Advertisements

ರೋಡ್ ಗಳಲ್ಲಿನ ಮೈಲುಗಲ್ಲು ಬಣ್ಣ ಈ ರೀತಿ ಯಾಕಿರುತ್ತೆ, ಇದರ ಅರ್ಥ ಏನು ಗೊತ್ತಾ?

Kannada Mahiti

ನೀವು ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆಯ ಬದಿಯಲ್ಲಿ ಹಾಕಿರುವ ಮೈಲ್‌ಸ್ಟೋನ್‌ಗಳನ್ನು ಗಮನಿಸಿರುತ್ತೀರಿ ಅಂತ ಭಾವಿಸ್ತೇವೆ. ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಗ್ರಾಮಗಳ ನಡುವಣ ಸಂಪರ್ಕ ಕಲ್ಪಿಸುವ ರಸ್ತೆಯ ಮೈಲ್‌ಸ್ಟೋನ್ಸ್ ಹಾಗೂ ಜಿಲ್ಲೆಯ ನಡುವಣ, ರಾಜ್ಯಗಳ ನಡುವಣ ಸಂಪರ್ಕ ಕಲ್ಪಿಸುವ ಮೈಲಿಗಲ್ಲುಗಳು ಒಂದೊಂದು ರೀತಿಯದ್ದಾಗಿರುತ್ತದೆ. ಒಂದು ಹಳದಿ ಮತ್ತು ಬಿಳಿ ಬಣ್ಣದ ಮೈಲಿಗಲ್ಲಾದರೆ, ಇನ್ನೊಂದು ಹಸಿರು ಮತ್ತು ಬಿಳಿ, ಸಂಪೂರ್ಣ ಬಿಳಿ ಅಥವಾ ಕಪ್ಪು ಹಾಗೂ ಬಿಳಿ ಮಿಶ್ರಿತ ಮೈಲಿಗಲ್ಲು ಇರುತ್ತದೆ. ಹಾಗಾದ್ರೆ ಜಿಲ್ಲೆಗಳಿಂದ ರಾಜ್ಯಕ್ಕೆ ಮೈಲಿಗಲ್ಲುಗಳು ಯಾಕೆ ಬದಲಾಗುತ್ತಿವೆ? ಯಾಕೆ ಒಂದೊಂದಕ್ಕೆ ಒಂದೊಂದು ಬಣ್ಣ ಇಟ್ಟಿದ್ದಾರೆ ವಿಸ್ತಾರವಾಗಿ ಹೇಳ್ತೀವಿ ಕೇಳಿ.

Advertisements

ನೀವು ಹೈವೆಗಳಲ್ಲಿ ಗಾಡಿಗಳಲ್ಲಿ ಹೋಗುತ್ತಿರುವಾಗ ಹಳದಿ ಮತ್ತು ಬಿಳಿ ಬಣ್ಣದ ಮೈಲ್‌ಸ್ಟೋನ್ ಕಂಡರೆ ಅದು ರಾಷ್ಟ್ರೀಯ ಹೆದ್ದಾರಿಯ ಸಂಕೇತ ಅಂತ ಅರ್ಥ, ಉದಾಹರಣೆಗೆ ಎನ್‌ಹೆಚ್ 17 ಈ ರೀತಿ ಹಾಕಿರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಅಂದರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಾದು ಹೋಗುವ ರಸ್ತೆ ಎಂದರ್ಥ. ಇನ್ನು ಈ ಹಳದಿ ಹಾಗೂ ಬಿಳಿ ಬಣ್ಣ ಮಿಶ್ರಿತ ಮೈಲ್‌ಸ್ಟೋನ್‌ನ ಸಂಪೂರ್ಣ ಖರ್ಚುವೆಚ್ಚ. ಕೇಂದ್ರಸರ್ಕಾರದ್ದಾಗಿರುತ್ತದೆ, ಈ ರಸ್ತೆಗಳ ರಿಪೇರಿ, ಪೂರ್ತಿ ವೆಚ್ಚವನ್ನು ಕೇಂದ್ರಸರ್ಕಾರವೇ ಭರಿಸುತ್ತದೆ. ಇನ್ನು ಹಸಿರು ಮತ್ತು ಬಿಳಿ ಬಣ್ಣದ ಮೈಲ್‌ಸ್ಟೋನ್ಸ್ನ್ನು ನೀವು ನೋಡಿರಬಹುದು ಹಾಗಾದ್ರೆ ಅದು ಏನು ಸೂಚಿಸುತ್ತದೆ ಅಂತ ಕೇಳಿದ್ರೆ, ಅದು ರಾಜ್ಯ ಹೆದ್ದಾರಿಯನ್ನು ಸೂಚಿಸುತ್ತದೆ.

ಕೆಲವು ನಗರ, ಸಿಟಿಗಳಿಗೆ ಸಂಪರ್ಕ ಕಲ್ಪಿಸುತ್ತದೆ, ಮೈಸೂರು ಭಾಗದಲ್ಲಿ ನೀವು ಈ ರೀತಿಯ ಮೈಲ್‌ಸ್ಟೋನ್ ಹೆಚ್ಚು ಕಾಣಬಹುದು, ಇನ್ನು ಈ ಹಸಿರು ಮತ್ತು ಬಿಳಿ ಮಿಶ್ರಿತ ಮೈಲ್‌ಸ್ಟೋನ್ಸ್ನ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಹಾಗೆಯೇ ನೀವು ಸಂಪೂರ್ಣವಾಗಿ ಬಿಳಿ, ಅಥವಾ ಬಿಳಿ ಮತ್ತು ಕಪ್ಪು ಇರುವಂತಹ ಮೈಲಿಗಲ್ಲುಗಳನ್ನು ನೋಡಿರಬಹುದು ಹೆಚ್ಚಾಗಿ ಸಂಪೂರ್ಣ ಬಿಳಿ ಇರುವಂತಹ ಮೈಲಿಗಲ್ಲುಗಳನ್ನು ಕಂಡಿರಬಹುದು, ಈ ಮೈಲಿಗಲ್ಲು ಏನನ್ನು ಸೂಚಿಸುತ್ತದೆ ಅಂತ ಕೇಳಿದ್ರೆ, ಇವು ಜಿಲ್ಲೆಯ ರಸ್ತೆಯನ್ನು ಸೂಚಿಸುತ್ತದೆ. ಇದರ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸುತ್ತದೆ.

2ಸಾವಿರನೇ ಇಸವಿಯ ಇತ್ತೀಚಿಗೆ ಓರೆಂಜ್ ಹಾಗೂ ಬಿಳಿ ಬಣ್ಣ ಇರುವಂತಹ ಮೈಲಿಗಲ್ಲುಗಳನ್ನು ಗ್ರಾಮೀಣ ಭಾಗದಲ್ಲಿ ನೀವು ನೋಡಿರಬಹುದು. ಈ ಮೈಲಿಗಲ್ಲುಗಳನ್ನು ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದೆ, ಈ ಯೋಜನೆಯ ಅನ್ವಯ ಪ್ರತೀ ಹಳ್ಳಿ ಹಳ್ಳಿಗೂ ಕೂಡ ರಸ್ತೆ ನಿರ್ಮಿಸುವ ಯೋಜನೆಯಿತ್ತು, ಈ ಹಿನ್ನಲೆ ಪ್ರತೀ ಗ್ರಾಮಗಳಿಗೂ ರಸ್ತೆ ಕಲ್ಪಿಸುವ ಜವಬ್ದಾರಿಯನ್ನು ಗ್ರಾಮ ಪಂಚಾಯತ್‌ಗಳ ಹೆಗಲಿಗೆ ವಹಿಸಲಾಗಿತ್ತು. ರಸ್ತೆ ನಿರ್ಮಾಣ, ರಸ್ತೆಗೆ ತಗಲುವ ವೆಚ್ಚ, ರಸ್ತೆ ರಿಪೇರಿ ಪ್ರತಿಯೊಂದು ಕೂಡ ಗ್ರಾಮ ಪಂಚಾಯತಿಯೇ ನಿರ್ವಹಿಸುತ್ತಿತ್ತು. ಇದಿಷ್ಟು ನಮ್ಮಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಮೈಲ್ ಸ್ಟೋನ್ ಗಳ ಸಂಕ್ಷಿಪ್ತ ಚಿತ್ರಣ, ಎಷ್ಟೋ ಸಲ ನಾವೀ ಮೈಲಿಗಲ್ಲನ್ನು ನೋಡಿರ‍್ತೇವೆ, ಆದ್ರೆ ಅವುಗಳಲ್ಲಿ ಒಂದೆರೆಡರ ಬಗ್ಗೆ ಬಹುತೇಕರಿಗೆ ತಿಳಿದಿರುತ್ತದಷ್ಟೇ ಅಲ್ಲವೇ..