Advertisements

ಇದೆ ನೋಡಿ ವಿಶ್ವದ ಅತೀ ದೊಡ್ಡ ದೇವಸ್ಥಾನದ ಅಡುಗೆ ಮನೆ.. ಪ್ರತಿ ದಿನ ಇಲ್ಲಿ ಎಷ್ಟು ಜನ ಊಟ ಮಾಡುತ್ತಾರೆ ಗೊತ್ತಾ?

Temples

ನಮಸ್ಕಾರ ಸ್ನೇಹಿತರೆ ದೇವಸ್ಥಾನದಲ್ಲಿ ಪೂಜೆ ಮಾಡಿದಾಗ ಪ್ರಾರ್ಥನೆ ಮಾಡಿದಾಗ ಆಗುವ ಅನುಭವ ಸರ್ಗ ಕ್ಕಿಂತಲೂ ಮಿಗಿಲಾಗಿ ಇರುತ್ತದೆ. ಅದು ಮನಸ್ಸಿಗೂ ದೇಹಕ್ಕೂ ಎಲ್ಲದಕ್ಕೂ ಶಾಂತಿ ಮುದವನ್ನು ನೀಡುತ್ತದೆ. ಹಾಗೆಯೇ ಭಾರತದಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಅಲ್ಲಿ ನೀಡುವ ಅನ್ನಪ್ರಸಾದ ಅಂದರೆ ಊಟವನ್ನು ಬಡಿಸುವ ಅಂತಹ ಪ್ರಸಾದ ಎಲ್ಲಾ ಪ್ರಸಾದಕ್ಕಿಂತಲೂ ಮೇಲಾಗಿ ಇರುತ್ತದೆ. ಅದರ ರುಚಿಯೇ ಬೇರೆಯಾಗಿರುತ್ತದೆ. ಭಾರತದಾದ್ಯಂತ ದೇವಸ್ಥಾನಗಳಲ್ಲಿ ಬಡಿಸಲಾಗುವ ಅಂತಹ ಒಂದು ಪ್ರಸಿದ್ಧ ದೇವಾಲಯಗಳ ಪ್ರಸಾದ ಆ ಪ್ರಸಾದವನ್ನು ತಯಾರಿಸುವ ಅಡುಗೆಮನೆಗಳ ವಿವರ ಹಾಗೂ ಆ ಪ್ರಸಾದವನ್ನು ಎಷ್ಟು ಭಕ್ತರು ಈ ದೇವಸ್ಥಾನಗಳಲ್ಲಿ ಪ್ರತಿನಿತ್ಯ ಪ್ರಸಾದವನ್ನು ಸೇವಿಸುತ್ತಾರೆ ಎನ್ನುವ ಸಂಪೂರ್ಣವಾದ ಮಾಹಿತಿ ನೋಡಿ..

[widget id=”custom_html-3″]

Advertisements


ಅಜ್ಮೀರ್ ಈ ಪುಣ್ಯ ಕ್ಷೇತ್ರಕ್ಕೆ ಎಲ್ಲಾ ಧರ್ಮದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಹರಕೆ ಸಲ್ಲಿಸುತ್ತಾರೆ.
ಹೀಗೆ ಹರಕೆ ಸಲ್ಲಿಸಿದ ಪ್ರತಿಯೊಬ್ಬ ಭಕ್ತಾದಿಗೆ ಯಾವುದೇ ಭೇದಭಾವವಿಲ್ಲದೆ ಅವರಿಗೆ ದೇವರ ಪ್ರಸಾದವನ್ನು ಇಲ್ಲಿ ನೀಡಲಾಗುತ್ತದೆ. ಹೌದು ನಾನು ಹೇಳುತ್ತಿರುವ ಆ ಪುಣ್ಯಕ್ಷೇತ್ರವೇ ರಾಜಸ್ಥಾನದಲ್ಲಿ ಸ್ಥಿತವಾಗಿರುವಂತಹ ಅಜ್ಮೀರ್ ನ ಕ್ವಾಜಾ ಗರೀಬ್ ನವಾಜ್ ದರ್ಗಾ ಇಲ್ಲಿ ತಯಾರಾಗುತ್ತದೆ. ವಿಶ್ವದ ಅತ್ಯಂತ ದೊಡ್ಡ ಪ್ರಸಾದ ಈ ಪ್ರಸಾದವನ್ನು ಎರಡು ದೊಡ್ಡ ಹಂಡೆಗಳಲ್ಲಿ ತಯಾರಿಸಲಾಗುತ್ತದೆ. . ಈ ಪ್ರಸಾದವನ್ನು ಹಂಚಲು ಅಲ್ಲಿನ ಆಡಳಿತ ಮಂಡಳಿಗೆ ಏಣಿಯನ್ನು ಹಾಕಿ ಹಂಡೆಯಲ್ಲಿ ಇಳಿಯ ಬೇಕಾಗುತ್ತದೆ. ಹಂಡೆಯಲ್ಲಿ ಒಂದು ಸಾರಿ ಹತ್ತರಿಂದ ಹನ್ನೆರಡು ಸಾವಿರ ಭಕ್ತಾದಿಗಳಿಗೆ ಊಟವನ್ನು ಅಂದರೆ ಪ್ರಸಾದವನ್ನು ಇಲ್ಲಿ ತಯಾರಿಸಲಾಗುತ್ತದೆ. ಈ ದರ್ಗಾದಲ್ಲಿ ತಯಾರಾಗುವ ಪ್ರಸಾದ ಸಂಪೂರ್ಣ ಶಾಕಾಹಾರಿ ಯಾಗಿರುತ್ತದೆ. ಯಾಕಂದರೆ ಇಲ್ಲಿ ಬರುವ ಭಕ್ತಾದಿಗಳು ಎಲ್ಲ ಧರ್ಮಕ್ಕೆ ಎಲ್ಲ ಜಾತಿಗೆ ಸೇರಿದವರಾಗಿದ್ದಾರೆ. ಈ ಪ್ರಸಾದವನ್ನು ತಯಾರಿಸಲು ಅಕ್ಕಿ ಮೈದಾ ತುಪ್ಪ ಹಾಗೂ ಕೇಸರಿಯನ್ನು ಬಳಸಲಾಗುತ್ತದೆ ಇಲ್ಲಿರುವ ಹಂಡೆಗಳಲ್ಲಿ ಸುಮಾರು 600ರಿಂದ ಹಿಡಿದು 700 ಕೆಜಿ ಅಷ್ಟು ಪ್ರಸಾದ ಒಂದು ಸಾರಿ ತಯಾರಾಗುತ್ತದೆ.

[widget id=”custom_html-3″]

