Advertisements

ಅಡಿಕೆ ಬೆಳೆ ಹಾಕಿದ್ರೆ ಲಾಭ ಇದಿಯಾ! ಅಡಿಕೆ ತಳಿ ಯಾವುದು ಇರ್ಬೇಕು, ಯಾವರೀತಿ ಕೃಷಿ ಮಾಡಬೇಕು ಗೊತ್ತಾ? ರೈತನಿಂದ ಮಾಹಿತಿ..

Kannada Mahiti

ಪ್ರಿಯ ಓದುಗರೇ ಮಲೆನಾಡು, ಕರಾವಳಿ ತೀರಗಳು ತೆಂಗು ಮತ್ತು ಅಡಿಕೆ ಬೆಳೆಗೆ ಹೆಸರುವಾಸಿ. ಕೆಲವು ಕಡೆ ಅಡಿಕೆ ಮತ್ತು ತೆಂಗಿನ ಒಟ್ಟಾಗಿ ಬೆಳೆಯುತ್ತಿದ್ದಾರೆ.ಇನ್ನು ಕೆಲವರು ಒಂದೊಂದು ಬೇರೆ ಬೇರೆಯಾಗಿ ಬೆಳೆದು ಲಾಭ ಪಡೆಯುತ್ತಿದ್ದಾರೆ. ಅಡಿಕೆ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇಂದಿಗೂ ಅಡಿಕೆಗೆ ಭಾರಿ ಬೇಡಿಕೆ ಇದೆ. ಈ ಅಡಿಕೆ ಬೆಳೆ ನಾಟಿಗೂ ತನ್ನದೇ ಆದ ಒಂದು ವಿಧಾನವಿದೆ. ಅದರಂತೆ ನಾಟಿ ಮಾಡಿ ಅಡಿಕೆ ಬೆಳೆದಲ್ಲಿ ನೀವು ಕೂಡಾ ಲಾಭ ಪಡೆಯಬಹುದು. ಅದು ಹೇಗೆ ಅಂದ್ರೆ.?

[widget id=”custom_html-3″]

ಈ ರೈತ ಮಾಡಿದ್ದು ತಿಳಿದ್ರೆ ಅರ್ಥ ಆಗುತ್ತೆ. ಹೌದು ಈ ರೈತ ತಮ್ಮ 34 ಗುಂಟೆ ಕೃಷಿಭೂಮಿಯಲ್ಲಿ ಐದುನೂರು ಅಡಿಕೆ ಸಸಿಗಳನ್ನು ತುಮಕೂರು ಜಿಲ್ಲೆಯಿಂದ ತರಿಸಿ ನಾಟಿ ಮಾಡಿದ್ದಾರೆ. ನಾಟಿ ಮಾಡುವ ಮೊದಲು ಜೆಸಿಬಿಯಿಂದ ಟ್ರೆಂಚ್ ಗಳನ್ನು ಹೊಡಿಸಿ ಅಡಿಕೆ ಮತ್ತು ಬಾಳೆ ಎರಡನ್ನು ಒಟ್ಟಿಗೆ ನಾಟಿ ಮಾಡಿದ್ದಾರೆ. ಇನ್ನು ಈ ಸಸಿಗಳಿಗೆ ವಾರಕ್ಕೆ ಮೂರು ದಿನಗಳಂತೆ ಡ್ರಿಪ್ ಮೂಲಕ ಗಿಡದ ಬುಡಕ್ಕೆ ನೀರು ಬಿಡುತ್ತಿದ್ದಾರೆ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಅಡಿಕೆ ಯೊಂದಿಗೆ ಬಾಳೆ ಗಿಡ ಏಕೆ ನೆಟ್ಟರು ಎಂದು ನೋಡುವುದಾದರೆ, ಅಡಿಕೆ ಸಸಿಗಳಿಗೆ ನೆರಳಿನ ಅವಶ್ಯಕತೆ ಇದ್ದು, ಬಾಳೆಯನ್ನು ಇದರ ಜೊತೆಗೆ ನಾಟಿ ಮಾಡಿದ್ದಾರೆ. ಒಂದು ವರ್ಷದ ನಂತರ ಬಾಳೆಯನ್ನು ತೆಗೆಯಬಹುದು. ಇವುಗಳಿಗೆ ಸಾವಯವ ಗೊಬ್ಬರವನ್ನು ವರ್ಷಕ್ಕೆ ಒಮ್ಮೆ ಹಾಕಬೇಕು ಎನ್ನುತ್ತಾರೆ ಈ ರೈತ. ಈ ರೀತಿ ನಾಟಿಮಾಡಿದ ಅಡಿಕೆ ಮರಗಳು ಆರು ವರ್ಷದ ನಂತರ ಫಸಲು ನೀಡಲು ಆರಂಭಿಸುತ್ತವೆ. ಈ ಅಡಿಕೆ ಮರಗಳಿಗೆ ಹೀಗೆ ಪ್ರತಿ ವರ್ಷವೂ ಸಾವಯವ ಗೊಬ್ಬರವನ್ನೇ ಬಳಸಬೇಕು. ಹೇಗೆ ಬಳಸಿದಲ್ಲಿ ಉತ್ತಮ ಲಾಭದಾಯಕವಾದ ಅಡಿಕೆ ಫಸಲು ಪಡೆಯಬಹುದು. ಈ ಸಸಿಗಳನ್ನು ನಾಟಿ ಮಾಡುವವರು ಅವರ ವ್ಯವಸಾಯಕ್ಕೆ ಅನುಕೂಲವಾಗುವಂತೆ ಸಹ ಸಸಿಗಳನ್ನು ನಾಟಿ ಮಾಡಬಹುದು.

[widget id=”custom_html-3″]

[widget id=”custom_html-3″]

ಇವುಗಳನ್ನು 6 ಇಲ್ಲವೇ 8 ಅಡಿಗಳ ಅಂತರದಲ್ಲಿಯು ಸಹ ನಾಟಿ ಮಾಡಬಹುದು ಎಂದು ಹೇಳುತ್ತಾರೆ ಈ ರೈತ. ಸಾವಯವ ಕೃಷಿಯನ್ನು ಅನುಸರಿಸುವುದರಿಂದ ಉತ್ತಮ ಅಡಿಕೆ ಫಸಲನ್ನು ಪಡೆಯಬಹುದು. ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದಾಗಿದೆ.ಇದರ ಜೊತೆಗೆ ತೆಂಗು ಹಾಕಿದರೆ ಹೆಚ್ಚಿನ ಪೋಷಕಾಂಶಗಳನ್ನು ಗೊಬ್ಬರದ ಮೂಲಕ ಒದಗಿಸಬೇಕು. ಆಗ ಮಾತ್ರ ಅಡಿಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇಲ್ಲವಾದಲ್ಲಿ ಅಡಕೆಯ ಇಳುವರಿ ಕಡಿಮೆಯಾಗುತ್ತದೆ. ಬರಿಯ ಅಡಿಕೆ ಬೆಳೆಯುವವರು ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಫಸಲು ಪಡೆಯಬಹುದು ಲಾಭದಾಯಕ ಅಡಿಕೆ ಬೆಳೆಯನ್ನು ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.