Advertisements

ಕನ್ನಡದ ಖ್ಯಾತ ನಟಿಯ ಜೀವನದಲ್ಲಿ ನಡೆದ ಆ ಒಂದು ಘಟನೆ ಅವರು ಎಂದೆಂದಿಗೂ ಮದುವೆಯೇ ಆಗದಂತೆ ಮಾಡಿತು !

Cinema

ನಮಸ್ತೇ ಸ್ನೇಹಿತರೇ, ಚಂದನವನದ ಖ್ಯಾತ ನಟಿಯರಲ್ಲಿ ಸೀತಾರ ಕೂಡ ಒಬ್ಬರು. ತಮ್ಮ ಸಹಜ ನಟನೆಯಿಂದಲೇ ಕನ್ನಡಿಗರ ಮನೆ ಮಾತಾಗಿದ್ದಾರೆ ಚೆಂದದ ಚೆಲುವೆ ನಟಿ ಸಿತಾರ. ಕೇರಳ ಮೂಲದವರಾದ ಈ ನಟಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಆದರೆ ಅವರ ವೈಯುಕ್ತಿಕ ಜೀವನ ಮಾತ್ರ ಹೇಳಿಕೊಳ್ಳುವಂತಿಲ್ಲ. ಹೌದು, ಅವರ ಜೀವನದಲ್ಲಿ ನಡೆದ ಕೆಲವೊಂದು ಆಕಸ್ಮಿಕ ಘಟನೆಗಳೇ ಇದಕ್ಕೆ ಕಾರಣ. ನೀವು ನಂಬೋದಿಲ್ಲ..ಸಿತಾರ ಅವರಿಗೆ ಈಗ ೪೭ ವರ್ಷ. ಆದರೆ ಅವರಿಗಿನ್ನೂ ಮದ್ವೆನೇ ಆಗಿಲ್ಲ. ಇದಕ್ಕೆ ಅವರ ಜೀವನದಲ್ಲಿ ನಡೆದ ಈ ಒಂದು ಘಟನೆಯೇ ಕಾರಣ..ಹಾಗಾದ್ರೆ ಅದೇನಂದು ತಿಳಿಯೋಣ ಬನ್ನಿ..

ನಟಿ ಸಿತಾರ ಹುಟ್ಟಿದ್ದು ಕೇರಳದ ಕೀಲಿಮನೂರ್ ನಲ್ಲಿ. ಅವರ ತಂದೆ ಪರಮೇಶ್ವರಂ ನಾಯರ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ವಿದ್ಯುತ್ ಶಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ಇವರ ತಾಯಿ ವಲ್ಸಲಾ ನಾಯರ್ ಅವರು ಕೂಡ ವಿದ್ಯುತ್ ಶಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು ಸಿತಾರ ಅವರು ಶಾಸ್ತ್ರೀಯ ನೃತ್ಯದಲ್ಲಿ ಸೈ ಎನಿಸಿಕೊಂಡಿದ್ದರು. ಇನ್ನು ನಟಿ ಸಿತಾರ ಅವರು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬಂದವು. ಇನ್ನು ಸಿತಾರ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟದ್ದು 1989ರಲ್ಲಿ.

Advertisements

ಇನ್ನು ನಟಿಯರು ಅಂದ ಮೇಲೆ ಗಾಸಿಪ್ ಗಳು ಹಿಂದೆ ಬೀಳುವುದು ಸಾಮಾನ್ಯ. ಹಾಗೆಯೆ ನಟಿ ಸಿತಾರ ಅವರಿಗೆ ಮದುವೆ ಆಗಿದೆ ಎಂಬ ಸುದ್ದಿಗಳು ೨೦೧೦ರಲ್ಲಿ ವೈರಲ್ ಆಗಿತ್ತು. ಅಂದ ಹಾಗೇ ಸಿತಾರ ಅವರು ಮದುವೆಯಾಗಿದ್ದಾರೆ ಎಂದು ಎಲ್ಲರು ತಿಳಿದಿದ್ದರು. ಆದರೆ ತಾವು ನೀಡಿದ ಸಂದರ್ಶನವೊಂದರಲ್ಲಿ ಅವರು ಬಹಿರಂಗ ಮಾಡಿದ ಸತ್ಯವೊಂದು ಎಲ್ಲಾರೂ ಶಾಕ್ ಗೆ ಒಳಗಾಗುವಂತೆ ಮಾಡಿತ್ತು. ಹೌದು, ಆ ದಿನ ನಟಿ ಸಿತಾರ ನನಗಿನ್ನ ಮದುವೆಯಾಗಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಹೌದು, ಇದಕ್ಕೆ ಹಲವಾರು ಕಾರಣಗಳಿವೆ. ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಮುರುಳಿ ಮತ್ತು ಸಿತಾರ ಅವರು ತುಂಬಾ ಆತ್ಮಿಯ್ಯ ಸ್ನೇಹಿತರಾಗಿದ್ದರು. ಆದರೆ ನಟ ಮುರುಳಿ ಇದ್ದಕಿದ್ದಂತೆ ಸಾ’ವಿಗೀಡಾದ ಕರಣ ನಟಿ ಸಿತಾರ ಅವರು ಮಾ’ನಸಿಕ ಖಿ’ನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ಇನ್ನು ಈ ನೋವಿನಿಂದ ಆಚೆ ಬರಲು ಸಿತಾರ ಅವರಿಗೆ ಕೆಲ ವರ್ಷಗಳೇ ಬೇಕಾಯಿತು. ಹೀಗಿರುವಾಗಲೇ ಸಿತಾರ ಅವರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿತ್ತು. ಹೌದು, ಇದೆ ವೇಳೆ ಅವರ ತಂದೆ ತೀರಿಕೊಂಡಿದ್ದು ಅವರಿಗೆ ಇನ್ನಿಲ್ಲದ ನೋವು ಕಾಡಿತು. ಇನ್ನು ಇಷ್ಟೆಲ್ಲಾ ಆದ ಮೇಲೆ ಜೀವನದ ಮೇಲೆ ತುಂಬಾ ಬೇಸರಗೊಂಡಿದ್ದ ಸಿತಾರ ಅವರಿಗೆ ಜೀವನ ಅಂದರೆ ಇಷ್ಟೇನಾ ಅನ್ನೋ ಭಾವನೆ ಕಾಡಲು ಶುರುವಾಗಿತ್ತಂತೆ. ಇನ್ನು ಇದೆಲ್ಲದರ ಬಳಿಕ ನಟಿ ಸಿತಾರ ಅವರ ಮದುವೆಯ ಬಗ್ಗೆ ಯಾವುದೇ ಸುದ್ದಿ ಬರಲಿಲ್ಲ. ನೀವೇ ಹೇಳಿ ಸ್ನೇಹಿತರೇ, ಬಂದದ್ದೆಲ್ಲಾ ಬರಲಿ ಎಂದು ಅವುಗಳೆನ್ನಲ್ಲಾ ಎದುರಿಸುತ್ತಾ ನಾವು ಮುಂದೆ ಸಾಗುತ್ತಿರಲೇಬೇಕು ಅದೇ ಜೀವನವಲ್ಲವೇ..