Advertisements

ಬಾರೀ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸ್ತ್ರಿ ನಟಿ..ಏನಾಗಿದೆ ಗೊತ್ತಾ.?

Cinema

ಸ್ಯಾಂಡಲ್ವುಡ್ ನ ಒಂದು ಕಾಲದ ಖ್ಯಾತ ನಟಿ ಶಾಸ್ತ್ರಿ ಬೆಡಗಿ ನಟಿ ಮಾನ್ಯ ಈಗ ಬಾರಿ ಅ’ನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೌದು, ಚಂದನವನದ ಸ್ಟಾರ್ ನಟರಾದ ವಿಷ್ಣುವರ್ಧನ್, ದರ್ಶನ್ ಸೇರದಂತೆ ಹಲವು ನಟರ ಜೊತೆ ಹೆಜ್ಜೆ ಹಾಕಿರುವ ನಟಿ ಮಾನ್ಯ ಈಗ ಅ’ನಾರೋಗ್ಯಕ್ಕೆ ಒಳಗಾಗಿದ್ದು ಸಂ’ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಸ್ವತಃ ನಟಿ ಮಾನ್ಯ ಅವರೇ ತಮಗಾಗಿರುವ ಅ’ನಾರೋಗ್ಯದ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ಮಾನ್ಯ ಅವರು ತಮ್ಮ ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು. ಆಗಾಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಫೋಟೋಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದ ನಟಿ ಮಾನ್ಯ ಈಗ ತಾವು ಎದುರಿಸುತ್ತಿರುವ ಸಂ’ಕಷ್ಟದ ದಿನಗಳ ಬಗ್ಗೆ ಕೂಡ ಬರೆದುಕೊಂಡಿದ್ದಾರೆ.

Advertisements

ಹೌದು, ನಟಿ ಮಾನ್ಯ ಅವರು ಪಾ’ರ್ಶ್ವವಾಯುವಿಗೆ ಒಳಗಾಗಿದ್ದು ಕಳೆದ ಮೂರ್ನಾಲ್ಕು ವಾರಗಳಿಂದ ಸಂಕಷ್ಟದ ದಿನಗಳನ್ನ ಎದುರಿಸುತ್ತಿದ್ದಾರೆ. ನನ್ನ ಎಡ ಕಾಲು ಸಂಪೂರ್ಣ ಸ್ವಾ’ಧೀನ ಕಳೆದುಕೊಳ್ಳುವ ಸ್ಥಿತಿಯಲ್ಲಿತ್ತು. ನಡೆದಾಡಲು ಕೂಡ ಆಗದೆ ತುಂಬಾ ನೋವು ಅನುಭವಿಸುತ್ತಿದ್ದೆ ಎಂದು ಮಾನ್ಯ ಹೇಳಿದ್ದಾರೆ. ಕುಳಿತುಕೊಳ್ಳಲಾಗದೆ, ನಡೆಯಲಾಗದೆ ಜೀವನದ ಮೇಲಿನ ಭರವಸೆಯನ್ನೇ ಕಳೆದುಕೊಂಡು ಬಿಟ್ಟಿದ್ದೆ ಎಂದು ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಪಾ’ರ್ಶ್ವವಾಯುವಿನಿಂದ ನಿದ್ದೆ ಮಾಡಲಾಗದೆ, ನಿಲ್ಲಲಾಗದ ಕಾರಣ ತುರ್ತಾಗಿ ಚಿ’ಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗೆ ದಾಖಲಾಗಬೇಕಾಯಿತು.

ಕೊ’ರೋನಾ ಸೋಂಕು ಹೆಚ್ಚಾಗುತ್ತಿರುವ ಇಂತಹ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಒಬ್ಬರೇ ಇರಬೇಕಾದ ಪರಿಸ್ಥಿತಿ ಇದೆ. ಇನ್ನು ಈಗೀಗ ಸ್ವಲ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದು ಮೊದಲಿನಂತಾಗುವ ಭರವಸೆ ಮೂಡುತ್ತಿದೆ ಎಂದು ಮಾನ್ಯ ಹೇಳಿಕೊಂಡಿದ್ದಾರೆ. ಇನ್ನು ನಾನು ಪಾ’ರ್ಶ್ವವಾಯುವಿಗೆ ತುತ್ತಾದ ಬಳಿಕ ಇನ್ಮೇಲೆ ಮೊದಲಿನಂತೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲವೇ ಎಂಬ ಭಯ ಇತ್ತು. ಆದರೆ ಸಂಪೂರ್ಣವಾಗಿ ಚೇತರಿಕೆ ಆದ ಬಳಿಕ ಮತ್ತೆ ಡ್ಯಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕಷ್ಟವನ್ನೆಲ್ಲಾ ಗೆದ್ದು ಮತ್ತೆ ಗುಣಮುಖಳಾಗಿ ಬರುವೆ. ನನ್ನ ಆರೋಗ್ಯಕೊಸ್ಕರ ದೇವರಲ್ಲಿ ಪ್ರಾರ್ಥನೆ ಮಾಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ ನಟಿ ಮಾನ್ಯ.