ಹೀಗೆ 24ಗಂಟೆಗಳಲ್ಲಿ ಐದರಿಂದ ಆರು ಬಾರಿ ಈ ಹಂಡೆಗಳಲ್ಲಿ ಪ್ರಸಾದವನ್ನು ತಯಾರಿ ಮಾಡಲಾಗುತ್ತದೆ. ಈ ಹಂಡೆಗಳಲ್ಲಿ ಪ್ರಸಾದವನ್ನು ತಯಾರಿ ಮಾಡಲು ಇಲ್ಲಿ ನೀಲಾಮಿ ಎಂದು ಕೂಗಲಾಗುತ್ತದೆ. ಭಕ್ತಾದಿಗಳು ಲಕ್ಷಾನುಗಟ್ಟಲೆ ದುಡ್ಡನ್ನು ಕೊಟ್ಟು ಹಂಡೆಯ ಪ್ರಸಾದವನ್ನು ತಯಾರಿ ಮಾಡಿಕೊಳ್ಳಲು ಬೇಡಿಕೊಳ್ಳುತ್ತಾರೆ. ಹೀಗೆ ಶ್ರೀಮಂತ ಭಕ್ತಾದಿಗಳು ಅಲ್ಲಿ ಬರುವ ಇನ್ನು ಬೇರೆ ಭಕ್ತಾದಿಗಳಿಗೆ ಊಟ ಬಡಿಸುವ ಪದ್ಧತಿ ಇಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಂಡೆಗಳಲ್ಲಿ ಪ್ರಸಾದವನ್ನು ತಯಾರಿಸಲು ವಾಲೆಂಟರ್ ಆಗಿ ಭಕ್ತಾದಿಗಳೇ ಪಾಲ್ಗೊಳ್ಳುತ್ತಾರೆ. ಈ ಪ್ರಸಾದವನ್ನು ತಯಾರಿಸಲು ಅತಿ ದೊಡ್ಡ ಚಮಚವನ್ನು ಇಲ್ಲಿ ಬಳಸಲಾಗುತ್ತದೆ. ಈ ಚಮಚವನ್ನು ಇಲ್ಲಿ ಬಳಸಲು ಕನಿಷ್ಠಪಕ್ಷ ಎರಡರಿಂದ ಮೂರು ಜನ ಬೇಕಾಗುತ್ತದೆ.ಈ ಪ್ರಸಾದವನ್ನು ತಯಾರಿಸಲು ಇಲ್ಲಿ ಗ್ಯಾಸ್ ನ ಉಪಯೋಗ ನಡೆಯೋದಿಲ್ಲ.. ಬದಲಾಗಿ ನಾಲ್ಕರಿಂದ ಐದು ಕ್ವಿಂಟಾಲ್ ಕಟ್ಟಿಗೆಯನ್ನು ಬಳಸಲಾಗುತ್ತದೆ. ಸ್ನೇಹಿತರೆ ಒಂದು ವೇಳೆ ನೀವು ಅಜ್ಮೀರ್ ಗೆ ಹೋದರೆ ದಯವಿಟ್ಟು ಇಲ್ಲಿನ ಪ್ರಸಾದವನ್ನು ಸ್ವೀಕರಿಸಿಯೇ ಬನ್ನಿ. ಸತ್ಯ ನಿಷ್ಠೆ ಧರ್ಮಕ್ಕೆ ಹೆಸರಾಗಿರುವುದೆ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯವು ಭಾರತದೇಶ ಅಲ್ಲದೆ ವಿದೇಶದಲ್ಲಿಯೂ ಕೂಡ ಪ್ರಖ್ಯಾತಿ ಹೊಂದಿದೆ ಇಲ್ಲಿ ಮಾಡುವ ಅನ್ನಸಂತರ್ಪಣೆ ಕೂಡ ಹೆಸರುವಾಸಿಯಾಗಿದೆ. ದೇವರ ದರ್ಶನವನ್ನು ಪಡೆದುಕೊಳ್ಳಲು ಬರುವ ಭಕ್ತಾದಿಗಳಿಗೆ ಪ್ರಸಾದವಾಗಿ ಅನ್ನವನ್ನು ಇಲ್ಲಿ ನೀಡಲಾಗುತ್ತದೆ. ಅನ್ನವನ್ನು ಪರಬ್ರಹ್ಮ ಸ್ವರೂಪಿ ಎಂದೇ ಕರೆಯಲಾಗುತ್ತದೆ.

[widget id=”custom_html-3″]

ಸ್ವರ್ಣಮಂದಿರ ಅಮೃತ್ ಸಾರ್ ಪಂಜಾಬ್ ಸಿಖ್ ಧರ್ಮದಲ್ಲಿ ಪ್ರಸಾದವನ್ನು ಲಂಗರ್ ಎಂದು ಕರೆಯುತ್ತಾರೆ.. ಸ್ವರ್ಣ ಮಂದಿರದಲ್ಲಿ ನೀಡುವ ಲಂಗರ್ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ನೀವು ಯಾವುದೇ ಗುರುದ್ವಾರಕ್ಕೆ ಹೋದರೆ ನೀವು ಲಂಗರ್ ಅನ್ನು ಪಡೆಯಬಹುದು. ಆದರೆ ಸ್ವರ್ಣ ಮಂದಿರದಲ್ಲಿ ತಯಾರಾಗುವ ಲಂಗರ್ ಅತ್ಯಂತ ವಿಶೇಷ ದಾಗಿದ್ದು ಯಾಕೆಂದರೆ ಪ್ರತಿನಿತ್ಯ ಇಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ಜನ ಈ ಪ್ರಸಾದವನ್ನು ಸೇವಿಸುತ್ತಾರೆ.. ಪ್ರತಿನಿತ್ಯ ಇಲ್ಲಿ ಹತ್ತು ಸಾವಿರ ಕೆಜಿಯಷ್ಟು ಗೋದಿಹಿಟ್ಟನ್ನು ಬಳಸಲಾಗುತ್ತದೆ. ಜೊತೆಗೆ ಮೂರು ಸಾವಿರ ಕೆಜಿ ಎಷ್ಟು ಬೇಳೆಯನ್ನು ಬೇಯಿಸಲಾಗುತ್ತದೆ. ಐದು ಸಾವಿರ ಕೆಜಿ ಅನ್ನವನ್ನು ಇಲ್ಲಿ ತಯಾರಿಸಲಾಗುತ್ತದೆ ಐದುನೂರು ಕೆಜಿ ಬೆಣ್ಣೆ 200 ಕೆಜಿ ದೇಸಿ ತುಪ್ಪ ಬಳಸಿ ಅತ್ಯಂತ ಪೌಷ್ಟಿಕ ಭೋಜನವನ್ನು ಅಂದರೆ ಲಂಗರ್ ಅನ್ನು ಇಲ್ಲಿ ತಯಾರಿ ಮಾಡಲಾಗುತ್ತದೆ. ಈ ಲಂಗರ್ ಅನ್ನು ಸಿಖ್ ಅವರ ಧರ್ಮಗುರು ಗುರುನಾನಕ್ ಅವರ ಹೆಸರಲ್ಲಿ ತಯಾರಿ ಮಾಡಿ ಭಕ್ತರಿಗೆ ಸಮರ್ಪಿಸಲಾಗುತ್ತದೆ. ಈ ಭೋಜನವನ್ನು ತಯಾರಿ ಮಾಡಲು ಸರಿಸುಮಾರು 200 ಸಿಲಿಂಡರ್ ಅನ್ನು ಬಳಸಲಾಗುತ್ತದೆ ಜೊತೆಗೆ ಐದು ಸಾವಿರ ಕೆಜಿ ಅಷ್ಟು ಕಟ್ಟಿಗೆಯನ್ನು ಕೂಡ ಇಲ್ಲಿ ಬಳಸಲಾಗುತ್ತದೆ.

