Advertisements

ಲವ್ ಮಾಡುತ್ತಿದ್ದ ಸುನಿಲ್ ಕಳೆದುಕೊಂಡ ಮಾಲಾಶ್ರೀ ಅನುಭವಿಸಿದ ಕಷ್ಟ ಎಂತದು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮಾಲಾಶ್ರಿಯವರು 1969 ರಲ್ಲಿ ಮದ್ರಾಸ್ ನಲ್ಲಿ ಜನಿಸುತ್ತಾರೆ.. ಇವರ ನಿಜವಾದ ಹೆಸರು ಶ್ರೀ ದುರ್ಗಾ ಹಾಗೂ ಸಾಮಾನ್ಯ ತಮಿಳು ಕುಟುಂಬದಲ್ಲಿ ಹುಟ್ಟಿದಂತಹ ನಟಿ.. ಮಾಲಾಶ್ರಿಯವರು ಚೈಲ್ಡ್ ಆರ್ಟಿಸ್ಟ್ ಹಾಗಿ 34 ಸಿನಿಮಾಗಳಲ್ಲಿ ನಟಿಸಿದ್ದಾರೆ.. ನಿಮ್ಮೆಲ್ಲರಿಗೂ ಒಂದು ಪ್ರಶ್ನೆ ಮಾಲಾಶ್ರಿಯವರನ್ನು ಕನ್ನಡ ಸಿನಿಮಾರಂಗಕ್ಕೆ ಪರಿಚಯ ಮಾಡಿಸಿದವರು ಯಾರು ಅಂತ.. ಅದು ಬೇರಾರೂ ಅಲ್ಲ ಅದು ಪಾರ್ವತಮ್ಮ ರಾಜ್‍ಕುಮಾರ್ ಅವರು.. ರೈಟರ್ ಆಗಿದ್ದ ಉದಯ್ ಶಂಕರ್ ಅವರು ಮಾಲಾಶ್ರಿಯವರನ್ನು ರಾಜ್ ಕುಮಾರ್ ಕುಟುಂಬಕ್ಕೆ ಒಂದು ದಿನ ಪರಿಚಯ ಮಾಡಿಸುತ್ತಾರೆ..

Advertisements

ಅಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಮಾಲಾಶ್ರಿಯವರನ್ನು ನೊಡಿ ತುಂಬಾ ಇಷ್ಟ ಪಟ್ಟು ಅವರನ್ನ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ಕೊಡುತ್ತಾರೆ.. ರಾಘವೇಂದ್ರ ರಾಜ್ ಕುಮಾರ್ ಅವರು ನಂಜುಂಡಿ ಕಲ್ಯಾಣ ಸಿನಿಮಾ ಮಾಡುವುದಕ್ಕಿಂತ ಮುಂಚೆ ಒಂದು ಸಿನಿಮಾ ಮಾಡಿರ್ತಾರೆ.. ಆದರೆ ಆ ಸಿನಿಮಾ ಅಷ್ಟೊಂದು ಹಿಟ್ ಕಾಣೋದಿಲ್ಲ.. ಯಾವಾಗ ಮಾಲಶ್ರೀಯವರ ಜೊತೆ ನಂಜುಂಡಿ ಕಲ್ಯಾಣ ಸಿನಿಮಾ ಮಾಡ್ತಾರೆ ಆಗ ಈ ಸಿನಿಮಾ ಸೂಪರ್ ಬ್ಲಾಕ್ ಬಸ್ಟರ್ ಹಿಟ್ ಕಾಣುತ್ತದೆ ಆ ಕಾಲದಲ್ಲಿ.. ಆಕಡೆ ರಾಘವೇಂದ್ರ ರಾಜ್ ಕುಮಾರ್ ಅವರು ಕ್ಲಿಕ್ ಆಗ್ತಾರೆ. ಈಕಡೆ ಮಾಲಶ್ರೀಯವರು ಕೂಡ ಕ್ಲಿಕ್ ಆಗ್ತಾರೆ.. ಈ ಕಾರಣದಿಂದಾಗಿ ಮಾಲಾಶ್ರಿಯವರಿಗೆ ರಾಜ್ ಕುಮಾರ್ ಕುಟುಂಬ ಅಂದರೆ ಅಷ್ಟೊಂದು ಗೌರವ..

