ಅಯೋದ್ಯೆಯಲ್ಲಿ ರಾಮ ಮಂದಿರ ಶಿಲನ್ಯಾಸ ಭೂಮಿಯ ಪೂಜೆ ನಡೆಯಲ್ಲಿದ್ದು ಈ ದಿನವನ್ನು ಇಡೀ ದೇಶವೇ ಆಚರಿಸುತ್ತಿದೆ. ಎಷ್ಟೋ ವರ್ಷಗಳ ಕನಸು ಇಂದು ನನಸಾಗಿದೆ. ಇನ್ನೂ ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಇದರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಈ ದಿನ ಕೇವಲ ನನಗಷ್ಟೇ ಅಲ್ಲದೇ, ಇಡೀ ದೇಶಕ್ಕೆ ಭಾವನಾತ್ಮಕ ಹಾಗೂ ಐತಿಹಾಸಿಕ ದಿನವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ ಆಯೋದ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ವಿಜೃಂಭಣೆಯಿಂದ ವೈಭವೋತೇತ ಮಂದಿರ ನಿರ್ಮಾಣವಾಗಬೇಕು ಎಂದು ಬಿಜೇಪಿ ಆಕಾಂಕ್ಷೆ ಗುರಿಯಾಗಿತ್ತು. ಹಾಗೆ ರಾಮ ದೇವಸ್ತಾನವು ಪ್ರತಿಯೊಬ್ಬರಿಗೂ ಕೂಡ ನ್ಯಾಯವನ್ನು ಒದಗಿಸಿಕೊಡುವ ಬಲಿಷ್ಠ, ಸಮೃದ್ಧ ಹಾಗೂ ಸಾಮರಸ್ಯವಾದ ಭಾರತವನ್ನು ಪ್ರತಿಬಿಂಬಿಸುತ್ತದೆ ಎಂದು ಅಡ್ವಾಣಿಯವರು ಭಾವನಾತ್ಮಕವಾಗಿ ತಿಳಿಸಿದ್ದಾರೆ.

ಕೆಲವೊಂದು ಬಾರಿ ಮಹತ್ವದ ಕಾರ್ಯಗಳ ಕನಸುಗಳು ನನಸಾಗಲು ಬಹುತೇಕ ದಿನಗಳೆ ಬೇಕಾಗುತ್ತದೆ. ಆದರೆ ಆ ಕನಸುಗಳು ನನಸಾದಾಗ ನಿಜಕ್ಕೂ ಜೀವನ ಸಾರ್ಥಕ. ಉದಾಹರಣೆಗೆ ಶಬರಿಯೂ ಕೂಡ ಶ್ರೀರಾಮನನ್ನು ಬೇಟಿ ಯಾಗಲು ಎಷ್ಟೋ ವರ್ಷಗಳು ಬೇಕಾಯಿತು. ಹಾಗೇ ಶ್ರೀ ರಾಮನ ಮಂದಿರ ನಿರ್ಮಾಣದ ಮಹತ್ವ ಕಾರ್ಯಕ್ಕೆ ಇಷ್ಟು ವರ್ಷಗಳು ಬೇಕಾದವು. ನನ್ನ ಹೃದಯಕ್ಕೇ ತುಂಬಾ ಹತ್ತಿರವಾದ ಅಂಥ ಕನಸು ಇಂದು ನೆರವೇರುತ್ತಿದೆ ಎಂದು ಅಡ್ವಾಣಿಯವರು ಹೇಳಿದ್ದಾರೆ.