Advertisements

ಖ್ಯಾತ ನಟಿ ಮೀನಾ ಈಗ ಎಲ್ಲಿದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಸಿನಿಮಾ ಜಗತ್ತಿನಲ್ಲಿ ತನ್ನ ಸಹಜ ಅಭಿನಯ ಮೂಲಕ ಪ್ರೇಕ್ಷಕರನ್ನ ತನ್ನತ್ತ ಸೆಳೆದ ಮೋಹಕ ನಟಿ ಅಂದರೆ ಅದು ಮೀನಾ ಅಂತ ಹೇಳಿದರೆ ತಪ್ಪಾಗಲ್ಲ. ಸೆಪ್ಟೆಂಬರ್ 16, 1976 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ನಟಿ ಮೀನಾ ತಮಿಳಿನ ಒಂದು ಚಿತ್ರದಲ್ಲಿ ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಇನ್ನೂ ತಮಿಳು ಮತ್ತು ಮಲಯಾಳಂನ ಹಲವು ಚಿತ್ರದಲ್ಲಿ ನಟಿ ಮೀನಾ ಬಾಲನಟಿಯಾಗಿ ನಟನೆಯನ್ನ ಮಾಡಿದ್ದರು. ಇನ್ನೂ ವರ್ಷಗಳು ಉರುಳಿದಂತೆ ನಾಯಕಿಯಾಗಿ ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲೂ ನಟನೆ ಮಾಡಿದ ನಟಿ ಮೀನಾ ದಕ್ಷಿಣ ಭಾರತದ ಶ್ರೇಷ್ಠ ನಟಿಯಾಗಿ ಹೊರ ಹೊಮ್ಮಿದರು..

Advertisements

ಇನ್ನೂ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಯಲ್ಲಿ ಸಿಂಹಾದ್ರಿಯ ಸಿಂಹ, ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ಸ್ವಾತಿ ಮುತ್ತು ಮತ್ತು ಮೈ ಆಟೋಗ್ರಾಫ್ ಚಿತ್ರಗಳಲ್ಲಿ ನಾಯಕಿಯಾಗಿ ನಟನೆ ಮಾಡಿದ್ದಾರೆ. ಕನ್ನಡಿಗರ ಮನದಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡರು ನಟಿ ಮೀನಾ ಅವರು.. ಹಾಗಾದರೆ ಇಷ್ಟು ಪೇಮಸ್ ಆದ ನಟಿ ಮೀನಾ ಈಗ ಎಲ್ಲಿದ್ದಾರೆ ಅನ್ನುವುದರ ಬಗ್ಗೆ ಹಲವು ಜನರಿಗೆ ತಿಳಿದಿಲ್ಲ. ಹಾಗಾದರೆ ನಟಿ ಮೀನಾ ಈಗ ಎಲ್ಲಿದ್ದಾರೆ ಗೊತ್ತಾ?

ಮಗು ಆದ ಕಾರಣ ನಟಿ ಮೀನಾ ನಟನೆಯತ್ತ ಮುಖ ಮಾಡಲಿಲ್ಲ ಮಗು ಮತ್ತು ಗಂಡನ ಬಗ್ಗೆ ಹೆಚ್ಚು ಹೊಲವು ತೋರುವ ಮೀನಾ ಗಂಡ ಮತ್ತು ಮಗಳೇ ನನ್ನ ಪ್ರಪಂಚ ಎಂದು ಬದುಕುತ್ತಿದ್ದು ಸಂಸಾರದಲ್ಲಿ ಸುಖ ಕಾಣುತ್ತಿದ್ದಾರೆ.. ಇನ್ನೂ ಮಗಳ ಭವಿಷ್ಯದ ಬಗ್ಗೆ ತುಂಬಾ ಯೋಚನೆ ಮಾಡುವ ಮೀನಾ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವುದರ ಜೊತೆಗೆ ನಟನೆಯನ್ನು ಕೂಡ ಕಲಿಸಿಕೊಡುತ್ತಿದ್ದಾರೆ. ಇನ್ನೂ ಮೀನಾ ಅವರು ಬೇಬಿ ನೈನಿಕ ತಮಿಳುನಾಡಿನ ನಟ ವಿಜಯ್ ಅವರ ತೇರಿ ಅನ್ನುವ ಚಿತ್ರದಲ್ಲಿ ನಟನೆಯನ್ನ ಮಾಡಿದ್ದಾರೆ..