Advertisements

ಒಂದು ಕಾಲದ ಫೇಮಸ್ ನಟಿಯರಾಗಿ ಐಷಾರಾಮಿ ಜೀವನ ನಡೆಸಿದ್ದವರು ಈಗ ಸನ್ಯಾಸಿನಿಯರಾಗಿದ್ದಾರೆ !

Cinema

ನಮಸ್ತೇ ಸ್ನೇಹಿತರೇ, ಈ ಮನುಷ್ಯ ಜನ್ಮವೇ ಹಾಗೇ, ಅಷ್ಟಿದ್ದರೆ ಮತ್ತಷ್ಟು, ಮೊಗದಷ್ಟು ಬೇಕೆನ್ನುವ ಆಸೆ. ಮನುಷ್ಯ ಯಾವತ್ತೂ ಯಾವುದರಿಂದಲೂ ತೃಪ್ತಿ ಹೊಂದಲು ಸಾಧ್ಯವಿಲ್ಲ. ಏಕೆಂದರೆ ಅವನ ಆಸೆಯ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಆದರೆ ಇಂತಹದರಲ್ಲೂ ಕೆಲವರಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿ, ಕೋಟ್ಯಂತರ ಹಣ ಸಂಪಾದನೆ ಮಾಡಿ ನೇಮ್ ಫೇಮ್ ಎಲ್ಲವನ್ನು ಅನುಭವಿಸಿ ಕೊನೆಗೆ ಅದರ ಮೇಲೆಯೇ ಜಿಗುಪ್ಸೆ ಮೂಡಿ, ಆಧ್ಯಾತಿಮಿಕ ಚಿಂತನೆಗಳ ಕಡೆ ಅವರ ಮನಸ್ಸು ಹೊರಳಿ, ವೈರಾಗ್ಯಕ್ಕೆ ಮಾರುಹೋದ ನಟಿಯರು ಇದ್ದಾರೆ. ಹೌದು, ನಿಮಗೆ ಇದು ನಂಬಲಾಗದಿದ್ದರು ಅಕ್ಷರಶಃ ನಿಜ. ಒಂದು ಕಾಲದ ಭಾರತೀಯ ಚಿತ್ರರಂಗದಲ್ಲಿ ಟಾಪ್ ನಟಿಯರಾಗಿ ಮಿಂಚಿದವರು ಈಗ ಸನ್ಯಾಸಿಯರಾಗಿ ಬದಲಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾದ್ರೆ ಆ ನಟಿಯರು ಯಾರೆಂದು ನೋಡೋಣ ಬನ್ನಿ..

Advertisements

ಒಂದು ಕಾಲಕ್ಕೆ ಭಾರತೀಯ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದವರು ಮೋನಿಷಾ ಕೊಯಿರಾಲ. ಅದ್ಭುತವಾಗಿ ನಟಿಸುತ್ತಿದ್ದ ಈ ನಟಿ ೨೦೧೨ರಲ್ಲಿ ಮಾ’ರಕ ಕ್ಯಾನ್ಸರ್ ರೋ’ಗಕ್ಕೆ ತುತ್ತಾದರು. ಅದರಿಂದ ಚೇತರಿಸಿಕೊಂಡು ಗೆದ್ದು ಬಂದ ಬಳಿಕ ಅವರಿಗೆ ವೈರಾಗ್ಯದ ಭಾವ ಮುಡಿತೋ ಇಲ್ಲ ಬೇರೆ ಯಾವುದಾದರೂ ಕಾರಣವೋ..೨೦೧೬ರಲ್ಲಿ ಉಜ್ಜಿಯಿನಿಯಲ್ಲಿ ಧೀಕ್ಷೆ ಪಡೆದು ಸನ್ಯಾಸಿನಿಯಾದರು.

ಸನ್ಯಾಸಿನಿಯಾದ ಮತ್ತೊಬ್ಬ ನಟಿಯೆಂದರೆ ಸೋಫಿಯಾ ಹಯಾತ್. ಜೊತೆಗೆ ಇವರು ಮಾಡಲ್ ಕೂಡ ಆಗಿದ್ದರು. ಆದರೆ ಕೆಲ ವರ್ಷಗಳು ಮಾತ್ರ ಸನ್ಯಾಸಿಯಾಗಿದ್ದ ಇವರು ಮತ್ತೆ ಮದುವೆ, ದಾಂಪತ್ಯದ ಜೀವನ ಕಡೆ ಮನಸ್ಸು ಹೊರಳಿ ಸನ್ಯಾಸಿ ಜೀವನವನ್ನ ಬಿಟ್ಟು ಮದುವೆಯಾದ್ರು. ಬಾಲಿವುಡ್ ನ ಹಿಟ್ ಚಿತ್ರಗಳಲ್ಲಿ ನಟಿಸಿದಸುಂದರ ನಟಿ ಮಮತಾ ಕುಲಕರ್ಣಿ ಕೂಡ ಸನ್ಯಾಸಿನಿಯಾಗಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿನ ಪ್ರಕರಣವೊಂದರಲ್ಲಿ ಆ’ರೋಪಿಯಾಗಿದ್ದ ಈ ನಟಿ ಜೈ’ಲುವಾಸ ಅನುಭವಿಸಿ ಹೊರಬಂದಿದ್ದಾರೆ. ಹಿಂದಿ ಚಿತ್ರಗಳಲ್ಲಿ ನಟಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ನಟಿ ಬರ್ಖಾ ಮದನ್. ಆದರೆ ಈಗ ಅದೆಲ್ಲವನ್ನ ತ್ಯಜಿಸಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಬೌದ್ಧ ಸನ್ಯಾಸಿಯಾದರು. ನಟಿ ಹಾಗೂ ಮಾಡಲ್ ಆಗಿದ್ದ ಅನು ಅಗರವಾಲ್ ತನ್ನ ಚಿತ್ರಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ನಟಿ. ಆದರೆ ಜೀವನದಲ್ಲಿ ಜಿಗುಪ್ಸೆ ಮೂಡಿ ಇದ್ದಕ್ಕಿದ್ದ ಹಾಗೆ ಉತ್ತರಾಖಂಡ್ ರಾಜ್ಯದ ಆಶ್ರಮವೊಂದರಲ್ಲಿ ಈಗ ಸನ್ಯಾಸಿನಿಯಾಗಿ ಜೀವನ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಇದು ಜೀವನದ ಪರಮ ಹಾಗೂ ಕಟ್ಟ ಕಡೆಯ ಸತ್ಯ ಎಂದರೆ ತಪ್ಪಾಗೊದಿಲ್ಲ. ಎಷ್ಟೇ ಹಣ ಹೆಸರು ಇದ್ದರೂ ಏನು ಪ್ರಯೋಜನ ಹೇಳಿ ನೆಮ್ಮದಿ ಇಲ್ಲದಿದ್ದರೆ. ಹಾಗಾಗಿಯೇ ಅನೇಕ ಸೆಲೆಬ್ರೆಟಿಗಳು ನೆಮ್ಮದಿಯನ್ನ ಹುಡುಕಿಕೊಂಡು ಸನ್ಯಾಸತ್ವ ಸ್ವೀಕರಿಸಿಬಿಟ್ಟಿದ್ದಾರೆ.