Advertisements

ವಿಸ್ಮಯಗಳಿಂದ ಕೂಡಿರುವ 400 ವರ್ಷಗಳ ಹಳೆಯ ಶಿವ ದೇಗುಲ ! ನಂದಿ ಬಾಯಲ್ಲಿ ಬರುವ ನೀರಿನಲ್ಲಿದೆ ರೋಗನಿರೋಧಕ ಶಕ್ತಿ..

Temples

ನಂದಿ ತೀರ್ಥ ಎಂದು ಕರೆಯಲಾಗುವ ಶ್ರೀ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ದೇವಸ್ಥಾನ ಭಾರತದ ವಿಸ್ಮಯ ಮೂಡಿಸುವ ದೇವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿರುವ ನಂದಿ ಮೇಲೆ ನೀರು ಬೀಳುವುದು ಮತ್ತೆ ಅದರ ಮುಂದೆ ಕಲ್ಯಾಣಿ ಇರುವುದು ಈ ದೇವಸ್ಥಾನದ ವಿಶೇಷವಾಗಿದೆ. ಹಲವಾರು ವಿಸ್ಮಯಗಳನ್ನ ಒಳಗೊಂಡಿರುವ ಈ ದೇಗುಲ ಬೆಂಗಳೂರಿನ ಮಲ್ಲೇಶ್ವರಂನ 15ನೇ ವ್ಯಾಪ್ತಿಯಲ್ಲಿದ್ದು, ಗಂಗಮ್ಮ ದೇಗುಲದ ಮುಂದೆ, ಕಾಡು ಮಲ್ಲೇಶ್ವರ ದೇವಸ್ಥಾನದ ಎದುರುಗಡೆ ಇದೆ.

Advertisements

ಕಾಡು ಮಲ್ಲೇಶ್ವರ ದೇವಸ್ಥಾನದ ಎದುರುಗಡೆ ಇದ್ದ ಖಾಲಿ ಜಾಗದಲ್ಲಿ 1997ರಲ್ಲಿ ಕಾಮಗಾರಿಯೊಂದರ ಕೆಲಸ ಮಾಡುತ್ತಿದ್ದ ವೇಳೆ ದೊಡ್ಡದಾದ ಮಣ್ಣಿನ ದಿಬ್ಬವೊಂದು ಕಂಡುಬಂದಿದ್ದು,ಕೆಲಸ ಮುಂದುವರಿಸಿದಾಗ ಅಲ್ಲಿ ದೇವಸ್ಥಾನ ಇರುವುದು ಕೆಲಸಗಾರರಿಗೆ ಕಂಡುಬಂದಿದೆ.ಕೆಲಸಗಾರರು ಇನ್ನು ಆಳವಾಗಿ ಅಗೆದಾಗ ದೊಡ್ಡದಾದ ದೇವಸ್ಥಾನ ಅಲ್ಲಿರುವುದು ಘೋಚರವಾಗಿದೆ.ಬಳಿಕ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡೆಸಿದ ಸಂಶೋಧನೆಯಿಂದ ಕಲ್ಲಿನ ಮೆಟ್ಟಿಲುಗಳಿಂದ ಕುಡಿದ ನೀರಿನ ಕಲ್ಯಾಣಿ ಹಾಗೂ ಕಂಬಗಳಿಂದ ಕೂಡಿದ ಮಂಟಪ ಬೆಳಕಿಗೆ ಬಂದಿದೆ.

ಕೆಲ ಮಾಹಿತಿಗಳ ಪ್ರಕಾರ ಈ ದೇವಸ್ಥಾನ 400 ವರ್ಷಗಳ ಹಳೆಯದು ಎಂದು ಹೇಳಿದ್ರೆ, ಮತ್ತೆ ಕೆಲ ಮಾಹಿತಿಗಳ ಪ್ರಕಾರ 7000 ವರ್ಷಗಳ ಹಳೆಯದು ಎಂದು ಹೇಳಲಾಗಿದೆ.ಇನ್ನು ಯಾವಾಗಲು ನಂದಿಯ ಬಾಯಿಯಿಂದ ಬರುತ್ತಿರುವ ನೀರು, ಶಿವಲಿಂಗದ ಮೇಲೆ ಬೀಳುತ್ತಿದ್ದು, ಆ ನೀರು ಎಲ್ಲಿಂದ ಬರುತ್ತಿದೆ ಎಂದು ಇಲ್ಲಿಯವರೆಗೂ ಯಾರಿಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನದಿ ವಿಗ್ರಹದ ಬಾಯಿಯನ್ನ ಕ್ಲೀನ್ ಮಾಡಿದ ಸಂಧರ್ಭದಲ್ಲಿ ನಂದಿಯ ಬಾಯಿಯಿಂದ ಸಣ್ಣದಾಗಿ ನೀರು ಕಂಟಿನ್ಯೂ ಆಗಿ ಬರಲು ಶುರುವಾಗಿದೆ.

ಬಳಿಕ ನಂದಿಯ ಮುಂದಿರುವ ನೆಲವನ್ನ ಕ್ಲೀನ್ ಮಾಡಿದಾಗ ಅಲ್ಲಿ ಶಿವಲಿಂಗ ಕಂಡುಬಂದಿದ್ದು,ನಂದಿ ಬಾಯಿಯಿಂದ ನೇರವಾಗಿ ಶಿವಲಿಂಗದ ಮೇಲೆ ಬೀಳುವ ನೀರು ದೇಗುಲದ ಮಧ್ಯದಲ್ಲಿರುವ ಕಲ್ಯಾಣಿಗೆ ಸೇರುವ ವಿಸ್ಮಯ ನೋಡಬಹುದಾಗಿದೆ.ಆದರೆ ನೀರು ಎಲ್ಲಿಂದ ಬರುತ್ತಿದೆ ಎಂದು ಯಾರಿಗೂ ಗೊತ್ತಿಲ್ಲವಾದರೂ,ವೃಷಭಾವತಿ ನದಿಯ ನೀರು ಎಂದು ಹೇಳಲಾಗಿದೆ. ಇನ್ನು ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಗೌತಮ ಮಹರ್ಷಿಗಳ ಮಾತಿನಂತೆ ವೃಷಭಾವತಿ ನದಿಯ ನೀರು ವರ್ಷವೆಲ್ಲಾ ನಂದಿಯ ಬಾಯಿಯಲ್ಲಿ ಬರುತ್ತಿರುತ್ತದೆ ಎಂಬ ನಂಬಿಕೆ ಇದೆ.

ಇನ್ನು ಈ ದೇಗುಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ನಂದಿಯಿಂದ ಬರುವ ನೀರನ್ನ ತೀರ್ಥವೆಂದು, ಇದರಲ್ಲಿ ಹಲವಾರು ರೋಗಗಳನ್ನ ನಿವಾರಿಸುವ ಶಕ್ತಿ ಇದೆಯೆಂದು ಹೇಳಲಾಗುತ್ತದೆ.ಇನ್ನು ಭಕ್ತರು ಹಲವಾರು ಶುಭಕಾರ್ಯಗಳಿಗೆ ಉಪಯೋಗಿಸಲು ನಂದಿಯ ತೀರ್ಥವನ್ನ ಮನೆಗೆ ತೆಗೆದುಕೊಂಡು ಹೋಗುತ್ತಾರೆ.ನಿಮಗೂ ಸಮಯ ಇದ್ದಾರೆ ಈ ವಿಸ್ಮಯದ ದೇವಸ್ಥಾನಕ್ಕೆ ಒಮ್ಮೆಯಾದರೂ ಹೋಗಿಬನ್ನಿ..