Advertisements

ಆದಿಚುಂಚನಗಿರಿಯಲ್ಲಿ ಈ ರಹಸ್ಯ ನಿಮಗೆ ಗೊತ್ತಿರಲಿ! ಇಲ್ಲಿ ನಡೆಯುತ್ತೆ ವಿಚಿತ್ರ ಪೂಜೆ..

Temples

ಅಕಾಲಿಕ ಕಾಲಭೈರವನನ್ನು ದೇವಸ್ಥಾನಗಳಲ್ಲಿ ಮಾತ್ರ ಪೂಜಿಸಲಾಗುತ್ತದೆ. ಮನೆಗಳಲ್ಲಿ ಪೂಜಿಸುವುದಿಲ್ಲ. ಫೋಟೋಸಹ ಹಾಕುವುದಿಲ್ಲ. ಈ ಕಾಲಭೈರವನ ವಾಹನ ಶ್ವಾನ. ಕಾಲಭೈರವನ ಜೊತೆಗೆ ಈ ಶ್ವಾನಕ್ಕೂ ದಿನಕ್ಕೆ ಎರಡು ಬಾರಿ ಪೂಜೆ ಸಲ್ಲುತ್ತದೆ. ಅದು ಎಲ್ಲಿ?ಯಾಕೆ ಅಂತ ನೋಡೋಣ ಬನ್ನಿ. ಈ ದೇವಸ್ಥಾನ ಇರುವುದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ. ಉತ್ತರ ದಕ್ಷಿಣದಲ್ಲಿರುವ ಕಲ್ಲು ಬಂಡಿಗಳಿಂದ ಕೂಡಿದ ಈ ಬೆಟ್ಟ ಸಮುದ್ರ ಮಟ್ಟದಿಂದ ದಿಂದ 3721 ಅಡಿ ಎತ್ತರದಲ್ಲಿದೆ. ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವು ಆದ ಆದಿಚುಂಚನಗಿರಿ ಸಾವಿರಾರು ಭಕ್ತರನ್ನು ಹೊಂದಿದೆ. ಈ ಕ್ಷೇತ್ರಕ್ಕೆ ಪುರಾಣ ಇತಿಹಾಸವೂ ಇದೆ. ಹಿಂದೆ ರಾಕ್ಷಸರ ಸಂಹಾರಕ್ಕೆ ಎಂದು ವಿಷ್ಣು ಮೋಹಿನಿಯ ರೂಪ ತಾಳಿದ ನಂತರ ತನ್ನ ಸಹಜ ಸ್ಥಿತಿಗೆ ಮರಳುವ ಹೊತ್ತಿನಲ್ಲಿ ಶಿವ ಮೋಹಿನಿಯ ಸೌಂದರ್ಯಕ್ಕೆ ಮಾರುಹೋಗಿದ್ದ. ಮೋಹಿನಿಯ ಮೋಹಕ್ಕೆ ಬಿದ್ದ ಶಿವನಿಂದ ಮೋಹಿನಿ ಗರ್ಭವತಿಯಾಗುತ್ತಾಳೆ.

Advertisements

ಮೋಹಿನಿಯ ರೂಪದಲ್ಲಿ ವಿಷ್ಣು ಇರುತ್ತಾನೆ. ವಿಷ್ಣು ಮತ್ತು ಶಿವನ ನಿಧನದಿಂದ ಹುಟ್ಟಿದ ಶಕ್ತಿಯನ್ನು ಮೋಹಿನಿ ಒಂಬತ್ತು ತಿಂಗಳು ಗರ್ಭದಲ್ಲಿ ಇಟ್ಟು ಕೊಳ್ಳಲಾಗುವುದಿಲ್ಲ. ಆಗ ಅಕಾಲಿಕವಾಗಿ ಮಗುವಿನ ಜನನವಾಗುತ್ತದೆ. ಹೀಗೆ ಜನಿಸಿದ ಮಗುವೇ ‘ಅಕಾಲಿಕ ಕಾಲಭೈರವ.’ ಇವನು ವಿಷ್ಣು ಮತ್ತು ಶಿವನ ಪುತ್ರನಾಗಿದ್ದಾನೆ ಈತನನ್ನು ಮುಂದೆ ಕಾಲಭೈರವ ಎಂದು ಕರೆದರು. ಈತನೇ ಮುಂದೆ ಶಿವನ ದ್ವಾರಪಾಲಕ ನಾಗಿರುತ್ತಾನೆ. ಪಾರ್ವತಿಯ ಪುತ್ರನಾಗಿ ಲೋಕಕಲ್ಯಾಣಕ್ಕಾಗಿ, ಒಕ್ಕಲಿಗರ ಆರಾಧ್ಯದೈವವಾಗಿ, ಮನೆದೇವರಾಗಿ, ಆದಿಚುಂಚನಗಿರಿಗೆ ಬಂದು ನೆಲೆಸಿದನು. ಅಲ್ಲಿ ಜಾತಿ-ಭೇದಗಳ ಹಂಗಿಲ್ಲ. ಎಲ್ಲರೂ ಸಮಾನರಾಗಿ ಕಾಲಭೈರವನನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಈ ಸ್ಥಳದಲ್ಲಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರ ಸ್ವಾಮೀಜಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದರು.

