Advertisements

ಯೋಧರ ಬಲಿದಾನ ವ್ಯರ್ಥ ಆಗಲು ಬಿಡುವುದಿಲ್ಲ – ನರಿಬುದ್ಧಿ ಚೈನಾಗೆ ಖಡಕ್ ವಾರ್ನಿಂಗ್ ಕೊಟ್ಟ ವಾಯುಸೇನೆಯ ಮುಖ್ಯಸ್ಥರು !

News

ಸ್ನೇಹಿತರೆ, ನಮಗೆಲ್ಲಾ ಗೊತ್ತಿರುವಂತೆ ಚೀನಾ ದೇಶದ ಕುತಂತ್ರದಿಂದಾಗಿ ಗಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇನ್ನು ಫ್ರೀ ಪ್ಲಾನ್ ಮಾಡಿಕೊಂಡಿದ್ದ, ಚೀನಾ ಸೈನಿಕರು ನಮ್ಮ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದಾರೆ.ಇನ್ನು ಗಲ್ವಾನ್ ಬಳಿ ಕಿರಿಕ್ ಮಾಡಿದ್ದ ಚೀನಾ ಈಗ ಪ್ಯಾಂಗಾಂಗ್ ಸರೋವರದ ಬಳಿ ಕೂಡ ತನ್ನ ಕುತಂತ್ರ ಬುದ್ದಿಯನ್ನ ಮುಂದುವರಿಸಿದೆ. ಇನ್ನು ಚೀನಾದ ಈ ಉದ್ಧಟತನಕ್ಕೆ ಭಾರತೀಯ ವಾಯುಸೇನೆಯ ಮುಖ್ಯಸ್ಥರಾಗಿರುವ RKS ಭದೌರಿಯಾ ಚೈನಾಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Advertisements

ನಾವು ಎಲ್ಲದಕ್ಕೂ ತಯಾರಾಗಿದ್ದೇವೆ. ಯಾವುದೇ ಸಂಧರ್ಭದಲ್ಲಿ ಇಂತಹುದೇ ಪರಿಷ್ಟಿತಿಯನ್ನ ಎದುರಿಸಲು ಭಾರತ ಸಿದ್ಧವಿದೆ. ಆದರೆ ಭಾರತ ಚೀನಾ ಜೊತೆ ಯುದ್ಧವನ್ನ ಬಯಸುವುದಿಲ್ಲ. ಶಾಂತಿ ಸ್ಥಾಪನೆ ಮಾಡುವುದು ನಮ್ಮ ಮೊದಲ ಆದ್ಯತೆ. ಹಾಗಾಗಿ ಮೊದಲು ಮಾತುಕತೆ ಮೂಲಕ ಸಮಸ್ಯೆಗಳನ್ನ ಬಗೆಹರಿಸಲು ನಾವು ಪ್ರಯತ್ನ ಪಡೆತ್ತೇವೆ. ಆದರೆ ಇದೆ ಅಂತಿಮವಲ್ಲ ಎಂದಿರುವ ವಾಯುಸೇನಾ ಮುಖ್ಯಸ್ಥರು ಚೀನಾಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಭಾರತ ದಿಟ್ಟ ಹೋರಾಟ ನೀಡಿದೆ. ಇನ್ನು ಗಲ್ವಾನ್ ಕಣಿವೆ ಭಾರತೀಯ ಸೈನಿಕರ ನಿಯಂತ್ರಣದಲ್ಲೇ ಇದೆ. ಇನ್ನು ಅತೀ ಎತ್ತರದ ಪ್ರದೇಶಗಳಲ್ಲೂ ನಮ್ಮ ವಾಯುಸೇನೆ ಕಾರ್ಯಾಚರಣೆ ನಡೆಸಲಿದ್ದು, ಯಾವುದೇ ಸಂಧರ್ಭವನ್ನ ನಮ್ಮ ವಾಯುಸೇನೆ ಎದುರಿಸಲು ಸಿದ್ಧವಿದೆ ಎಂದು ಏರ್ ಚೀಫ್ ಮಾರ್ಶಲ್ ಭದೌರಿಯಾ ಹೇಳಿದ್ದಾರೆ. ಇನ್ನು ಕೆಲವೊಂದು ಸ್ಥಳಗಳಿಗೆ ಹೆಚ್ಚಿನ ಯೋಧರನ್ನ ನಿಯೋಜನೆ ಮಾಡಲಾಗಿದ್ದು, ನಮ್ಮ ಸೈನಿಕರ ಬಲಿದಾನವನ್ನ ವ್ಯರ್ಥಮಾಡಲು ಬಿಡುವುದಿಲ್ಲ ಎಂದು ವಾಯುಸೇನೆ ಮುಖ್ಯಸ್ಥ ಭದೌರಿಯಾ ಹೇಳಿದ್ದಾರೆ.