Advertisements

ಸುಹಾಸಿನಿ ಅವರ ತಂಗಿ ಕೂಡ ಟಾಪ್ ನಟಿ ಯಾರು ಗೊತ್ತಾ? ನೋಡಿ..

Cinema

ನಮಸ್ತೆ ಸ್ನೇಹಿತರೆ, ಸುಹಾಸಿ‌ನಿ ತನ್ನ ಸಹಜ ಅಭಿನಯ ಮತ್ತು ತನ್ನ ಸೌಂದರ್ಯದಿಂದ ದಕ್ಷಿಣ ಭಾರತದಲ್ಲಿ ಒಂದು ಸೆನ್ಸೇಷನ್ ಉಂಟುಮಾಡಿದ ನಟಿ.. ಕಮಲ್ ಹಾಸನ್ ಅವರ ಅಣ್ಣ ಚಾರು ಹಾಸನ್ ಅವರ ಮಗಳಾಗಿ 1961 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು.. ಸುಹಾಸಿನಿ ತಮಿಳು ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನೆಚ್ಚಿನ ಮಡದಿ. 1980 ರಲ್ಲಿ ತಮಿಳು ಚಿತ್ರ ಒಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ. ನಂತರ ತಮಿಳಿನಲ್ಲಿ ಬಹುತೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಾರೆ.. ನಂತರ ಹಿಂದಿ, ಮಲಯಾಳಂ, ತೆಲುಗು, ಕನ್ನಡ ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ‌.

Advertisements

ಕನ್ನಡದಲ್ಲಿ ಕೆ ಬಾಲಚಂದ್ರನ್ ನಿರ್ದೇಶನದಲ್ಲಿ ಮೂಡಿ ಬಂದ ಉಷಾ ಎಂಬ ಚಿತ್ರದಲ್ಲಿ ಮೊದಲಬಾರಿಗೆ ನಟಿಸುತ್ತಾರೆ. ನಂತರ ಕೂಡ ಕೆ ಬಾಲಚಂದ್ರನ್ ನಿರ್ದೇಶನದ ಬೆಂಕಿಯಲ್ಲಿ ಹರಳಿದ ಚಿತ್ರದಲ್ಲಿ ಮತ್ತೊಮ್ಮೆ ನಾಯಕಿಯಾಗಿ ನಟಿಸುತ್ತಾರೆ.. ನಂತರ ಕನ್ನಡದಲ್ಲಿ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸುತ್ತಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಸಿದ ಬಂಧನ ಚಿತ್ರ ಇವರಿಗೆ ಆ ಕಾಲದಲ್ಲಿ ತುಂಬಾ ಹೆಸರನ್ನು ತಂದುಕೊಡುತ್ತದೆ.. ನಂತರ ಮುತ್ತಿನ ಹಾರ ಚಿತ್ರದಲ್ಲಿ ಮತ್ತೊಮ್ಮೆ ವಿಷ್ಣುವರ್ಧನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ. ಆ ಚಿತ್ರದಲ್ಲಿ ಸುಹಾಸಿನಿ ಅವರ ನಟನೆ ತುಂಬಾ ಮನಸೆಳೆಯುತ್ತದೆ..

ಇದಾದ ನಂತರ ಹಿಮಪಾತ, ಅಮೃತ ವರ್ಷಿಣಿ, ಯಾರಿಗೆ ಸಾಲುತ್ತೆ ಸಂಬಳ, ಮಾತಾಡ್ ಮಾತಾಡ್ ಮಲ್ಲಿಗೆ ಹೀಗೆ ಕನ್ನಡದ ಹಲಾವರು ಚಿತ್ರಗಳಲ್ಲಿ ನಟಿಸಿದ್ದಾರೆ. ಶರತ್ ಬಾಬು, ರಮೇಶ್ ಅರವಿಂದ್ ಹಾಗೂ ನಟಿ ಸುಹಾಸಿನಿ ನಟಿಸಿದ ಅಮೃತವರ್ಷಿಣಿ ಚಿತ್ರ ಇಂದಿಗೂ ಕನ್ನಡದ ಸ್ಮರಣೀಯ ದೃಶ್ಯಕಾವ್ಯ.. ವಿಷ್ಣುವರ್ಧನ್, ಅಂಬರೀಶ್, ಜೈ ಜಗದೀಶ್, ಅನಂತ್ ನಾಗ್, ರಮೇಶ್ ಅರವಿಂದ್, ಮುಮ್ಮಟ್ಟಿ, ಮೋಹನ್ ಲಾಲ್, ಚಿರಂಜೀವಿ, ರಜನಿಕಾಂತ್ ಇನ್ನೂ ಮುಂತಾದ ದಕ್ಷಿಣ ಭಾರತದ ಎಲ್ಲಾ ಪ್ರಸಿದ್ಧ ನಟರ ಜೊತೆ ನಟಿ ಸುಹಾಸಿನಿ ನಟಿಸಿದ್ದಾರೆ..

ಇವರು ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲಾವರು ಪ್ರಶಸ್ತಿ ಪುರಸ್ಕಾರ ದೊರೆತಿವೆ.. ಇನ್ನೂ ಸುಹಾಸಿನಿ ತಂಗಿ ಕೂಡ ಒಬ್ಬ ಖ್ಯಾತ ನಟಿ. ಈ ವಿಷಯ ಎಷ್ಟೋ ಜನಕ್ಕೆ ತಿಳಿದಿಲ್ಲ. ಹೌದು ಸುಹಾಸಿನಿ ಅವರ ಚಿಕ್ಕಪ್ಪನ ಮಗಳು ಅನು ಹಾಸನ್.. ನಟ ಕಮಲ್ ಹಾಸನ್ ಸಹೋದರರಲ್ಲಿ ಒಬ್ಬರಾದ ಚಂದ್ರ ಹಾಸನ್ ಮಗಳಾದ ಅನು ಹಾಸನ್ ಕೂಡ ತಮಿಳು ಚಿತ್ರರಂಗದಲ್ಲಿ ದೊಡ್ಡ ನಟಿ. ಇವರು ತಮಿಳು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಅನು ಅವರು ಕನ್ನಡದಲ್ಲಿ ಗೊಲ್ಮಾಲ್ ಗೌರಮ್ಮ ಎಂಬ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.