ಅದೇ ತರಹ ರಾಜ್ ಕುಮಾರ್ ಕುಟುಂಬದವರು ಮಾಲಾಶ್ರಿಯವರಿಗೆ ತುಂಬಾ ಗೌರವ ಕೊಡುತ್ತಾರೆ.. ನಿಮಗೆ ಗೊತ್ತಿದಿಯೋ ಇಲ್ಲವೋ ಪಾರ್ವತಮ್ಮ ಅವರು ಕಳೆದುಕೊಂಡಾಗ ಅವರ ಮುಂದೆ ನಿಂತು ಕಣ್ಣೀರು ಹಿಡುತ್ತಿದ್ದರು.. ಮಾಲಾಶ್ರೀ ಟಾಪ್ ನಟಿಯಾಗಿ ಸಿನಿಮಾ ಅವಕಾಶಗಳು ಒಂದರ ನಂತರ ಒಂದು ಬರುತ್ತಿರುತ್ತವೆ.. ಇವರು ಎಷ್ಟು ಬ್ಯುಸಿಯಾಗ್ತಾರೆ ಅಂದ್ರೆ ವರ್ಷಕ್ಕೆ ಎಂಟರಿಂದ ಹತ್ತು ಸಿನಿಮಾಗಳು ರಿಲಿಸ್ ಆಗ್ತಾಯಿತ್ತು 1990 ರ ಕಾಲದಲ್ಲಿ.. 1992 ರಲ್ಲಿ ಮಾಲಾಶ್ರಿಯವರು ಸುನಿಲ್ ಅವರ ಜೊತೆ ಒಂದು ಸಿನಿಮಾ ಮಾಡ್ತಾರೆ ಆ ಸಿನಿಮಾದ ಹೆಸರು ಬೆಳ್ಳಿ ಕಾಲುಂಗುರ.. ಆ ಸಿನಿಮಾಗೆ ಮ್ಯೂಸಿಕ್ ಕೊಟ್ಟಿದ್ದು ಬೇರಾರೂ ಅಲ್ಲ ಹಂಸಲೇಖ ಅವರು..

ಇನ್ನೂ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತದೆ.. ಈ ಸಿನಿಮಾದ ನಂತರ ಸುನಿಲ್ ಮತ್ತು ಮಾಲಾಶ್ರಿಯವರು ಪ್ರೀತಿ ಮಾಡೋದಕ್ಕೆ ಶುರು ಮಾಡ್ತಾರೆ.. ಎರಡು ವರ್ಷಗಳ ಕಾಲ ಸುನಿಲ್ ಮತ್ತು ಮಾಲಶ್ರೀಯವರು ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತಾರೆ.. ಮಾಲಾಶ್ರಿಯವರು ಹಾಗೂ ಸುನಿಲ್ ಅವರು ಇಷ್ಟಪಡುತ್ತಿದ್ದ ವಿಷಯ ಇಡಿ ಗಾಂಧಿನಗರಕ್ಕೆ ಗೊತ್ತಿತ್ತು ಆ ಕಾಲದಲ್ಲಿ.. 1994 ರಲ್ಲಿ ಮಾಲಾಶ್ರಿಯವರು ಸುನಿಲ್ ಅವರನ್ನ ಮದುವೆ ಮಾಡಿಕೊಳ್ಳಬೇಕೆಂದು ನಿರ್ದಾರ ಮಾಡ್ತಾರೆ.. ಮದುವೆ ಮಾಡ್ಕೊಳೊದಕ್ಕೆ ಮಾಲಶ್ರೀಯವರು ಮತ್ತು ಸುನಿಲ್ ಅವರು ಎಲ್ಲಾ ರೀತಿಯ ತಯಾರಿಗಳನ್ನ ಮಾಡಿಕೊಳ್ತಾರೆ.. ಒಂದು ದಿನ ಮಾಲಾಶ್ರಿಯವರು ಮತ್ತು ಸುನಿಲ್ ಅವರು ಕಾರಲ್ಲಿ ಹೊಗ್ತಾ ಇರ್ತಾರೆ..

