Advertisements

ಪಕ್ಕ ಹಳ್ಳಿ ಹುಡುಗಿ ಆಗಿರುವ ನಟಿ ಅದಿತಿ ಅವರು ರೈತನನ್ನೇ ಪ್ರೀತಿಸಿ ಮದುವೆ ಆಗ್ತಿದ್ದಾರೆ.. ಅಷ್ಟಕ್ಕೂ ಈ ಹುಡುಗ ಯಾರು ಗೊತ್ತೇ!

Cinema

ಪ್ರತಿಯೊಬ್ಬರ ಲೈಪ್ ನಲ್ಲಿ ಮದುವೆ ಎಂಬುವುದು ಮುಖ್ಯ. ಎಲ್ಲರೂ ಒಬ್ಬರಲ್ಲಾ ಒಬ್ಬರೊಂದಿಗೆ ಭಾವನೆಗಳ ಬಳ್ಳಿ ಬೆಸೆದು ವಿವಾಹ ಅನುಬಂಧನಕ್ಕೆ ಒಳಗಾಗುತ್ತಾರೆ.. ಇನ್ನು ಇದೇ ಮದುವೆ ನಿಶ್ಚಿತಾರ್ಥ ಅಂತಾ ನೋಡಿದರೆ ಈ ಸೆಲೆಬ್ರಿಟಿಗಳದ್ದು ಸ್ವಲ್ಪ ವಿಭಿನ್ನವಾಗಿರುತ್ತದೆ. ಇಂಡಸ್ಟ್ರಿಯಲ್ಲಿ ಯಾರಾದ್ರು ಕಲಾವಿದರ ಮದುವೆ ಪಿಕ್ಸ್ ಆದ್ರೆ ಮದುವೆ, ಮೆಹೆಂದಿ, ಬ್ಯಾಚುಲರ್ ಪಾರ್ಟಿ ಅಂತ ಹಬ್ಬದ ವಾತಾವರಣ ಇಡೀ ಸೋಶಿಯಲ್ ಮೀಡಿಯಾ ಸುದ್ದಿಯಾಗುವುದು ಅಭಿಮಾನಿಗಳ ಪಾಲಿನ ಹಬ್ಬವೆ ಸರಿ. ಸರಳ ಹಾಗೂ ಗುಣ ಸ್ವಭಾವದಿಂದ ಜನರಿಗೆ ಇಷ್ಟವಾದ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಹುಡುಗ ಯಾರು, ಅದಿತಿ ಇಷ್ಟ ಪಟ್ಟ ಹುಡುಗ ಯಾರು ಇರಬಹುದಾ ಅಂತೀರಾ ಇಲ್ಲಿದೆ ನೋಡಿ.. ಸಾಮಾನ್ಯವಾಗಿ ನಟಿಯರೆಂದರೆ ಸ್ವಲ್ಪ ಇಗೊ, ಆಟಿಟ್ಯುಡ್ ಇದ್ದೆ ಇರುತ್ತೆ ಆದರೆ ಇದರಲ್ಲಿ ಅದಿತಿ ಡಿಫರೆಂಟ್.. ಪಕ್ಕಾ ಉತ್ತರ ಕನ್ನಡದ ಬೆಡಗಿಯಾದ ಅದಿತಿ ಮಾತು ಪಟಪಟ.. ಅದರಂತೆ ಮನೆ ಕೆಲಸ, ಗದ್ದೆ ಕೆಲಸ, ಸಾಕು ಪ್ರಾಣಿಗಳ ಮೇಲೆ ಪ್ರೀತಿ ಎಲ್ಲದರಲ್ಲೂ ಮೇಲುಗೈ.. ಕಿರುತೆರೆಯ ಮೂಲಕ‌ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಸದ್ಯ ‌ಸ್ಯಾಂಡಲ್ ವುಡ್ ನಟಿಯರಲ್ಲಿ ಟಾಪ್ ಲಿಸ್ಟ್ ನಲ್ಲಿ ಒಬ್ಬರಾಗಿದ್ದಾರೆ.

[widget id=”custom_html-3″]

