Advertisements

ಆಸ್ಪತ್ರೆಗೆ ಕರೆದೊಯ್ಯಲು ಯಾರು ಇರಲಿಲ್ಲ, ಕಾಡಿನ ಮದ್ಯೆ ಈ ಖ್ಯಾತ ನಟಿಯ ಜೀವನದಲ್ಲಿ ಆಗಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ವಿಧಿ ಒಮ್ಮೆ ಎಷ್ಟು ಕ್ರೂ’ರಿ’ಯಾಗಿರುತ್ತದೆ ಅಂದರೆ ಊಹೆ ಮಾಡುವುದಕ್ಕೂ ಆಗುವುದಿಲ್ಲ. ಸಾಲು ಸಾಲು ಹಿಟ್ ಚಿತ್ರಗಳು.. ಕೇವಲ 21 ವರ್ಷ. ಮೂರು ಬಾಷೆಗಳಲ್ಲಿ ಒಂದು ದಿನ ಬಿಡುವಿಲ್ಲದ ನಟನೆ.. ದಾರಿ ಮದ್ಯೆಯಲ್ಲಿ ಅಪ’ಘಾ’ತ, ಬದುಕುವ ಎಲ್ಲಾ ಸಾಧ್ಯತೆಗಳು ಇತ್ತು ಆದರೆ ಸಹಾಯಕ್ಕಾಗಿ ಯಾರು ಬರಲಿಲ್ಲ. ಬರುವ ಹೊತ್ತಿಗೆ ಪ್ರಾ’ಣದ ಪಕ್ಷಿ ಹಾರಿ ಹೋಗಿತ್ತು.. ಇಂತಹ ಸ್ಥಿತಿ ಎದುರಿಸಿದ ಉದಯೋನ್ಮುಖ ನಟಿ ಯಾರು ಗೊತ್ತಾ? ಕೇರಳ ರಾಜ್ಯದಲ್ಲಿ ಹುಟ್ಟಿದರು ಬೆಂಗಳೂರಿನಲ್ಲಿ ಓದಿ ಬೆಳೆದ ನಟಿ ಮೋನಿಷ. ಮೊದಲ ಮಲಯಾಳಂ ಚಿತ್ರದಲ್ಲಿ ತನ್ನ ಅದ್ಬುತ ಅಭಿನಯಕ್ಕಾಗಿ ನ್ಯಾಷನಲ್ ಅವರ್ಡ್ ಪಡೆದಿದ್ದರು..

Advertisements

ನಂತರ ರಾಘವೇಂದ್ರ ರಾಜ್ ಕುಮಾರ್ ಜೊತೆ, ಚಿರಂಜೀವಿ ಸುಧಾಕರ್ ಚಿತ್ರದಲ್ಲಿ ನಟಿಸಿ ಅದ್ಬುತ ನಟನೆಯ ಮೂಲಕ ಕನ್ನಡಿಗರ ಮನಸಲ್ಲಿ ನೆಲೆಸಿದರು. ನಟಿ ಮೋನಿಷ ತಂದೆ ಬೆಂಗಳೂರಿನಲ್ಲಿ ಲೆದರ್ ಬ್ಯುಸಿನೆಸ್ ಮಾಡುತ್ತಿದ್ದರು.. ಈ ನಟಿ ಬೇರೆ ಬಾಷೆಯಲ್ಲಿ ನಟಿಸಿದರು ಬೆಂಗಳೂರಿನಲ್ಲೇ ಕುಟುಂಬ ಸಮೇತ ವಾಸವಿದ್ದರು. ನ್ಯಾಷನಲ್ ಅವಾರ್ಡ್ ಬಂದ ಮೇಲಂತೂ ಈ ನಟಿಗೆ ಕನ್ನಡ ಮಲಯಾಳಂ ತಮಿಳಿನಲ್ಲಿ ಬಾರಿ ಬೇಡಿಕೆ ಬಂತು.. ಕೆಲವು ಚಿತ್ರಗಳ ಶೂಟಿಂಗ್ ನಡೆಯುತ್ತಿತ್ತು. ಅಂದು ಡಿಸೆಂಬರ್ 5, 1992..

ಮಲಯಾಳಂ ಚಪ್ಪಡಿ ವಿದ್ಯಾ ಎನ್ನುವ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ.. ಕೇರಳದ ಹಲಕ್ ಪುಲದಲ್ಲಿ ನಟಿ ಮೋನಿಷ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಭೀ’ಕ’ರ ಅಪ’ಘಾ’ತವಾಯಿತು.. ಕಾರಿನಲ್ಲಿ ಮೋನಿಷ ಜೊತೆ ಅವರ ತಾಯಿ ಮತ್ತು ಡ್ರೈವರ್ ಇದ್ದರು. ಈ ಘಟನೆ ನಡೆದ ಪ್ರದೇಶ ದಟ್ಟವಾದ ಕಾಡಿನಿಂದ ಕೂಡಿದ್ದರಿಂದ ಯಾರು ಆ ಸಮಯಕ್ಕೆ ಆ ರಸ್ತೆಯ ಮಾರ್ಗವಾಗಿ ಬರಲಿಲ್ಲ..

ಅಪ’ಘಾ’ತ ಆಗಿ ಸುಮಾರು 5 ಗಂಟೆಗಳ ನಂತರ ಯಾರೋ ಆ ರಸ್ತೆಯಲ್ಲಿ ಬಂದವರು ಪ್ರಜ್ಞೆಯಿಲ್ಲದೆ ಬಿ’ದ್ದಿದ್ದ ಈ ಮೂವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ವಿಧಿಯಾಟ ಹೇಗಿತ್ತು ಅಂದರೆ ನಟಿ ಮೋನಿಷ ತಾಯಿ ಮತ್ತು ಡ್ರೈವರ್ ಬದುಕುಳಿದರು.. ಆದರೆ ನಟಿ ಮೋನಿಷ ಮಾತ್ರ ಬಾರದ ಲೋಕಕ್ಕೆ ಹೊರಟು ಹೋಗಿದ್ದರು. ಒಂದು ಗಂಟೆ ಮುಂಚಿತವಾಗಿ ಮೋನಿಷ ಆಸ್ಪತ್ರೆಗೆ ಬಂದಿದ್ದರು ಖಂಡಿತ ಬದುಕುತ್ತಿದ್ದಳು ಎಂದು ವೈದ್ಯರು ಹೇಳಿದರು.. ಇಹಲೋಕ ತ್ಯಜಿಸಿದಾಗ ಈ ನಟಿಯ ವಯಸ್ಸು ಎಷ್ಟು ಗೊತ್ತಾ ಕೇವಲ 21 ವರ್ಷ.