Advertisements

ಗಟ್ಟಿಮೇಳ ಸೀರಿಯಲ್ ಆದ್ಯಾ ನಿಜ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ..

Cinema Entertainment

ಗಟ್ಟಿಮೇಳ ಸೀರಿಯಲ್ ಆದ್ಯಾ ನಿಜ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು ಗಟ್ಟಿಮೇಳ ಧಾರಾವಾಹಿಯಲ್ಲಿ ಸಹೋದರಿ ಪಾತ್ರವನ್ನು ನಿರ್ವಹಿಸುತ್ತಿರುವ ಅನ್ವಿತಾ ಈಗ ಸಖತ್ ಫೇಮಸ್ ಆಗಿದ್ದಾರೆ. ಪ್ರಾರ್ಥಮಿಕ ಶಿಕ್ಷಣವನ್ನ ಹುಟ್ಟೂರಿನಲ್ಲೆ ಪಡೆದು ನಂತರ ಕಾಲೇಜ್ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ತಾನು ನಟಿಯಾಗಬೇಕೆಂದು ಯಾವತ್ತೂ ಅನ್ವಿತಾ ಅಂದುಕೊಂಡಿರಲಿಲ್ಲ. ಆದರೆ ನಿರೂಪಕಿ ಆಗಬೇಕೆಂಬ ಆಸೆ ಮೊದಲಿನಿಂದಲೂ ಇತ್ತು.ಮಂಗಳೂರಿನಲ್ಲಿ ಎಂಬಿಎ ಓದುತ್ತಿದ್ದ ವೇಳೆ ಅಲ್ಲಿನ ನಮ್ಮ ಟಿವಿ ಲೋಕಲ್ ಚಾನೆಲ್ ನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Advertisements

ಈ ಮೂಲಕ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ ಇವರು ಅದೆ ಸಂದರ್ಭದಲ್ಲಿ ತುಳು ಚಿತ್ರದಿಂದ ಆಫರ್ ಬಂದಿತ್ತು. ಚಾನೆಲ್ ಅಲ್ಲಿ ಹ್ಯಾಂಕರಿಂಗ್ ಮಾಡುತ್ತಲೆ ಸಾಕಷ್ಟು ಸ್ಟೇಜ್ ಶೊಗಳನ್ನು ನಡೆಸಿಕೊಟ್ಟಿದ್ದಾರೆ. ಅನ್ವಿತಾ ಮೊದಲು ತೆರೆಮೇಲೆ ಕಾಣಿಸಿಕೊಂಡಿದ್ದು ತುಳು ಚಿತ್ರದಲ್ಲಿ ನಿರ್ದೇಶಕ ರಂಜಿತ್ ಬಾಜೆಪೆ ಅವರ ದಂಡ್ ಚಿತ್ರದ ಮೂಲಕ ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದರು. ತದನಂತರ ಭಲೆ ಪುದರ್ ದೀಕ ಪೆಟ್ಟ್ ಕಮ್ಮಿ ಮೊದಲಾದ ತುಳು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಬಣ್ಣ ಬಣ್ಣದ ಬದುಕು ಜೀವನ ಯಜ್ಞ ಎಂಬ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ.

ಐದು ವರ್ಷಗಳ ಕಾಲ ತುಳು ಚಿತ್ರದಲ್ಲಿ ನಟಿಸಿದ ಇವರು ಕಿರುತೆರೆ ಹಾಗೂ ಹಿರುತೆರೆಯಲ್ಲೂ ಮಿಂಚಿನ ನಾಯಕಿಯಾಗಿದ್ದಾರೆ. ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕನ ತಂಗಿ ಪಾತ್ರವನ್ನ ನಿರ್ವಹಿಸುತ್ತಿರುವ ಆದ್ಯಾ ಅಲಿಯಾಸ್ ಅನ್ವಿತಾ ಈಗ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಜನರು ಕೂಡ ಇವರನ್ನು ಗಟ್ಟಿಮೇಳದ ಆದ್ಯಾ ಎಂದೆ ಗುರುತಿಸುತ್ತಾರೆ..