1993 ರಲ್ಲಿ ಆರಂಭಿಸಿ 2008ರಲ್ಲಿ ಸ್ವಾಮಿಗಳ ಹಸ್ತದಿಂದ ಈ ದೇವಾಲಯವನ್ನು ಉದ್ಘಾಟಿಸಲಾಯಿತು. 175 ಅಡಿ ವಿಸ್ತಾರವಾಗಿರುವ ಈ ಕಾಲಭೈರವ ದೇವಸ್ಥಾನ ನಾಲ್ಕು ಗೋಪುರಗಳಿಂದ ಕೂಡಿದೆ ಇದನ್ನು ದ್ರಾವಿಡ ಶೈಲಿಯಲ್ಲಿ ಕೆತ್ತಲಾಗಿದೆ ದೇವಸ್ಥಾನದ ಎಲ್ಲೆಡೆ ಕಾಲಭೈರವನ ಮೂರ್ತಿಗಳನ್ನು ಕಾಣಬಹುದು ಹೆಬ್ಬಾಗಿಲಿನಲ್ಲಿ ಮೊದಲು ಕಾಣಿಸಿಕೊಳ್ಳುವ ವಳೆ ಕಂಬದಮ್ಮ. ಆದಿಶಕ್ತಿ ಪಾರ್ವತಿಯು ಸ್ತಂಬ ಅಥವಾ ಕಂಬದ ರೂಪದಲ್ಲಿ ಇಲ್ಲಿ ನೆಲೆಸಿದ್ದಾಳೆ ಎಂದು ಪ್ರತೀತಿಯಿದೆ. ಇನ್ನು ಶಿವ ತಪಸ್ಸಿಗೆ ಕೂತ ಸ್ಥಳವನ್ನು ಜ್ವಾಲಾಪೀಠ ಎಂದು ಕರೆಯುತ್ತಾರೆ. ಇದು ಶಿವನಿಂದ ಸ್ಥಾಪಿತವಾದ ಪ್ರಥಮ ಪೀಠ ಇದಾಗಿದೆ. ಹಾಗೆ ಅನ್ನಪೂರ್ಣೇಶ್ವರಿ ಪೀಠವು ಇದರ ಹಿಂದೆ ಇದೆ. ಇಲ್ಲಿ ಪ್ರತಿನಿತ್ಯವೂ ಸಾವಿರಾರು ಭಕ್ತರಿಗೆ ಅನ್ನದಾನ ದಾಸೋಹದ ವ್ಯೆವಸ್ಥೆ ಇದೆ. ಬೆಟ್ಟದ ತುದಿಯಲ್ಲಿ ಶಿವನು ಲಿಂಗರೂಪದಲ್ಲಿ ಗವಿಯಲ್ಲಿ ನೆಲೆಸಿದ್ದಾನೆ. ಆದ್ದರಿಂದ ಈ ದೇವಸ್ಥಾನವನ್ನು ಗವಿಸಿದ್ದ ಗುಹೆ ಅಥವಾ ಗವಿಸಿದ್ದೇಶ್ವರ ಎಂದು ಕರೆಯುತ್ತಾರೆ. ಇಲ್ಲಿ ನಂದಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ..