Advertisements

ಈ ವ್ಯಕ್ತಿಯ ಒಂದು ಸೆಲ್ಪಿಗಾಗಿ ಸಾಲಾಗಿ ನಿಂತಿರುತ್ತಾರೆ ಸುಂದರ ಹುಡುಗಿಯರು.. ಈತ ಯಾರು ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಮುಖ ನೋಡಿ ಮಣೆ ಹಾಕಬೇಡ, ವೇಷವನ್ನು ನೋಡಿ ಟೀಕೆ ಮಾಡಬೇಡ ಅಂತ ದೊಡ್ಡೋರು ಹೇಳಿದಾರೆ. ವ್ಯಕ್ತಿಯೊಬ್ಬನ ಬಾಹ್ಯ ರೂಪ ಹಾಗೂ ವೇಷ ಭೂಷಣ ಅವನ ಭವಿಷ್ಯವನ್ನು ನಿರ್ಧರಿಸೋದಿಲ್ಲ.. ಅಥವಾ ಅವನ ಮೆಲ್ನೋಟ ನಿಜವಾದ ಅವನ ತನವನ್ನ ಪುಷ್ಟಿಕರಿಸೋದಿಲ್ಲ. ವ್ಯಕ್ತಿಯಲ್ಲಿನ ಗುಣ ಸ್ವಭಾವ ಹಾಗೂ ಜಾಣ್ಮೆ ತಕ್ಷಣ ಕಣ್ಣಿಗೆ ಕಾಣುವುದಿಲ್ಲ.. ಆದರೆ ಅವುಗಳೆ ಆತನನ್ನ ಯಶಸ್ಸಿಯಾಗಿ ರೂಪಿಸುತ್ತವೆ ಹಾಗು ನಿರ್ಮಿಸುತ್ತವೆ ಎನ್ನುವುದಕ್ಕೆ ಈ ವ್ಯಕ್ತಿ ಕಾರಣ. ಈಗಿನ ಸಾಮಾಜಿಕ ಜಾಲತಾಣ ಎಂತಹವರನ್ನು ಕೂಡ ಬೆಳಕಿಗೆ ತರುತ್ತದೆ. ಈ ಸೋಷಿಯಲ್ ಮೀಡಿಯಾಗಳಲ್ಲಿ ಯಾರು ಯಾವಾಗ ಬೇಕಾದರೂ ರಾತ್ರೋರಾತ್ರಿ ಸ್ಟಾರ್ ಆಗಬಹುದು.

Advertisements

ಇಂತಹ ಸೋಷಿಯಲ್ ಮೀಡಿಯಾದಿಂದ ಒಬ್ಬ ಪ್ರತಿಭಾವಂತ ವ್ಯಕ್ತಿ ಇಂದು ಮಿಲಿಯನ್ ಗಟ್ಟಲೆ ಸಂಪಾದನೆ ಮಾಡುತ್ತಾ ಖ್ಯಾತ ಸೆಲೆಬ್ರಿಟಿಯಾಗಿದ್ದಾನೆ.. ಇನ್ನೂ ಇತನನ್ನು ನೋಡಿ ಕೆಲವರು ಅಪಹಾಸ್ಯ ಮಾಡಿ ಕೆಣಕಿ ಈತನನ್ನು ವೈ’ರಲ್ ಮಾಡಲಾಗಿತ್ತು. ಈತನ ಹೆಸರು ಅಲೋಮ್.. ಬಾಂಗ್ಲಾದೇಶದ ಪಾಪ್ಯುಲರ್ ಗಾಯಕ ಹಾಗೂ ಸಿನಿಮಾ ನಾಯಕ ನಟ. ಅಲೋಮ್ ಅವರು ಅಷ್ಟೇನೂ ರೂಪವಂತನಲ್ಲ ಆದರೆ ಈತನ ಒಂದೇ ಒಂದು ಪೋಟೊಗಾಗಿ ಹುಡುಗಿಯರು ಕ್ಯೂ ನಲ್ಲಿ ನಿಂತುಕೊಂಡಿರುತ್ತಾರೆ.. ನೋಡಿ ಹೇಗಿದೆ ಇವರ ಹವಾ. ಇನ್ನೂ ಇತ ಯಾರು ಯಾಕಿಷ್ಟು ಪ್ರಸಿದ್ದಿ, ಇವರ ಸದ್ಯದ ಆದಾಯ ಎಷ್ಟು ಅಂತ ಕೇಳಿದರೆ ಒಂದು ಕ್ಷಣ ನೀವೆಲ್ಲಾ ಆಶ್ಚರ್ಯ ಪಡ್ತೀರಾ.

ಈ ವ್ಯಕ್ತಿ ಪಕ್ಕದ ಬಾಂಗ್ಲಾದೇಶದವನು.. 20 ವರ್ಷದ ಈತ ಓರ್ವ ಮಿಲಿನಿಯರ್. ಕಿ’ತ್ತು ತಿನ್ನುವ ಬಡತನವಿದ್ದ ಕಾರಣ ಈತನ ತಂದೆ ಅಲೋಮ್ ಅವರನ್ನು ರಸ್ತೆಯಲ್ಲೇ ಬಿಟ್ಟು ಹೋಗುತ್ತಾರೆ. 10 ವರ್ಷಕ್ಕೆ ಈತ ಬೀದಿಗೆ ಬರುತ್ತಾನೆ ಆಗ ಇವರ ಸಹಾಯಕ್ಕೆ ಬಂದದ್ದು ಅಬ್ದುಲ್ ರಜಾಕ್ ಎಂಬುವ ವ್ಯಕ್ತಿ.. ನಂತರ ಈ ಆಲೋಮ್ ಏನಾದ್ರೂ ಸಾಧನೆ ಮಾಡಲೇಬೆಕು ಎಂದು ಒಂದು ಅಲ್ಬಮ್ ಅನ್ನು ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡ್ತಾನೆ.. ನಂತರ ಈ ಅಲ್ಬಮ್ ಹಾಡು ಸಿಕ್ಕಾಪಟ್ಟೆ ವೈರಲ್ ಹಾಗುತ್ತದೆ. ಇದನ್ನು ನೋಡಿದ ಜನರು ಕೂಡ ತುಂಬಾ ಮೆಚ್ಚಿಕೊಳ್ಳುತ್ತಾರೆ..

ಈಗೆ ಸಮಯ ಕಳೆದಂತೆ ಇವರು ಬಾಂಗ್ಲಾದೇಶದಲ್ಲಿ ದೊಡ್ಡ ಸ್ಟಾರ್ ಆಗುತ್ತಾನೆ.. ಕಷ್ಟದ ದಿನಗಳನ್ನು ಕಳೆದ ಈತ ಈಗ ಸುಮಾರು 500 ಕ್ಕೂ ಹೆಚ್ಚು ಅಲ್ಬಮ್‌ ಗಳಲ್ಲಿ ಅಭಿನಯ ಮಾಡಿದ್ದಾನೆ. ಹಾಗೆ ಬಂಗಾಳಿ ಸಿನಿಮಾಗಳಲ್ಲಿ ನಟನೆಯನ್ನು ಕೂಡ ಮಾಡಿದ್ದಾನೆ.. ಇನ್ನೂ ಯಾವುದೇ ದೊಡ್ಡ ಸ್ಟಾರ್ ನಟನಿಗೂ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಆಲೋಮ್ ಅವರು 2 ಕೋಟಿ ಸಂಪಾದನೆ ಮಾಡುತ್ತಾರಂತೆ. ಇನ್ನೂ ಈತನಿಗೆ ಒಂದು ಬಿರುದು ಕೂಡ ಕೊಟ್ಟಿದ್ದಾರೆ..

ಹೌದು ಬಾಂಗ್ಲಾದೇಶದಲ್ಲಿ ಕಿಂಗ್ ಆಫ್ ಎನ್ನುವ ರೊಮ್ಯಾನ್ಸ್ ಮೆಬ ಎಂಬ ಬಿರುದನ್ನು ಕೊಟ್ಟು ಸನ್ಮಾನ ಮಾಡಿದ್ದಾರೆ. ಇನ್ನೂ ಇತನ ಸೆಲ್ಪಿಗಾಗಿ ಹುಡುಗಿಯರು ಹುಡುಕಿಕೊಂಡು ಬಂದು ಸಾಲಾಗಿ ನಿಂತಿರುತ್ತಾರೆ ಯಾಕೆಂದರೆ ಇವರ ಅಲ್ಬಮ್ ಸಾಂಗ್ ಅಷ್ಟರ ಮಟ್ಟಿಗೆ ಅವರು ಇಷ್ಟಪಡುತ್ತಾರೆ.. ಸೌಂದರ್ಯ ಮುಖ್ಯ ಅಲ್ಲಾ ಪ್ರತಿಬೆ ಅನ್ನೊದು ಇದ್ದರೆ ಎಲ್ಲಾನು ಸಹ ನಮ್ಮನ್ನು ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ಅಲೋಮ್ ಅವರೇ ಒಂದು ನೈಜ ಉದಾಹರಣೆ.