Advertisements

ನಟಿ ಪದ್ಮಜಾ ರಾವ್ ಮನೆಯ ಗೃಹಪ್ರವೇಶ ಹೇಗಿತ್ತು ಒಮ್ಮೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟಿ ಪದ್ಮಜಾ ರಾವ್.. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಕಿರುತೆರೆ ನಿರ್ದೇಶಕಿ.. ಚಿತ್ರರಂಗಕ್ಕೆ ಬರುವ ಮುನ್ನ ಚಿತ್ರ ನಿರ್ಮಾಪಕ, ಕಿರುತೆರೆ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಪದ್ಮಜಾ ರಾವ್ ಅವರು ವೈಶಾಲಿ ಕಾಸರವಳ್ಳಿಯವರ ಮೂಡಲ ಮನೆ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಲಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.. ನಂತರ ಸಾಕಷ್ಟು ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ ಪದ್ಮಜಾ ರಾವ್ ಅವರು.. ರವಿಚಂದ್ರನ್ ಹಠವಾದಿ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಡುತ್ತಾರೆ.

Advertisements

ಈ ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಅಭಿನಯಿಸಿದ ಪದ್ಮಜಾ ರಾವ್ ಅವರು ಎಲ್ಲರ ಗಮನವನ್ನು ಸೆಳೆಯುತ್ತಾರೆ. ನಂತರ ಗಣೇಶ್ ಅಭಿನಯಿಸಿದ ಚಿತ್ರ ಮುಂಗಾರು ಮಳೆಯಲ್ಲಿ ತಾಯಿ ಪಾತ್ರದಲ್ಲಿ ಇನ್ನಷ್ಟು ಗಮನ ಸೆಳೆಯುತ್ತಾರೆ.. ನಂತರ ಚಿತ್ರರಂಗದಲ್ಲಿ ಹಿಂತಿರುಗಿ ನೋಡಲೇ ಇಲ್ಲಾ ನಟಿ ಪದ್ಮಜಾ ರಾವ್ ಅವರು. ಇದೀಗ ಕನ್ನಡದಲ್ಲಿ ಬಹುಬೇಡಿಕೆ ನಟಿಯಾಗಿ ಸುಮಾರು 100ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ‌.. ಅದರಲ್ಲೂ ಮುಂಗಾರು ಮಳೆ ಚಿತ್ರದಲ್ಲಿನ ಅವರ ನಟನೆಯನ್ನು ಹಿಂದಿಗೂ ಸಹ ಮರೆತಿಲ್ಲ..

ಹಾಗೆ ಗಾಳಿಪಟ ಸಿನಿಮಾದಲ್ಲೂ ಕೂಡ ತಾಯಿ ಪಾತ್ರದಲ್ಲಿ ನಟಿಸಿರುವ ಪದ್ಮಜಾ ರಾವ್ ಅವರು ಕನ್ನಡ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು. ತಮ್ಮ ಸ್ವಾಭಾವಿಕ ನಟನೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ ನಟಿ ಪದ್ಮಜಾ ರಾವ್ ಅವರು. ಇವರ ಅಭಿನಯ ನೋಡುತ್ತಿದ್ದರೆ ತಾಯಿ ಎಂದರೆ ಈ ರೀತಿ ಇರಬೇಕು ಅನಿಸುತ್ತದೆ.. ಬೆಳ್ಳಿತೆರೆಯ ಮೇಲೆ ಯಾವುದೇ ಪಾತ್ರ ಮಾಡುತ್ತಿದ್ದರು ಅದು ಅಭಿನಯ ಅನಿಸುವುದೇ ಇಲ್ಲ.. ಇದರ ಜೊತೆಗೆ ಇದೀಗ ತಮ್ಮ ಸುಂದರವಾದ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ‌.. ನಟಿ ಪದ್ಮಜಾ ರಾವ್ ಅವರ ನಟನೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ.