Advertisements

45 ವರ್ಷ ಆದರು ನಟಿ ನಗ್ಮಾ ಮದುವೆ ಮಾಡಿಕೊಂಡಿಲ್ಲ ಯಾಕೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಬಾಷೆಗಳ ಚಿತ್ರಗಳಲ್ಲಿ ಹಾಗೂ ಪಂಜಾಬಿ, ಮರಾಠಿ ಚಿತ್ರಗಳಲ್ಲಿಯೂ ನಟಿಸಿದ ಮಿಂಚಿನ ಬಳ್ಳಿ ಖ್ಯಾತ ನಟಿ ನಗ್ಮಾ.. ನಗ್ಮಾರವರು ಡಿಸೆಂಬರ್ 25, 1974 ರಲ್ಲಿ ಅರವಿಂದ್ ಪ್ರತಾಪ್ ಸಿಂಗ್ ಮೊರಾರ್ಜಿ, ಹಾಗೂ ತಾಯಿ ಶಮಾಕಾಜಿ ದಂಪತಿಯ ಮಗಳಾಗಿ ಹಿಂದೂ ಹಾಗೂ ಮುಸ್ಲಿಂ ಈ ಎರಡು ದರ್ಮಗಳ ರಕ್ತ ಹಂಚಿಕೊಂಡು ಹುಟ್ಟಿದರು. ನಗ್ಮಾ ಮೊದಲು ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗದ ಎಂಟ್ರಿಕೊಟ್ಟರು. ನಂತರ ತಮಿಳು, ತೆಲುಗು, ಮಲಯಾಳಂ, ಕನ್ನಡ, ಪಂಜಾಬಿ, ಮರಾಠಿ, ಬಂಗಾಳಿ ಈ ಎಲ್ಲಾ ಬಾಷೆಯ ಚಿತ್ರಗಳಲ್ಲಿ ನಗ್ಮಾ ಮಿಂಚಿದರು.

Advertisements

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕುರುಬನ ರಾಣಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಕುರುಬನ ರಾಣಿ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾದರು.. ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರವಿಮಾಮ ಚಿತ್ರಕ್ಕೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದರು.. ರವಿಮಾಮ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಇದಾದ ನಂತರ ಸಾಹಸಸಿಂಹ ವಿಷ್ಣುವರ್ಧನ್ ಅವರ ಹೃದಯವಂತ ಚಿತ್ರದಲ್ಲಿ ನಟಿಸಿದರು. ತೆಲುಗಿನ ಬಹುತೇಕ ಸ್ಟಾರ್ ನಟರ ಜೊತೆ ನಗ್ಮಾ ನಟಿಸಿದ್ದಾರೆ.. ತೆಲುಗಿನ ಬಹುತೇಕ ಸ್ಟಾರ್ ನಟರ ಜೊತೆ ನಗ್ಮಾ ಅವರು ನಟಿಸಿದ್ದಾರೆ. ಬಾಲಿವುಡ್ ನಲ್ಲೂ ಸಹ ನಗ್ಮಾ ಅವರು ಕೆಲವು ಖ್ಯಾತ ನಟರ ಜೊತೆ ನಟಿಸಿದ್ದಾರೆ..

ಹಾಗೆ ತಮಿಳಿನ ಸೂಪರ್‌ ಸ್ಟಾರ್ ರಜನಿ ಕಾಂತ್ ಅವರ ಜೊತೆಯಲ್ಲೂ ಕೂಡ ಅಭಿನಯಿಸಿದ್ದಾರೆ.  ಇನ್ನೂ ಇಷ್ಟೆಲ್ಲ ಸಿನಿಮಾಗಳನ್ನು ಮಾಡಿ ಖ್ಯಾತಿ ಪಡೆದ ನಗ್ಮಾ ಅವರು 45 ವರ್ಷ ದಾಟಿದರು ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ.. ನಗ್ಮಾ ಅವರು ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅವರನ್ನು ಮದುವೆಯಾಗುತ್ತಾರೆ, ಇಬ್ಬರು ಒಬ್ಬರಿಗೊಬ್ಬರು ಇಷ್ಟ ಪಡುತ್ತಿದ್ದಾರೆ ಎಂಬ ಮಾತುಗಳು ಹರಿದಾಡಿತ್ತು.. ಆದರೆ ಶರತ್ ಕುಮಾರ್ ಅವರು ತಮಿಳು ನಟಿ ರಾಧಿಕಾ ಅವರನ್ನು ಮದುವೆಯಾಗುತ್ತಾರೆ.

ಇನ್ನೂ ನಗ್ಮಾ ಹೆಸರು ಖ್ಯಾತ ಭಾರತೀಯ ಕ್ರಿಕೇಟಿಗ ಮಾಜಿ ನಾಯಕ ಸೌರವ್ ಗಂಗೂಲಿಯವರ ಜೊತೆ ತಳಕು ಹಾಕಿಕೊಂಡಿತ್ತು.. ಸಾರ್ವಜನಿಕವಾಗಿ ಸೌರವ್ ಗಂಗೂಲಿ ಹಾಗು ನಗ್ಮಾ ಅವರ ಜೊತೆಯಲ್ಲಿ ಸುತ್ತಾಡುತ್ತಿರುವುದನ್ನು ಕೆಲವು ಮಾಧ್ಯಮಗಳು ಬಹಿರಂಗ ಪಡಿಸಿದ್ದವು. ಇನ್ನೂ ನಗ್ಮಾ ರಾಜಕೀಯಕ್ಕೆ ಪ್ರವೇಶ ಮಾಡಿದ ನಂತರ ಮದುವೆಯ ಬಗ್ಗೆ ಯೋಚನೆ ಮಾಡಲೇ ಇಲ್ಲ.. ನಗ್ಮಾ ಅವರು ಈಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.