[widget id=”custom_html-3″]

ಇಲ್ಲಿ ಗಮನಿಸಬೇಕಾದಂತಹ ಮುಖ್ಯ ವಿಷಯವೆಂದರೆ ಈ ಅಡುಗೆಯನ್ನು ತಯಾರಿಸಲು ಯಾವ ನಿರ್ದಿಷ್ಟವಾದ ಭಟ್ಟರು ಇಲ್ಲಿ ಇಲ್ಲ.. ತರಕಾರಿಯನ್ನು ಕತ್ತರಿಸಲು ಅಡುಗೆಯನ್ನು ಮಾಡಲು ಪಾತ್ರೆಯನ್ನು ತೊಳೆಯಲು ಎಲ್ಲವೂ ಕೂಡ ಇಲ್ಲಿ ಬರುವ ಭಕ್ತಾದಿಗಳೆ ದೇವರ ಸೇವೆಯೆಂದು ಮಾಡುತ್ತಾರೆ. ಹೀಗೆ ಈ ಲಂಗರ್ ಸ್ವರ್ಣ ಮಂದಿರದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿ ಯಾವ ಜಾತಿ ಭೇದ ಭಾವ ಇಲ್ಲದೆ ರಾಜ್ಯ ದೇಶ ವಿದೇಶಗಳಿಂದ ಭಕ್ತರು ಈ ಸೇವೆಯಲ್ಲಿ ಪಾಲ್ಗೊಂಡು ದೇವರ ಸೇವೆಯನ್ನು ಮಾಡುತ್ತಾರೆ. ದೊಡ್ಡ ಸಿನಿಮಾ ತಾರೆಗಳಿಂದ ಹಿಡಿದು ರಾಜಕೀಯ ವ್ಯಕ್ತಿಗಳು ಬಿಜಿನೆಸ್ ವ್ಯಕ್ತಿಗಳು ಕೂಡ ಈ ಲಂಗರ್ ಅಲ್ಲಿ ತಮ್ಮ ಸೇವೆಯನ್ನು ಕೊಡುತ್ತಾರೆ. ಅಂದಹಾಗೆ ಈ ಲಂಗರ್ ವರ್ಷ 365 ದಿವಸ 24 ಗಂಟೆ ಸತತವಾಗಿ ನಡೆಯುತ್ತಲೇ ಇರುತ್ತದೆ ನೀವು ಲಂಗರ್ ಅನ್ನು ಸೇವಿಸಲು ವರ್ಷದ ಯಾವುದೇ ದಿನ ಯಾವುದೇ ಸಮಯಕ್ಕೂ ಸ್ವರ್ಣ ಮಂದಿರಕ್ಕೆ ಭೇಟಿಕೊಟ್ಟರೆ ನೀವು ಈ ಪ್ರಸಾದವನ್ನು ಪಡೆಯಬಹುದು. ಸ್ನೇಹಿತರೆ ನೀವು ಒಂದು ವೇಳೆ ಅಮೃತ್ ಸಾರ್ ಕ್ಕೆ ಹೋದರೆ ದಯವಿಟ್ಟು ಸ್ವರ್ಣಮಂದಿರ ಬೇಟಿ ಕೊಡಿ ಹಾಗೂ ಅಲ್ಲಿರುವ ಅದ್ಭುತ ಲಂಗರ್ ನ್ನು ಕೂಡ ನೀವು ಸೇವಿಸಿ ಎಂದು ನಾವು ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ..

