗೆ ಸಲ್ಲುತ್ತದೆ. ಅಂದ ಹಾಗೆ ಆಗಸ್ಟ್ 10, 1973ರಂದು ಒಂದು ಸಾಮಾನ್ಯ ತಮಿಳು ಕುಟುಂಬದಲ್ಲಿ ಮದ್ರಾಸ್ ನಲ್ಲಿ ಮಾಲಾಶ್ರಿಯವರು ಜನಿಸುತ್ತಾರೆ. ನಟಿ ಮಾಲಾಶ್ರಿಯವರ ನಿಜವಾದ ಹೆಸರು ಶ್ರೀದುರ್ಗಾ ಅಂತ. ಇನ್ನು ತನ್ನ ಚಿಕ್ಕ ವಯಸ್ಸಿನಲ್ಲೇ ಬಾಲ ನಟಿಯಾಗಿ ೩೪ ಚಿತ್ರಗಳಲ್ಲಿ ನಟಿಸಿದ್ದಾರೆ ಮಾಲಾಶ್ರೀ.

ಅಂದಹಾಗೆ ಕನ್ನಡ ಚಿತ್ರರಂಗಕ್ಕೆ ಮಾಲಾಶ್ರಿಯವರನ್ನ ಕರೆತಂದಿದ್ದು ಯಾರು ಗೊತ್ತಾ? ಅವರು ಬೇರೆ ಯಾರು ಅಲ್ಲ, ಪಾರ್ವತಮ್ಮ ರಾಜ್ ಕುಮಾರ್ ಅವರೇ ಮಾಲಾಶ್ರಿಯವರಿಗೆ ಕನ್ನಡದಲ್ಲಿ ಮೊದಲ ಬಾರಿಗೆ ಅವಕಾಶ ಕೊಟ್ಟದ್ದು. ಅಸಲಿಗೆ ರಾಜ್ ಕುಟುಂಬಕ್ಕೆ ಮಾಲಾಶ್ರಿಯವರನ್ನ ಪರಿಚಯ ಮಾಡಿಸಿದ್ದು ಉದಯ ಶಂಕರ್ ಅವರು. ಇನ್ನು ಮಾಲಾಶ್ರಿಯವರನ್ನ ನೋಡಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ಮಾಲಾಶ್ರಿಯವರನ್ನ ತುಂಬಾ ಇಷ್ಟ ಪಟ್ಟು ನಂಜುಂಡಿ ಕಲ್ಯಾಣ ಚಿತ್ರದಲ್ಲಿ ನಟಿಸಲು ಅವಕಾಶ ನೀಡುತ್ತಾರೆ. ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಾಲಾಶ್ರೀ ಅವರ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗುತ್ತದೆ. ಇನ್ನು ಈ ಚಿತ್ರದೊಂದಿಗೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಾಲಾಶ್ರಿಯವರು ಕೂಡ ಕ್ಲಿಕ್ ಆಗುತ್ತಾರೆ. ಇದೆ ಕಾರಣದಿಂದಲೇ ರಾಜ್ ಕುಟುಂಬ ಎಂದರೆ ಮಾಲಾಶ್ರಿಯವರಿಗೆ ತುಂಬಾ ಗೌರವ ಪ್ರೀತಿ.

Advertisements

ಇನ್ನು ನಂಜುಂಡಿ ಕಲ್ಯಾಣ ಚಿತ್ರ ಸೂಪರ್ ಹಿಟ್ ಆದ ಬಳಿಕ ಮಾಲಾಶ್ರಿಯವರಿಗೆ ಬಾರೀ ಮಟ್ಟದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಎಷ್ಟರ ಮಟ್ಟಿಗೆ ಎಂದರೆ ವರ್ಷಕ್ಕೆ ಎಂಟರಿಂದ 10 ಮಾಲಾಶ್ರಿಯವರು ನಟಿಸಿದ್ದ ಸಿನಿಮಾಗಳು ಬಿಡುಗಡೆಗೊಳ್ಳುತ್ತವೆ. ೯೦ರ ದಶಕದಲ್ಲಿ ಅಂತೂ ಅವರು ಚಂದನವನದ ಟಾಪ್ ನಟಿಯಾಗಿ ಬೆಳೆಯುತ್ತಾರೆ. 1992ರಲ್ಲಿ ಬೆಳ್ಳಿ ಕಾಲುಂಗುರ ಚಿತ್ರದಲ್ಲಿ ಖ್ಯಾತ ನಟ ಸುನಿಲ್ ಜೊತೆಯಾಗಿ ನಟಿಸುತ್ತಾರೆ ಮಾಲಾಶ್ರೀ. ಇನ್ನು ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿ ಓಡುತ್ತದೆ. ಈ ಚಿತ್ರದ ಬಳಿಕ ಮಾಲಾಶ್ರೀ ಮತ್ತು ಸುನಿಲ್ ಮಧ್ಯೆ ಸ್ನೇಹವಾಗಿ ಅದು ಪ್ರೀತಿಯಾಗಿ ಮಾರ್ಪಾಡಾಗುತ್ತದೆ. ಎರಡು ವರ್ಷಗಳ ಕಾಲ ಇವರಿಬ್ಬರು ಪ್ರೀತಿ ಮಾಡುತ್ತಿದ್ದು ಆಗಿನ ಕಾಲಕ್ಕೆ ಇದು ಗಾಂಧಿನಗರಕ್ಕೆ ಗೊತ್ತಿತು ಎಂದು ಹೇಳಲಾಗಿದೆ.

