Advertisements

ಇಂದು ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ! ಯಾವ ಮಗು, ಹೇಗಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕಿರುತೆರೆ, ಮತ್ತು ಹಿರಿತೆರೆ ಎರಡರಲ್ಲೂ ಕೂಡ ಖ್ಯಾತಿ ಪಡೆದುಕೊಂಡಿದ್ದ ಮಯೂರಿ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭವಾಗಿದೆ. ಲಾಕ್ ಡೌನ್ ಸಮಯದಲ್ಲಿ ಇಬ್ಬರು ತುಂಬಾ ಸರಳವಾಗಿ ದೇವಸ್ತಾನದಲ್ಲಿ ಮದುವೆಯಾಗಿದ್ದರು.. ಇದೀಗ ಮಯೂರಿ ಅವರು ತಾಯಿಯಾಗಿದ್ದಾರೆ. ಈ ಸಂತೋಷದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ನಟಿ ಮಯೂರಿ ಹಂಚಿಕೊಂಡಿದ್ದಾರೆ.. ಅಶ್ವಿನಿ ನಕ್ಷತ್ರ ಎಂಬ ಕಿರುತೆರೆ ಧಾರವಾಹಿಯ ಮೂಲಕ ತೆರೆಯ ಮೇಲೆ ಬಂದು ಪ್ರೇಕ್ಷಕರ ಗಮನ ಸೆಳೆದಿದ್ದರು. ನಂತರ ಹಿರಿತೆರೆಗೆ ಕಾಲಿಟ್ಟ ಇವರು ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ನಟಿಸಿದರು.. ಈ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು.

Advertisements

ಪೊಗರು ಚಿತ್ರದಲ್ಲೂ‌ ಕೂಡ ಧ್ರುವ ಸರ್ಜಾ ಅವರ ತಂಗಿಯ ಪಾತ್ರದಲ್ಲಿ ಅದ್ಬುತವಾಗಿ ಅಭಿನಯಿಸಿದ್ದಾರೆ.. ಈಗಾಗಲೇ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಮಯೂರಿ ಅವರು ನಟನೆಗೂ ಸೈ, ಡ್ಯಾನ್ಸ್ ಗೂ ಸೈ. ಬೇರೆ ನಟಿಯರಿಗೂ ಕೂಡ ಮಯೂರಿ ಅವರು ಧ್ವನಿಯನ್ನು ನೀಡಿದ್ದಾರೆ.. ಇದೀಗ ಎಲ್ಲರ ಆಶಿರ್ವಾದದೊಂದಿಗೆ ಮಯೂರಿ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇವರ ಪತ್ನಿಯ ಹೆಸರು ಅರುಣ್‌ ರಾಜ್.. ಮಯೂರಿ ಮತ್ತು ಅರುಣ್ ರಾಜ್ ಅವರು ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಯಲ್ಲಿದ್ದರು.

ನಂತರ ಇವರು ತಮ್ಮ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇದೀಗ ಮದುವೆಯಾಗಿ ಒಂದು ವರ್ಷದ ಹೊಳಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಲ್ಲದೇ ಇಂದು ಹುಟ್ಟಿರುವ ಮಗುವಿಗಾಗಿ ಒಂದು ಇನ್ಸ್ಟಾಗ್ರಾಮ್ ಅಕೌಂಟ್ ಅನ್ನು ಕೂಡ ತೆರೆದಿದ್ದಾರೆ.. ಮಗು ಹುಟ್ಟಿ ಒಂದೇ ದಿನಕ್ಕೆ ಸಾವಿರಾರು ಗಟ್ಟಲೆ ಪಾಲೋವರ್ಸ್ ಪಡೆದು ಕೊಂಡಿದೆ ಈ ಅದ್ಬುತ ಮಗು. ಸದ್ಯಕ್ಕೆ ಈ ಮಗುವಿನ ಪೊಟೊ ಇನ್ನೂ ರಿವಿಲ್ ಮಾಡಿಲ್ಲ.. ಮಗುವಿನ‌ ಕೈಗಳ ಪೊಟೊವನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಮಯೂರಿ ಅವರು. ಮಗು ಮತ್ತು ಮಯೂರಿ ಅವರು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ಕೂಡ ಖಚಿತಪಡಿಸಿದ್ದಾರೆ..