ಆ ಟೈಮಲ್ಲಿ‌ ಒಂದು ಟ್ರಕ್ ಬಂದು ಗುದ್ದಿ ಮಾಲಾಶ್ರೀಯವರಿಗೆ ಮಲ್ಟಿಪಲ್ ಇಂಜು’ರೀ’ಸ್ ಆಗಿ ರಿಕವರಿ ಆಗ್ತಾರೆ.. ಆದರೆ ಸುನಿಲ್ ಅವರು ಒಂದೇ ಒಂದು ಗಂಟೆಯಲ್ಲಿ ಮಾಲಶ್ರೀಯವರ ಮುಂದೇನೆ ಮರೆಯಾಗುತ್ತಾರೆ‌.‌. ನಾವು ತುಂಬಾ ಪ್ರೀತಿ ಮಾಡೋರನ್ನ ನಾವು ಕಣ್ಣು ಮುಂದೇನೆ ಕಳೆದುಕೊಂಡಾಗ ಅದಕ್ಕಿಂತ ದೊಡ್ಡ ನೋವು ಇನ್ಯಾವುದು ಇಲ್ಲ.. ಯಾಕೆಂದರೆ ಆ ನೋವನ್ನ ನಾವು ಯಾವತ್ತಿಗೂ ಕೂಡ ಮರೆಯೋಕೆ ಆಗಲ್ಲ.. ಅಂತಹ ಒಂದು ನೋವನ್ನ ಆ ಸಮಯದಲ್ಲಿ ಹೇದರಿಸಬೇಕಾಗಿತ್ತು.. ಆ ಸಮಯದಲ್ಲಿ ಮಾಲಾಶ್ರಿಯವರು ಅನುಭವಿಸಿದ ನೋವು ಅಷ್ಟಿಷ್ಟಲ್ಲ ಯಾಕೆಂದರೆ ಒಂದು ಕಡೆ ಟಾಪ್ ನಟಿಯಾಗಿ ಮಿಂಚುತ್ತಿದ್ದ ನಟಿ ಒಂದೇ ಬಾರಿ ಕೆಳಗಡೆ ಇಳಿತಾರೆ..

ನೀವು ನೋಡಿದ್ರೆ 1998 ರಲ್ಲಿ ಎಂಟತ್ತು ಸಿನಿಮಾ ಮಾಡಿದಂತಹ ನಟಿ ವರ್ಷಕ್ಕೆ ಐದು ಸಿನಿಮಾಗಳನ್ನ ಮಾಡ್ತಾರೆ.. ಆ ಕಷ್ಟದ ಕಾಲದಲ್ಲಿ ಮಾಲಾಶ್ರಿಯವರ ಕೈ ಹಿಡಿದಿದ್ದು ಕೋಟಿ ರಾಮು ಅವರು.. ಕೋಟಿ ರಾಮು ಅವರು ಆ ಕಾಲದಲ್ಲಿ ಟಾಪ್ ನಿರ್ಮಾಪಕ..‌ ಕೋಟಿ ರಾಮು ಅವರಿಗೆ ಮಾಲಾಶ್ರಿಯವರು ಅಂದರೆ ತುಂಬಾ ಇಷ್ಟ.. ಒಂದು ಕಡೆ ಕೋಟಿ ರಾಮು ಅವರು ಮಾಲಾಶ್ರಿಯವರ ಅಭಿಮಾನಿ ಇನ್ನೊಂದು ಕಡೆ ಮಾಲಶ್ರೀಯವರನ್ನ ತುಂಬಾ ಇಷ್ಟ ಪಡ್ತಿರ್ತಾರೆ..

ನಂತರ ಮಾಲಾಶ್ರಿಯವರ ಒಪ್ಪಿಗೆಯ ಮೇರೆಗೆ ಮಾಲಾಶ್ರಿಯವರು ಮತ್ತು ರಾಮು ಅವರು ಮದುವೆ ಆಗ್ತಾರೆ.. ಈಗ ಮಾಲಾಶ್ರಿಯವರಿಗೆ ಇಬ್ಬರು ಮಕ್ಕಳಿದ್ದಾರೆ.. ಬೆಂಗಳೂರಿನ ಒಂದು ಖಾಸಗಿ ಅಪಾರ್ಟ್‌ಮೆಂಟ್ ನಲ್ಲಿ ಮಾಲಶ್ರೀಯವರು ಮತ್ತು ರಾಮು ಅವರು ನೆಲೆಸಿದ್ದಾರೆ.. ನಾವು ಮಾಲಶ್ರೀಯವರಿಂದ ಒಂದು ಕಲಿಯಬೇಕಾಗಿದೆ.. ಅದು ಏನೆಂದರೆ ಎಂತಹ ಕಷ್ಟವೇ ಬರಲಿ ಎಂತಹ ನೋವೇ ಬರಲಿ ಎಂತಹ ಒಂದು ದುಃಖವೇ ಬರಲಿ ಜೀವನದಲ್ಲಿ ಮುನ್ನುಗ್ಗುತ್ತಿರಬೇಕು.. ಸ್ನೇಹಿತರೆ ಈ ನೈಜ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..