ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನಲ್ಲಿ ಖ್ಯಾತಿ ಪಡೆದ ಶೃತಿ ಸಿನಿಮಾದೊಂದಿಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ಆಕ್ಟೀವ್ ಆಗಿ ಇರುತ್ತಾರೆ.. ಇಲ್ಲಿ ಸಿನಿಮಾಗಳ ಬಗ್ಗೆ ಪೋಸ್ಟರ್ ಹಂಚಿಕೊಳ್ಳುವುದರ ಜೊತೆಗೆ ತಮ್ಮ ಪೊಟೊಗಳನ್ನ ಹಂಚಿಕೆ ಮಾಡುತ್ತಾರೆ. ಈ ಹಿಂದೆ ಸಾಕಷ್ಟು ಪೊಟೊಗಳನ್ನು ಹಂಚಿದ್ದು ವೈಯಕ್ತಿಕ ಜೀವನದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಾರೆ.. ಇದೀಗ ತಮ್ಮ ಬಾಲ್ಯ ಜೀವನದ ಬಗ್ಗೆ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದು ಅಪರೂಪದ ಶಾಲೆಯ ದಿನದ ಪೊಟೊವನ್ನು ಅಪ್ಲೋಡ್ ಮಾಡಿದ್ದಾರೆ.

ಹೌದು 1989 ರಲ್ಲಿ ಪಡೆದುಕೊಂಡ ಶೃತಿ ಅವರು ಆ ಪೊಟೊವನ್ನು ತಮ್ಮ ಜಾಲತಾಣದ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದು ನನ್ನ ಸ್ಕೂಲ್ ಬಸ್ ಪಾಸ್ ಹಲವಾರು ಊರುಗಳಲ್ಲಿ ಓದಿ ಕೊನೆಗೆ ಬಂದು ಸೇರಿದ್ದು ಮಲೇಶ್ವರಂನ ಕಾರ್ಪೊರೇಷನ್ ಗರ್ಲ್ಸ್ ಹೈ ಸ್ಕೂಲ್ ಗೆ.. ನಂತರ ಇದೆ ವರ್ಷದ ಕೊನೆಯಲ್ಲಿ ನನ್ನ ಮೊಲದ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ ಚಿತ್ರಕ್ಕೆ ಆಯ್ಕೆಯಾಗಿ ನನ್ನ ಜೀವನ ಶುರುವಾಯಿತು ಎಂದು ಬರೆದು ಬಸ್ ಪಾಸಿನ ಪೊಟೊ ಹಂಚಿಕೊಂಡಿದ್ದಾರೆ.

ಈ ಪೊಟೊಗಳನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಅಚ್ಚರಿಗೊಂಡಿದ್ದು ಹೀಗೆ ನಿಮ್ಮ ಸಿನಿಮಾ ಜೀವನ ಮತ್ತು ರಾಜಕೀಯದಲ್ಲಿ ಮುಂದೆ ಬನ್ನಿ ಎಂದು ಮೆಚ್ಚುಗೆ ನೀಡಿದ್ದಾರೆ.. ಇದೀಗ ಈ ಪೋಟೋ ತುಂಬಾ ವೈರಲ್ ಆಗುತ್ತಿದ್ದೂ, ಶೃತಿ ಅವರು ಶಾಲೆಗೆ ಹೋಗುತ್ತಿದ್ದಾಗ ಅಂದರೆ 1989 ರಲ್ಲಿ ಬಸ್ ಪಾಸ್ ಬೆಲೆ ಕೇವಲ ಎರಡು ರೂಪಾಯಿ ಆಗಿತ್ತು.. ಶೃತಿ ಹಂಚಿಕೊಂಡಿರುವ ಬಸ್ ಪಾಸ್ 1989 ರ ಜೂನ್ 16 ರಂದು ಪಡೆದಿದ್ದು ಆದರಲ್ಲಿ ಬೆಲೆ ಎರಡು ರೂ ಎಂದು ನಮೂದಿಸಿದೆ.