Advertisements

ನಟಿ ಸರಿತಾ ಅವರ ಮಗ ಯಾರು ಗೊತ್ತಾ? ದೊಡ್ಡ ನಟ! ಆದರೆ ಈ ವಿಷಯ ಯಾರಿಗೂ ತಿಳಿದಿಲ್ಲ..

Cinema

ನಮಸ್ತೆ ಸ್ನೇಹಿತರೆ, ಕಪ್ಪು ಕೇವಲ ಬಣ್ಣವಷ್ಟೇ.. ಬಣ್ಣ ನಟನೆಗೆ ಯಾವತ್ತು ಅಡ್ಡಿ ಬರೋದಿಲ್ಲ ಎಂದು ನಿರೂಪಿಸಿದ ಕಪ್ಪು ಸುಂದರಿ ನಟಿ ಸರಿತಾ, ಸರಿತಾ ಅವರು ತೆಲುಗಿನ ಮರೋ ಚರಿತ್ರ ಎಂಬ ಸಿನಿಮಾದಿಂದ ನಟಿಯಾಗಿ ಪಾದಾರ್ಪಣೆ ಮಾಡಿ.. ದಕ್ಷಿಣ ಭಾರತದಲ್ಲಿ ಚರಿತ್ರೆಯನ್ನೆ ಸೃಷ್ಟಿ ಮಾಡಿದರು. ಇನ್ನೂ ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕುಮಾರ್ ಅವರೊಂದಿಗೆ ಹೊಸ ಬೆಳಕು ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಹೊಸ ಬೆಳಕು ಮೂಡಿಸಿದರು. ತಮಿಳು, ತೆಲುಗು, ಮಲಯಾಳಂ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಒಂದು ಕಾಲದಲ್ಲಿ ಪೇಮಸ್ ನಟಿಯಾಗಿ ಮಿಂಚಿದರು ಸರಿತಾ ಅವರು..

Advertisements

ಕನ್ನಡದಲ್ಲಿ ಹೊಸ ಬೆಳಕು, ಕೆರಳಿದ ಸಿಂಹ, ಭಕ್ತ ಪ್ರಹ್ಲಾದ್, ಚಲಿಸುವ ಮೋಡಗಳು, ಕಾಮನ ಬಿಲ್ಲು, ಎರಡು ರೆಕ್ಕೆಗಳು ಇನ್ನೂ ಮುಂತಾದ ಚಿತ್ರಗಳಲ್ಲಿ ಈ ನಟಿ ನಟಿಸಿದ್ದಾರೆ.. ತಮ್ಮ ಕಣ್ಣಿನ ನೋಟದಲ್ಲಿ ಅದೆಷ್ಟೋ ಯುವಕರನ್ನು ಮರಳು ಮಾಡಿದ ನಟಿ ಸರಿತಾ. ಈಕೆಗೆ ಫಿಲಂ ಫೇರ್ ಅವಾರ್ಡ್ ಗಳು, ನಂದಿ ಅವಾರ್ಡ್ ಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು ಹಲವಾರು ಪುರಸ್ಕಾರಗಳು ದೊರೆತಿವೆ.. ಆಂದ್ರಪ್ರದೇಶದ ಗುಂಟೂರು ಜಿಲ್ಲೆ ಮಣಿಪಲ್ಲಿ ಎಂಬಲ್ಲಿ ಜನಿಸಿದ ಈ ನಟಿಗೆ ಕೇವಲ ಹದಿನಾಲ್ಕು ವರ್ಷಕ್ಕೆ..

ವೆಂಕಟ ಸುಬ್ಬಯ್ಯ ಎನ್ನುವವರೊಂದಿಗೆ ಕೊಟ್ಟು ಮದುವೆ ಮಾಡುತ್ತಾರೆ ಮನೆಯವರು. 35 ವರ್ಷದ ಗಂಡನ ಮನಸ್ಥಿತಿಗೆ ಹಾಗು 14 ವಯಸ್ಸಿನ ಸರಿತಾ ಮನಸ್ಥಿತಿಗೆ ಹೊಂದಾಣಿಕೆ ಆಗದೆ.. ಗಂಡನ ಹಿಂ’ಸೆ ತಾಳಲಾರದೆ ತಂದೆಯ ಮನೆಗೆ ವಾಪಸ್ ಬರುತ್ತಾರೆ ಸರಿತಾ. ನಂತರ ವೆಂಕಟ ಸುಬ್ಬಯ್ಯನವರಿಗೆ ವಿಚ್ಚೇದನ ನೀಡುತ್ತಾರೆ.. ಆನಂತರದಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಟಾಪ್ ನಟಿಯಾಗಿ ಬೆಳೆದರು. ಮತ್ತೆ ಹನ್ನೆರಡು ವರ್ಷಗಳ ನಂತರ ಮಲಯಾಳಂ ನಟ ಮುಕೇಶ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ..

ಕೆಲವು ವರ್ಷಗಳು ಅನ್ಯೋನ್ಯವಾಗಿದ್ದ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಕೆಲವು ವರ್ಷಗಳ ನಂತರ ಮುಕೇಶ್ ಕೂಡ ಸವಿತಾ ಅವರಿಗೆ ಹಿಂ’ಸೆ ಕೊಡಲು ಶುರು ಮಾಡಿದರು, ಕು’ಡಿದು ಬಂದು ಗ’ಲಾಟೆ ಮಾಡಿ ಹೊಡೆಯುತ್ತಿದ್ದರು.. ಈ ಹಿಂ’ಸೆಯನ್ನು ತಾಳಲಾರದೆ ಸರಿತಾರವರು ಮುಕೇಶ್ ಗೆ ವಿಚ್ಚೇದನ ಕೊಟ್ಟು ತನ್ನ ಇಬ್ಬರು ಮಕ್ಕಳ ಜೊತೆ ದುಬೈನಲ್ಲಿ ನೆಲೆಸಿದ್ದಾರೆ. ಸರಿತಾರವರ ಮಗ ಶ್ರವಣ್ ಕೂಡ ಒಬ್ಬ ನಟ.. ಇವರು ಮಲಯಾಳಂನ ಕಲ್ಯಾಣಂ ಎಂಬ ಚಿತ್ರದಲ್ಲಿ ನಾಯಕನಟನಾಗಿ ನಟಿಸಿದ್ದಾರೆ. ಇನ್ನೂ ಇವರ ತಂದೆ ಮುಕೇಶ್ ಅವರು ಕೂಡ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ..