Advertisements

ಮದುವೆ ಮೇಲೆ ಮದುವೆ ಮಾಡಿಕೊಂಡ ನಟಿ ಸರಿತಾಗೆ ಗಂಡಂದಿರು ಕೊಟ್ಟ ಕಾಟ ಎಷ್ಟು ಗೊತ್ತಾ? ಈಕೆಯ ಜೀವನದಲ್ಲಿ ಆಗಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಬಣ್ಣ ಬಣ್ಣ ಎಂದು ಮಾತನಾಡುವ ಚಿತ್ರರಂಗದವರಿಗೆ ಕಪ್ಪು ಬಣ್ಣ ಯಾವ ವೀಕ್ನೇಸ್ ಅಲ್ಲಾ.. ಅದು ವ್ಯಕ್ತಿಗೆ ಪ್ಲಸ್ ಪಾಯಿಂಟ್ ಎಂದು ತೋರಿಸಿಕೊಟ್ಟ ನಟಿ ಅಂದರೆ ಅದು ಸರಿತಾ ಅವರು. ಆಕೆಯ ಕಣ್ಣಿನ ನೋಟಕ್ಕೆ ಮರುಳಾದ ಅದೆಷ್ಟೋ ಜ‌ನ ಆಕೆಯಂತ ಹುಡುಗಿ ಬೇಕು ಎಂದು ಆಸೆ ಪಟ್ಟರು.. ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ವಿಜೃಂಭಿಸಿದ ನಟಿ ಸರಿತಾ ಅವರ ವೈವಾಹಿಕ ಜೀವನ ಮಾತ್ರ ಕಹಿ ಅನುಭವಗಳನ್ನೇ ಕೊಟ್ಟಿತು. ಆಕೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗಂಡ ಮಾತ್ರ ಸಿಗಲಿಲ್ಲ.. ಮದುವೆ ಅಂದರೆ ಏನು, ಸಂಸಾರ ಅಂದರೆ ಏನು ಎಂದು ಗೊತ್ತಿಲ್ಲದ ವಯಸ್ಸು ನಟಿ ಸರಿತಾ ಅವರದು.

Advertisements

14 ವರ್ಷದ ಸರಿತಾ ಅವರನ್ನು ನಟ ವೆಂಕಟ ಸುಬ್ಬಯ್ಯ ಅವರಿಗೆ ಕೊಟ್ಟು ಮದುವೆ ಮಾಡಿದರು ಮನೆಯವರು‌.. ಆಗಿನ್ನು ಹೈಸ್ಕೂಲ್ ಓದುತ್ತಿದ್ದ ಸರಿತಾ ಅವರು ಮದುವೆ ಆದ ಮೇಲೆ ವಿಧಿ ಇಲ್ಲದೇ ಗಂಡನ ಜೊತೆ ಚೆನ್ನೈನಲ್ಲಿ ವಾಸ ಮಾಡಿದರು. 35 ವರ್ಷದ ಗಂಡನ ಅಲೋಚನೆಗಳಿಗೂ 14 ವರ್ಷದ ಸರಿತಾ ಅವರ ಅಲೋಚನೆಗಳಿಗೂ ಹೊಂದಾಣಿಕೆ ಆಗಲಿಲ್ಲ.. ಅದರ ಜೊತೆ ಗಂಡನ ಹಿಂ’ಸೆ ಬೇರೆ. ಅದೆಲ್ಲವನ್ನೂ ಸಹಿಸಲಾಗದ ಸರಿತಾ ಅವರು ತಂದೆಯ ಮನೆಗೆ ವಾಪಸ್ ಬಂದರು.. ಆಗ ನನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸಿ ಎಂದು ಕೋರ್ಟ್ ಮೆಟ್ಟಿಲೇರಿದರು ವೆಂಕಟ ಸುಬ್ಬಯ್ಯ. ಆದರೆ ಅದನ್ನು ತಿರಸ್ಕರಿಸಿದ ಸರಿತಾ ಅವರು..

