Advertisements

ಊಟ ತಿಂದ ತಕ್ಷಣ ದಯವಿಟ್ಟು ಈ ತಪ್ಪುಗಳನ್ನ ಮಾಡಲೇಬೇಡಿ ! ಬೇಡವೇ ಬೇಡ..

Kannada Mahiti

ಸ್ನೇಹಿತರೇ, ನಮ್ಮಲ್ಲಿ ಊಟ ಆದ ತಕ್ಷಣ ಹಾಸಿಗೆ ಮೇಲೆ ಮಲಗೋರೆ ಜಾಸ್ತಿ. ಆದರೆ ಇದು ಒಳ್ಳೆಯ ಅಭ್ಯಾಸವಂತೂ ಅಲ್ಲವೇ ಅಲ್ಲ. ಇದರಿಂದ ಹೊಟ್ಟೆನೋವು, ಉಬ್ಬರ ಸೇರಿದಂತೆ ಹಲವು ಸಮಸ್ಯಗಳನ್ನ ಎದುರಿಸಬೇಕಾಗುತ್ತೆ. ಊಟ ಆದ ಬಳಿಕ ಸ್ವಲ್ಪ ಸಮಯ ವಾಕಿಂಗ್ ಮಾಡುವುದು ಉತ್ತಮ. ಇದರಿಂದ ತಿಂದ ಆಹಾರ ಜೀರ್ಣ ಆಗುವುದಲ್ಲದೆ ತಂಪಾಗಿ ನಿದ್ದೆ ಕೂಡ ಬರುತ್ತೆ. ನಾವು ಇದೆ ರೀತಿ ಊಟ ಆದ ತಕ್ಷಣ ನಮಗೆ ತಿಳಿದೋ, ತಿಳಿಯದೆಯೋ ಹಲವಾರು ತಪ್ಪುಗಳನ್ನ ಮಾಡುತ್ತೇವೆ. ಆದರೆ ಇವು ಆರೋಗ್ಯಕ್ಕೆ ಉತ್ತಮವಲ್ಲ. ಹಾಗಾದ್ರೆ ಊಟವಾದ ಬಳಿಕ ಏನೆಲ್ಲಾ ತಪ್ಪುಗಳನ್ನ ಮಾಡಬರದು ಎಂಬುದನ್ನ ತಿಳಿಯೋಣ ಬನ್ನಿ..

Advertisements

ಊಟ ಆದ ತಕ್ಷಣ ಹಣ್ಣುಗಳ ಸೇವನೆ : ಸಾಮಾನ್ಯವಾಗಿ ಊಟ ಆದ ಬಳಿಕ ಹಣ್ಣುಗಳನ್ನ ತಿನ್ನೋದು ಜಾಸ್ತಿ. ಆದರೆ ಇದು ನಮ್ಮ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ನಾವು ತಿಂದಿರೋದು ಜೀರ್ಣ ಆಗೋಕೆ ಕಿಣ್ವಗಳ ಅವಶ್ಯಕತೆ ಇದೆ. ಇನ್ನು ಹಣ್ಣುಗಳಲ್ಲಿ ಸಕ್ಕರೆ ಅಂಶ ಇರುವುದರಿಂದ ಕರಗಿಸಲು ಆಗುವುದಿಲ್ಲ. ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಹಣ್ಣುಗಳನ್ನ ಊಟ ಆದ ಮೇಲೆ ತಿನ್ನುವುದಕ್ಕಿಂತ ಊಟಕ್ಕಿಂತ ಮೊದಲು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಒಳ್ಳೆಯದು. ಇದರಿಂದ ಸಕ್ಕರೆ, ನಾರಿನಂಶ ಹಾಗೂ ಪೌಷ್ಠಿಕಾಂಶಗಳು ಪಚನಕ್ರಿಯೆಗೆ ಸಹಾಯ ಮಾಡುತ್ತವೆ. ಊಟ ಆದ ಬಳಿಕ ಹಣ್ಣುಗಳನ್ನ ತಿನ್ನುವುದರಿಂದ ಅಜೀರ್ಣ, ಹುಳಿತೇಗು ಹಾಗೂ ಎದೆ ಉರಿ ಸೇರಿದಂತೆ ಹಲವು ಸಮಸ್ಯೆಗಳು ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ.

