Advertisements

ನಟಿ ಮಂಜುಳಾ ಅವರ ಮನೆ ಮೊದಲ ಬಾರಿಗೆ ತೋರಿಸ್ತೀವಿ ನೋಡಿ..

Cinema

ನಮಸ್ತೆ ಸ್ನೇಹಿತರೆ, ಮರೆಯಾಗದ ಚಿತ್ರರಂಗ ಇರುವವರೆಗೂ ಅಚ್ಚಳಿಯದೇ ಉಳಿದಿರುವ ಹೆಸರುಗಳಲ್ಲಿ ನಟಿ ಮಂಜುಳ ಅವರ ಹೆಸರು ಕೂಡ ಒಂದು.. ನವೆಂಬರ್ 8, 1951 ರಲ್ಲಿ ತುಮಕೂರು ಶಿರಾ ಗೇಟ್ ಬಳಿ ಇರುವ ಹೊನ್ನೇನಹಳ್ಳಿಯಲ್ಲಿ ಹುಟ್ಟಿದ ನಟಿ ಮಂಜುಳ ತಂದೆ ಆ ಕಾಲದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದರು. 1970 ಮತ್ತು 80 ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳ ಬದುಕಿದ್ದು ಕೇವಲ 34 ವರ್ಷ ಮಾತ್ರ.. ನಟಿ ಮಂಜುಳ ಅವರ ಆಕಸ್ಮಿಕ ಸಾ’ವು ಅಂದು ಇಡೀ ಕರ್ನಾಟಕ ಕಣ್ಣೀರು ಹಾಕುವಂತೆ ಮಾಡಿತ್ತು.

Advertisements

ಕನ್ನಡ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಇರುವಾಗಲೇ.. 1982 ರಲ್ಲಿ ನಿರ್ದೇಶಕ ಅಮ್ರಿತಾಮ್ ಅವರನ್ನ ಮದುವೆಯಾಗುತ್ತಾರೆ. ಮಂಜುಳ ಅವರ ಮದುವೆ ವಿಷಯ ತಿಳಿಯುತ್ತಿದ್ದಂತೆ ಸಿನಿಮಾ ಅವಕಾಶಗಳು ಕಡಿಮೆಯಾಗ ತೊಡಗಿತು.. ಸೆಪ್ಟೆಂಬರ್ 12, 1986 ರಂದು ಅಡಿಗೆ ಮನೆಯಲ್ಲಿ ಸ್ಟೌವ್ ಸ್ಪೋ’ಟಗೊಂಡು ನಟಿ ಮಂಜುಳ ಅವರು ನಿಧನರಾಗುತ್ತಾರೆ. ತುಮಕೂರಿನ ಹೊನ್ನೆನಹಳ್ಳಿಯಲ್ಲಿರುವ ಈ ಮನೆ ನೋಡಿ..

ಇದೇ ಮನೆಯಲ್ಲಿ ನಟಿ ಮಂಜುಳ ಅವರು ಹುಟ್ಟಿ ಬೆಳೆದಿದ್ದು. ಈ ಮನೆಯ ಸುತ್ತ ಮಂಜುಳ ಅವರ ಹತ್ತಾರು ನೆನಪುಗಳು ಇವೆ. ಶಿರಾ ಗೇಟ್ ಬಳಿಯ ಹೊನ್ನೇನಹಳ್ಳಿಯಲ್ಲಿ ನಟಿ ಮಂಜುಳ ಅವರ ಸ’ಮಾಧಿಯೂ ಕೂಡ ಇದೆ.. ಈಗ ಇದರ ಸುತ್ತ ಲೇಔಟ್ ಗಳು ನಿರ್ಮಾಣವಾಗುತ್ತಿದ್ದು ಮಂಜುಳ ಅವರ ಸಮಾಧಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳಿಯ ಆಡಳಿತದ ಮೇಲಿದೆ. ಸರಿಸುಮಾರು 20 ವರ್ಷ ವಿಭಿನ್ ಹಾಗೂ ಅಮೋಘ ಪಾತ್ರಗಳನ್ನು ಮಾಡಿ ಕನ್ನಡಿಗರ ಮನದಲ್ಲಿ ನೆಲೆಸಿರುವ ನಟಿ ಮಂಜುಳ ಅವರ ಬಗ್ಗೆ ನಿಮ್ಮ ಮೆಚ್ಚಿನ ಮಾತೊಂದನ್ನು ತಿಳಿಸಿ.