ಇನ್ನು ಮಾಹಿತಿಗಳ ಪ್ರಕಾರ ೧೯೯೪ರಲ್ಲಿ ನಟ ಸುನಿಲ್ ಹಾಗೂ ಮಾಲಾಶ್ರಿಯವರು ಮದುವೆಯಾಗಲು ನಿರ್ಧಾರ ಮಾಡುತ್ತಾರೆ. ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನ ಕೂಡ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ವಿಧಿಯ ಆಟವೇ ಬೇರೆ ಇತ್ತು. ಹೌದು, ಒಂದು ದಿನ ಮಾಲಾಶ್ರೀ ಹಾಗೂ ಸುನಿಲ್ ಅವರು ಕಾರಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಅವರ ಕಾರ್ ಮತ್ತು ಟ್ರಕ್ ನಡುವೆ ಅ’ಪಘಾ’ತವಾಗಿ ಸುನಿಲ್ ಅವರು ತೀರಿಕೊಳ್ಳುತ್ತಾರೆ. ಮಾಲಾಶ್ರಿಯವರು ತನಗಾದ ಗಾಯಗಳಿಂದ ಚೇತರಿಕೆ ಕಂಡುಕೊಳ್ಳುತ್ತಾರೆ. ಆದರೆ ಕೇವಲ ಒಂದೇ ಗಂಟೆಯಲ್ಲಿ ಮಾಲಾಶ್ರಿಯವರ ಕಣ್ಣು ಮುಂದೆಯೇ ನಟ ಸುನಿಲ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ನಾವು ಅತೀಯಾಗಿ ಪ್ರೀತಿ ಮಾಡುವವರು ನಮ್ಮ ಕಣ್ಣ ಮುಂದೆಯೇ ತೀ’ರಿಕೊಂಡಾಗ, ಆಗ ಆಗುವ ನೋವು ಯಾರಿಗೂ ಬೇಡ. ಹೌದು, ಇದೇ ಪರಿಸ್ಥಿತಿ ಮಾಲಾಶ್ರಿಯವರೂ ಕೂಡ ಅನುಭವಿಸಿದ್ದಾರೆ. ಆ ದಿನಗಳು ಅವರಿಗೆ ತುಂಬಾ ಕಷ್ಟದ ದಿನಗಳಾಗಿತ್ತು. ಇದೇ ನೋವಿನ ನಡುವೆಯೇ ಟಾಪ್ ನಟಿಯಾಗಿ ಮಿಂಚುತ್ತಿದ್ದ ಮಾಲಾಶ್ರಿಯವರಿಗೆ ಅವಕಾಶಗಳು ಕಡಿಮೆಯಾಗುತ್ತಾ ಬರುತ್ತವೆ. ೧೯೯೮ರ ಆಸುಪಾಸಿನಲ್ಲಿ ವರ್ಷಕ್ಕೆ ಹತ್ತು ಸಿನಿಮಾಗಳನ್ನ ಮಾಡುತ್ತಿದ್ದ ನಟಿಗೆ ವರ್ಷಕ್ಕೆ ಕೇವಲ ೫ ಸಿನಿಮಾಗಳಲ್ಲಿ ಅವಕಾಶ ಸಿಗಲು ಶುರುವಾಗುತ್ತದೆ. ಇನ್ನು ಮಾಲಾಶ್ರಿಯವರ ಇಂತಹ ಕಷ್ಟದ ಸಮಯದಲ್ಲಿ ಅವರ ಕೈ ಹಿಡಿದಿದ್ದು ಆಗಿನ ಕಾಲಕ್ಕೆ ಸ್ಯಾಂಡಲ್ವುಡ್ ನಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರಾಗಿದ್ದ ನಿರ್ಮಾಪಕ ರಾಮುರವರು. ಮಾಲಾಶ್ರಿಯವರೆಂದರೆ ತುಂಬಾ ಇಷ್ಟ ಪಡುತ್ತಿದ್ದ ಕೋಟಿ ರಾಮುವವರು ಅವರ ಅಭಿಮಾನಿ ಕೂಡ. ಜೊತೆಗೆ ಕನಸಿನ ರಾಣಿ ಮಾಲಾಶ್ರಿಯವರನ್ನ ತುಂಬಾ ಪ್ರೀತಿಸುತ್ತಿದ್ದರು. ಬಳಿಕ ಮಾಲಾಶ್ರೀ ಮತ್ತು ಕೋಟಿ ರಾಮುರವರ ಮದುವೆ ಕೂಡ ಆಗುತ್ತದೆ. ಈಗ ಮಾಲಶ್ರೀ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸ ಮಾಡುತ್ತಿದ್ದಾರೆ.