Advertisements

ಚೆಲ್ಲಾಟ ಚಿತ್ರದ ನಟಿ ರೇಖಾ ಈಗ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಗೊತ್ತಾ?

Cinema

ಪ್ರಿಯ ಓದುಗರೇ ಸಿನಿಮಾಗಳಲ್ಲಿ ನಟ-ನಟಿಯರಿಗೆ ಹೆಚ್ಚಿನ ಪ್ರಾಶಸ್ತ ನೀಡಲಾಗಿರುತ್ತದೆ. ಒಂದು ಸಿನಿಮಾ ದಲ್ಲಿ ನಟಿಮಣಿಯರು ಹಾಕಿರುವ ಉಡುಗೆ ಮತ್ತು ಸಿನಿಮಾದಲ್ಲಿ ಸ್ಟೈಲ್ಗೆ ಅಭಿಮಾನಿಗಳು ಫಿದಾ ಆಗಿದ್ದು ಉಂಟು. ಸಿನಿಮಾರಂಗದಲ್ಲಿ ಕೆಲ ನಟಿಮಣಿಯರು ಅತಿಬೇಗನೆ ಉತ್ತುಂಗಕ್ಕೆ ಇರುತ್ತಾರೆ. ಆಗ ಅವರಿಗೆ ಇಗೋ ಬರುವುದು ಕೂಡ ಸಾಮಾನ್ಯ. ಅವಕಾಶಗಳು ಹೆಚ್ಚಾದಾಗ ಅವುಗಳನ್ನು ಸೈಡಿಗೆ ಸರಿಸುತ್ತಾರೆ. ನಂತರ ಅವಕಾಶ ಕಡಿಮೆಯಾದಾಗ ಅವಕಾಶಗಳನ್ನು ನೆನೆದು ಗೋಳಾಡುತ್ತಾರೆ. ಈ ನಟೀಮಣಿ ಕೂಡ ಮಾಡಿದ್ದು ಹಾಗೇನೆ. ಹೌದು ಕನ್ನಡದ ಮೇರು ನಟಿಯರಲ್ಲಿ ಒಬ್ಬರಾದ ರೇಖಾ ಈಗ ಎಲ್ಲಿದ್ದಾರೆ ಗೊತ್ತಾ? ಏನು ಮಾಡುತ್ತಿದ್ದಾರೆ ಗೊತ್ತಾ.? ಅವರಿಗೆ ಅವಕಾಶಗಳು ಯಾಕೆ ಕಡಿಮೆ ಎಂದು ಹೇಳುತ್ತೇವೆ ಸ್ಟೋರಿನ ಕೊನೆಯವರೆಗೂ ಓದಿ.
ರೇಖಾ ವೇದವ್ಯಾಸ ಆಗಿನ ಕಾಲದಲ್ಲಿ ಒಬ್ಬ ಹೆಸರುವಾಸಿಯಾದ ಹಾಗೂ ನಿರ್ದೇಶಕರಿಗೆ ಕಾಲ್ಶೀಟ್ ಸಿಗದಂತಹ ಬಿಸಿ ನಟಿಯರಲ್ಲಿ ಒಬ್ಬರಾಗಿದ್ದರು.

Advertisements

ಆದರೆ ವಿವಾಹವಾದ ನಂತರ ಇವರು ಸಿನಿಮಾದಿಂದ ತುಸು ದೂರವೇ ಉಳಿದಿದ್ದರು. ಆದರೆ ಈಗ ಮತ್ತೆ ಸಿನಿಮಾ ಮಾಡುವ ಹಂಬಲವಿದ್ದರೂ ಅವಕಾಶಗಳು ಸಿಗುತ್ತಿಲ್ಲ. ಇವರು “ಚಿತ್ರ “ಎಂಬ ಕನ್ನಡದ ಸಿನಿಮಾ ಮೂಲಕ ಸಿನಿ ರಂಗವನ್ನು ಪ್ರವೇಶಿಸಿದರು. ಆಗಿನ ಕಾಲದಲ್ಲಿ ಫುಲ್ ಬ್ಯುಸಿ ಇದ್ದ ನಟಿ ರೇಖಾ. ಅದು ಎಷ್ಟರಮಟ್ಟಿಗೆ ಎಂದರೆ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಇವರು ಮುಂದಿನ ಸಿನಿಮಾದ ನಟನೆಗಾಗಿ ಕಾಲ್ಶೀಟ್ ನೀಡದಷ್ಟು ಬಿಜಿಯಾಗಿದ್ದರು. ಇವರ ಚೆಲ್ಲಾಟ ಸಿನಿಮಾ ಕೂಡ ಆಗಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ಇನ್ನು ಸುದೀಪ್ ಜೊತೆ ನಟಿಸಿದ “ಕಿಚ್”ಚ ಚಿತ್ರವಂತೂ ಫುಲ್ ಫೇಮಸ್ ಆಗಿ ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯಿತು.

ಇವರಿಗೆ 2010ರಿಂದ ಅವಕಾಶಗಳು ಕಡಿಮೆಯಾಗುತ್ತ ಬಂದವು. ಕಾರಣ ಇವರ ಈಗೂ. ಹೌದು ನಿರ್ಮಾಪಕರಿಗೆ ಕಾಲ್ಶೀಟ್ ನೀಡದೇ ಇದ್ದಾಗ ಅವರು ಸಹಜವಾಗಿಯೇ ರೇಖಾ ರನ್ನು ಅನಿವಾರ್ಯವಾಗಿ ಕೈ ಬಿಡುತ್ತಾ ಹೋದರು. ಜೊತೆಗೆ ಪರಭಾಷಾ ನಟಿಯರ ಆಗಮನ ನಟಿಮಣಿಯರ ಮಧ್ಯೆ ಇರುವ ಸ್ಪರ್ಧೆಯಿಂದಾಗಿ ರೇಖಾ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಲೇ ಸಾಗಿದವು. ಈ ಎಲ್ಲ ಕಾರಣಗಳಿಂದಾಗಿ ರೇಖಾ ಈಗ ಬೆಳ್ಳಿತೆರೆಯಿಂದ ದೂರವೇ ಉಳಿದಿದ್ದಾರೆ. ರಿಂಗ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ, ಮತ್ತೆ ಸಿನಿ ರಂಗವನ್ನು ಪ್ರವೇಶ ಮಾಡಲು ಇಚ್ಛಿಸುತ್ತಿದ್ದಾರೆ.