Advertisements

ಸಧ್ಯ ಆರೇಳು ಸಿನಿಮಾಗಳ ಅವಕಾಶ ಕೈಯಲ್ಲಿರುವ ಅದಿತಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ನಿಜಕ್ಕೂ ಸಿನಿಮಾ ಮಂದಿ ಅದಿತಿಯ ನಿರ್ಧಾರ ಕಂಡು ಆಶ್ಚರ್ಯ ಪಟ್ಟಿದ್ದೂ ಉಂಟು.. ಇನ್ನು ಇತ್ತ ಅದಿತಿ ತನ್ನ ಕೈಹಿಡಿಯುವ ಹುಡುಗನ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸಿದ್ದಾರೆ. ಅದಿತಿ ಪಕ್ಕಾ ಹಳ್ಳಿ ಹುಡುಗಿ, ಮಾಡ್ರನ್ ಬಟ್ಟೆ ತೊಟ್ಟು ಬಣ್ಣ ಹಚ್ಚುವುದು ಗೊತ್ತು, ಬಳೆ ಮೇಲೆರಿಸಿ ಜೋಳದ ರೊಟ್ಟಿ ತಟ್ಟೊದು ಗೊತ್ತು.. ಅಜ್ಜಿ ತಾತನೊಂದಿಗೆ ಬೆಳೆದ ಅದಿತಿಗೆ ಹಳ್ಳಿ ಎಂದರೆ ಬಲು ಪ್ರೀತಿ.. ಇಷ್ಟೆಲ್ಲಾ ಫೇಮಸ್ ಆದ್ರು ಕೂಡ ತಾನು ನಡೆದು ಬಂದ ಸಂಸ್ಕೃತಿ, ಪದ್ಧತಿ ಎಂದು ಮರೆತವರಲ್ಲಾ.. ಮೊಮ್ಮಗಳ ಮದುವೆಯ ಕುರಿತು ವೀಡಿಯೋಂದರಲ್ಲಿ ಅದಿತಿ ಅವರ ಅಜ್ಜಿ ತಾತ ಮೊಮ್ಮಗಳ ಮದುವೆ ನೋಡಬೇಕು ಅದೊಂದೆ ನಮ್ಮ ಆಸೆ ಎಂದಿದ್ದರು. ಹೌದು ಅಜ್ಜಿ ತಾತನ ಆಸೆಯನ್ನು ಈಡೇರಿಸಲು ಇದೀಗ ಅದಿತಿ ಮದುವೆಯ ನಿರ್ಧಾರ ಮಾಡಿದ್ದಾರೆ. ಆದರೆ ಹುಡುಗ ಮಾತ್ರ ಅದಿತಿ ಇಷ್ಟ ಪಟ್ಟವರು..

[widget id=”custom_html-3″]

ಹುಡುಗ ಮತ್ಯಾರೂ ಅಲ್ಲ.. ಆತನ ಹೆಸರು ಯಶಸ್.. ಚಿಕ್ಕಮಗಳೂರಿನ ಮೂಲದವರಾಗಿದ್ದು ಮೂಲತ ರೈತನಾಗಿದ್ದಾನೆ. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದು ಈಗಲೂ ಕಾಫಿ ಕೃಷಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.. ಯಶಸ್ ಹಾಗೂ ಅದಿತಿ ಇಬ್ಬರೂ ಪರಸ್ಪರ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು ಈಗ ಹಸೆಮಣೆಯೆರಲು ಮುಂದಾಗಿದ್ದಾರೆ. ಎರಡೂ ಕುಟುಂಬಗಳಿಗೂ ತಮ್ಮ ಪ್ರೀತಿಯ ವಿಚಾರ ತಿಳಿಸಿದ ಜೋಡಿ ಈ ಇಬ್ಬರ ಕುಟುಂಬಗಳನ್ನು ಒಪ್ಪಿಸುವುದಕ್ಕೆ ಇಷ್ಟು ಸಮಯವಾಗಿದೆ.. ಸಧ್ಯ ಇದೀಗ ಈ ಇಬ್ಬರ ಮದುವೆಗೆ ಅದಿತಿ ಹಾಗೂ ಯಶಸ್ ಎರಡೂ ಕುಟುಂಬವೂ ಸಮ್ಮತಿಸಿದ್ದು ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ.. ಯಶಸ್ ಜೊತೆ ಫೋಟೋ ಒಂದನ್ನು ಹಂಚಿಕೊಂಡಿದ್ದು ಕನಸೊಂದು ಕನಸಿನಂತೆಯೇ ನಿಜವಾಯಿತೆಂದು ಬರೆದು ಸೋಶಿಯಲ್ ಮಿಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದರು..

[widget id=”custom_html-3″]

ಫೋಟೋದಲ್ಲಿ ಯಶಸ್ ಅದಿತಿಯನ್ನು ಅಪ್ಪಿಕೊಂಡದ್ದನ್ನು ನೋಡಿ ಹಾಗೂ ಉಂಗುರವನ್ನು ಹೈಲೈಟ್ ಮಾಡಿದ್ದ ಕಾರಣ ಇಬ್ಬರ ನಡುವೆ ನಿಶ್ಚಿತಾರ್ಥವಾಗಿದೆ ಎಂದು ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದರು.. ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಅದಿತಿ.. ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿರೋದು ನಿಜ.. ಹುಡುಗನ ಹೆಸರು ಯಶಸ್ ಎಂದು ತಿಳಿಸಿದ್ದಾರೆ.ಸದ್ಯ ಅದಿತಿ ಅವರ ಕೈಯಲ್ಲಿ ಆರೇಳು ಸಿನಿಮಾಗಳಿದ್ದು ಕಾರಣ ಈ ನಡುವೆ ಮದುವೆಯಾದರೆ ಸಿ‌ನಿಮಾಗಳಿಗೆ ತೊಂದರೆ ಯಾಗುತ್ತದೆ ಎಂದು ಎಲ್ಲಾ ಸಿನಿಮಾಗಳ ಚಿತ್ರೀಕರಣ ಮುಗಿದ ಬಳಿಕ ಮುಂದಿನ ವರ್ಷಾಂತ್ಯದಲ್ಲಿ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದ್ದು ‌ಇನ್ನು ಈ ಕುರಿತು ಸೋಶಿಯಲ್ ‌ಮೀಡಿಯಾದಲ್ಲಿ ಅಭಿಮಾನಿಗಳ‌ ಹಾರೈಕೆ ಸುರಿಮಳೆ‌ ಸುರಿದಿದೆ. ಅಂತು ಅದಿತಿ ಮದುವೆಯಾಗಲಿರುವುದು ಖುಷಿ ಸಂಗತಿ.