[widget id=”custom_html-3″]

ಧರ್ಮಸ್ಥಳದಲ್ಲಿ ನೆಲೆಸಿರುವ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಬಂದ ಭಕ್ತಾದಿಗಳು ಹಸಿದು ಹೋಗಬಾರದೆಂದು 1955 ರಿಂದ ಪ್ರತಿದಿನ ಸುಮಾರು 45ರಿಂದ 50 ಸಾವಿರ ಜನರಿಗೆ ಇಲ್ಲಿ ಅನ್ನಸಂತರ್ಪಣೆ ಮಾಡಲಾಗುತ್ತದೆ. ಬಹಳ ವಿಶಾಲವಾಗಿರುವಂತಹ ಈ ಬೋಜರ ಸ್ಥಳದಲ್ಲಿ ದಿನಕ್ಕೆ ಕಡಿಮೆಯೆಂದರೂ 45ರಿಂದ 50 ಸಾವಿರ ಜನ ಊಟ ಮಾಡುತ್ತಾರೆ. ದೀಪೋತ್ಸವ ಸಂದರ್ಭದಲ್ಲಿ ಅಂತೂ ಇಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಈ ಪ್ರಸಾದವನ್ನು ಸ್ವೀಕರಿಸುತ್ತಾರೆ. ಇನ್ನು ಇಲ್ಲಿನ ಅಡುಗೆಯ ಬಗ್ಗೆ ನೀವು ಗಮನಿಸಲೇ ಬೇಕಾದಂತಹ ಕೆಲವು ಅಂಶಗಳಿವೆ ಊಟ ಬಡಿಸುವ ಸಾಮಗ್ರಿಗಳಿಂದ ಹಿಡಿದು ಅಡುಗೆ ಮಾಡುವ ಎಲ್ಲ ಪಾತ್ರೆಗಳು ಕೂಡ ಆಧುನಿಕ ಟೆಕ್ನಾಲಜಿಯನ್ನು ಉಪಯೋಗಿಸುತ್ತವೆ.. ಪ್ರತಿನಿತ್ಯ ಇಲ್ಲಿ ದಿನಕ್ಕೆ ಎಂಟೂವರೆ ಸಾವಿರ ಕೆಜಿ ಅಕ್ಕಿಯನ್ನು ಬಳಸಿ ಊಟವನ್ನು ತಯಾರಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಮೂರು ಸಾವಿರ ಕೇಜಿ ತರಕಾರಿ ಬಳಸಿ ಸಾಂಬಾರ್ ಅನ್ನು ಮಾಡಲಾಗುತ್ತದೆ. ಈ ವಿಶಾಲವಾದ ಭೋಜನ ಸ್ಥಳದಲ್ಲಿ ಸುಮಾರು ಒಂಬತ್ತು ಸಾಲುಗಳಲ್ಲಿ ಅಂದರೆ ಪಂಕ್ತಿಗಳಲ್ಲಿ ಜನರು ಊಟವನ್ನು ಮಾಡಬಹುದು. ಒಂದೊಂದು ಸಾಲುಗಳಲ್ಲೂ ಸಹ ಕಡಿಮೆಯೆಂದರೆ 400ರಿಂದ 500 ಜನ ಊಟ ಮಾಡಬಹುದು. ಧರ್ಮಸ್ಥಳದಲ್ಲಿ ಸಿಗುವಂತಹ ಅನ್ನಪ್ರಸಾದ ದೇಶದಲ್ಲಿ ಯಾವುದೇ ದೇವಸ್ಥಾನದಲ್ಲಿ ಸಿಗುವುದಿಲ್ಲ ಎನ್ನುವ ನಂಬಿಕೆ ಇದೆ.