ಊಟ ಆದ ಬಳಿಕ ಟೀ ಕಾಫಿ ಸೇವನೆ : ಕಾಫಿ ಟೀ ಗಳಲ್ಲಿ ಆಸಿಡ್ ಅಂಶ ಇರುವುದರಿಂದ ಅದು ಕಬ್ಬಿಣ ಮತ್ತು ಪ್ರೊಟೀನ್ ಅಂಶಗಳನ್ನ ಒಂದುಗೂಡುವಂತೆ ಮಾಡುತ್ತೆ. ಇನ್ನು ಈ ಅಂಶಗಳು ಒಂದೋಗೋದ್ರಿಂದ ಊಟ ಮತ್ತು ಹಣ್ಣುಗಳಿಂದ ಸಿಗೋ ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಸಿಗೋದಿಲ್ಲ. ಇನ್ನು ನಮ್ಮ ದೇಹದಲ್ಲಿ ಯಾವಾಗ ಕಬ್ಬಿಣದ ಅಂಶ ಕಡಿಮೆಯಾಗುತ್ತೋ ಆಗ ಕೆಂಪು ರ’ಕ್ತ ಕಣಗಳ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ತಲೆ ಸುತ್ತೋದು, ಸುಸ್ತಾಗೋದು, ಕೈ ಕಾಲು ತಣ್ಣಗೆ ಆಗೋದು, ದೇಹಕ್ಕೆ ಹೆಚ್ಚು ಆಯಾಸ ಆಗೋದು ಹಾಗೂ ಅನಿಮಿಯಾ ಸೇರಿದಂತೆ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ.

ಧ’ಮ್ ಹೊಡೆಯೋದು : ಇನ್ನು ಊಟದ ಬಳಿಕ ಸಿ’ಗರೇಟ್ ಸೇ’ದೋದನ್ನೇ ಚಟವಾಗಿ ಮಾಡಿಕೊಂಡಿದ್ದಾರೆ ಬಹುತೇಕರು. ಈ ಚಟ ಎಷ್ಟರ ಮಟ್ಟಿಗೆ ಇರುತ್ತೆ ಎಂದರೆ ಅದರಿಂದ ಅ’ಪಾಯ ಅಂತ ಗೊತ್ತಿದ್ದರೂ ಈ ಚಟವನ್ನ ಬಿಡೋದಕ್ಕೆ ತಯಾರಿಲ್ಲ. ಇದರಿಂದ ನಿಕೋಟಿನ್ ಮೂಲಕ ಕಾರ್ಸಿನೋಜನ್ ಎಂಬ ಅಂಶ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತದೆ. ಇದರಿಂದ ಆಕ್ಸಿಜೆನ್ ಕಡಿಮೆಯಾಗುತ್ತೆ. ಆದ್ರೆ ತಿಂದದ್ದು ಜೀರ್ಣ ಆಗಲು ದೇಹಕ್ಕೆ ಆಕ್ಸಿಜನ್ಅವಶ್ಯಕ. ಇನ್ನು ಊಟದ ಬಳಿಕ ಸೇ’ದೋ ಒಂದು ಸಿ’ಗರೇಟ್ ಬರೋಬ್ಬರಿ ಹತ್ತು ಸಿ’ಗರೇಟ್ ಗಳಿಗೆ ಸಮನಾಗಿರುತ್ತೆ ಎಂದು ಹೇಳಲಾಗಿದೆ. ಇದರಿಂದ ಲಂಗ್ಸ್ ಕ್ಯಾ’ನ್ಸರ್ ಬರೋ ಸಾಧ್ಯತೆ ಹೆಚ್ಚಿದೆ.

ಊಟದ ಬಳಿಕ ಸ್ನಾನ ಮಾಡಿದ್ರೆ : ಊಟವಾದ ತಕ್ಷಣ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾರಣ ನಾವು ಸ್ನಾನ ಮಾಡುವ ಸಮಯದಲ್ಲಿ ನಮ್ಮ ದೇಹದ ರ’ಕ್ತದ ಚಲನೆ ಜಾಸ್ತಿ ಇರುತ್ತದೆ. ಇನ್ನು ಇದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ. ಇನ್ನು ತಿಂದ ಆಹಾರ ಸರಿಯಾಗಿ ಜೀರ್ಣ ಆಗಿಲ್ಲ ಎಂದರೆ ಹೊಟ್ಟೆ ನೋವು ಬರುತ್ತದೆ. ಈ ಕಾರಣದಿಂದಲೇ ಊಟವಾದ ಬಳಿಕ ಸ್ನಾನ ಮಾಡಬಾರದು ಎಂದು ಹೇಳಲಾಗಿದೆ.