ಅದು ಮದುವೇನೆ ಅಲ್ಲಾ, ಅವರ ಜೊತೆ ನಾನು ಹೋಗುವುದಿಲ್ಲ ಎಂದು ವಾಧಿಸಿದರು.. ಕೊನೆಗೆ ಸರಿತಾ ಅವರ ಮಾತುಗಳಿಗೆ ಬೆಲೆ ಕೊಟ್ಟ ಕೋರ್ಟ್ ವಿಚ್ಚೇದನ ಮಂಜೂರು ಮಾಡಿತು‌. ಆನಂತರ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸರಿತಾ ಟಾಪ್ ನಟಿಯಾಗಿ ಬೆಳೆದರು.. ಮೊದಲ ಮದುವೆ, ಆ ಕಹಿ ಅನುಭಗಳಿಂದ ಹೊರಬರಲು ತುಂಬಾ ಸಮಯ ತೆಗೆದುಕೊಂಡ ನಟಿ ಸರಿತಾ 12 ವರ್ಷಗಳ ನಂತರ ಮಲಯಾಳಂ ನಟ ಮುಖೇಶ್ ರನ್ನು ಪ್ರೀತಿಸಿ ಮದುವೆಯಾದರು‌. ಕೆಲವು ವರ್ಷ ಇಬ್ಬರು ಅನ್ಯೋನ್ಯವಾಗಿದ್ದರು.. ಆಗೆ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು.

ಕಾಲ ಕಳೆದಂತೆ ತನ್ನ ನಿಜವಾದ ವ್ಯಕ್ತಿತ್ವ ತೋರಿಸಿದ ನಟ ಮುಖೇಶ್.. ನಟನೆ ಮಾಡಲು ಸರಿತಾ ಅವರಿಗೆ ಅವಕಾಶ ಕೊಡಲಿಲ್ಲ. ಉತ್ತಮ ಹಾಗೂ ಸಾಂಸಾರಿಕ ಪಾತ್ರಗಳನ್ನು ಮಾಡಲು ಸಹ ಬಿಡಲಿಲ್ಲ. ಹೋಗಲಿ ಗಂಡನಾದ್ರೂ ಒಳ್ಳೆಯವನಾ ಅಂದರೆ ಯಾವಾಗಲೂ ಸರಿತಾರನ್ನು ಹೊಡೆಯುತ್ತಿದ್ದರಂತೆ‌.. ಕುಡಿದು ಬಂದು ದೈ’ಹಿಕ ಮತ್ತು ಮಾನಸಿಕವಾಗಿ ತುಂಬಾ ಹಿಂ’ಸೆ ಕೊಡುತ್ತಿದ್ದ ಗಂಡ ಮುಖೇಶ್ ಎಂದು ಸ್ವತಃ ಸರಿತಾ ಅವರೇ ಹೇಳಿಕೊಂಡಿದ್ದಾರೆ. ಇಲ್ಲಿದ್ದರೆ ತಾನೆ ಹಿಂ’ಸೆ ಕೊಡೋದು ಎಂದು ಇಬ್ಬರು ಮಕ್ಕಳನ್ನು ಕರೆದುಕೊಂಡು ದುಬೈ ಗೆ ಹೋದ ನಟಿ ಸರಿತಾ..

ಅಲ್ಲಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಆದರೆ ಸರಿತಾ ಅವರು ದುಬೈ ಗೆ ಹೋಗಿದ್ದೇ ತಡ ಇಲ್ಲೊಂದು ಇನ್ನೊಂದು ಮದುವೆಯಾದರು ಮುಖೇಶ್.. ‌ಕೊನೆಗೆ 2011 ರಲ್ಲಿ ವಿಚ್ಚೇದನ ಕೊಟ್ಟ ನಟಿ ಸರಿತಾ ಅವರು ಮಕ್ಕಳೇ ನನ್ನ ಜೀವನ ಎಂದು ಬದುಕುತ್ತಿದ್ದು ಒಬ್ಬ ಮಗನನ್ನು ಎಂಬಿಬಿಎಸ್. ಮತ್ತೊಬ್ಬ ಮಗನನ್ನು ನ್ಯೂಜಿಲೆಂಡ್ ನಲ್ಲಿ ಓದಿಸುತ್ತಿದ್ದಾರೆ.. ಮಕ್ಕಳನ್ನು ತಂದೆ ಕೈಬಿಟ್ಟರು. ಹೆತ್ತ ತಾಯಿ ಮಕ್ಕಳಿಗಾಗಿ ಬದುಕುತ್ತಾರೆ, ಜೀವಿಸುತ್ತಾರೆ.. ಈಗ ನಟಿ ಸರಿತಾ ಅವರು ಅದೇ ಮಾಡುತ್ತಿದ್ದಾರೆ.